Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
ಜಾರ್ಖಂಡ್ ವಿಧಾನಸಭಾ ಚುನಾವಣೆ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಆರೋಪ, ವಕ್ಫ್ ಕಾಯ್ದೆ ಬಗ್ಗೆ ಹೇಳಿದ್ದೇನು?
Team Udayavani, Nov 12, 2024, 9:55 PM IST
ರಾಂಚಿ: ವಕ್ಫ್ ಮಂಡಳಿ ಕರ್ನಾಟಕದಲ್ಲಿನ ದೇವಾಲಯ, ರೈತರು, ಗ್ರಾಮಸ್ಥರ ಹಾಗೂ ಮತ್ತಿತರರ ಭೂಮಿಯನ್ನು ಕಬಳಿಸಿದೆ ಎಂದು ಆರೋಪಿಸಿ, ಈಗ ಈ ಬೋರ್ಡ್ಗೆ ಹಾಗೂ ಕಾಯ್ದೆಗೆ ತಿದ್ದುಪಡಿ ಮಾಡುವ ಸಮಯವೂ ಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜಾರ್ಖಂಡ್ನ ಬಾಘಮಾರಾದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿ, “ಭೂಮಿಯನ್ನು ಕಬಳಿಸುವುದು ವಕ್ಫ್ ಮಂಡಳಿಗೆ ಅಭ್ಯಾಸವಾಗಿದೆ. ಕರ್ನಾಟಕದಲ್ಲಿ ದೇವಾಲಯದ ಭೂಮಿ, ರೈತರ ಕೃಷಿ ಭೂಮಿ, ಗ್ರಾಮಸ್ಥರ ಭೂಮಿಯ ವಕ್ಫ್ ಮಂಡಳಿ ವಶಪಡಿಸಿಕೊಂಡಿದೆ. ಹೀಗಿದ್ದಾಗ ವಕ್ಫ್ ಮಂಡಳಿಯಲ್ಲಿ ಬದಲಾವಣೆ ಆಗಬೇಕೇ? ಬೇಡವೇ ನೀವೇ ಹೇಳಿ ಎಂದು ನೆರೆದಿದ್ದ ಜನರ ಪ್ರಶ್ನಿಸಿದರು.
ರಾಹುಲ್ ಬಾಬು (ವಿಪಕ್ಷ ನಾಯಕ ರಾಹುಲ್ ಗಾಂಧಿ), ಹೇಮಂತ್ ಬಾಬು(ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್) ಇದನ್ನು ವಿರೋಧಿಸುತ್ತಾರೆ. ಅವರೆಲ್ಲರೂ ವಿರೋಧಿಸುತ್ತಲೇ ಇರಲಿ, ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಬಿಜೆಪಿಯು ಅಂಗೀಕರಿಸಲಿದೆ. ನಮ್ಮನ್ನು ಯಾರೂ ತಡೆಯಲಾಗದು’ ಎಂದು ಹೇಳಿದ್ದಾರೆ.
ಯುಸಿಸಿ ಜಾರಿ ತಡೆ ಸಾಧ್ಯವಿಲ್ಲ:
ಜಾರ್ಖಂಡ್ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿ ಪಕ್ಷಗಳು ಅಕ್ರಮ ವಲಸಿಗರ ವೋಟ್ ಬ್ಯಾಂಕ್ ಆಗಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರ ಮತ್ತೆ ಬಾಂಗ್ಲಾದೇಶಕ್ಕೆ ಕಳಿಸುವ ವ್ಯವಸ್ಥೆ ಮಾಡುತ್ತೇವೆ. ಯಾರು ಕೂಡ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ತಡೆಯಲು ಸಾಧ್ಯವಿಲ್ಲ. ಜಾರ್ಖಂಡ್ಗೆ ಬರುವ ವಲಸಿಗರನ್ನೂ ತಡೆಯಲಾಗುವುದು. ಜೆಎಂಎಂ ಹಾಗೂ ಕಾಂಗ್ರೆಸ್ನ ರಾಹುಲ್ ಗಾಂಧಿ ಜಾತಿ ಆಧಾರದಲ್ಲಿ ದೇಶವನ್ನು ವಿಭಜಿಸುತ್ತಿದೆ. ಆದರೆ ನರೇಂದ್ರ ಮೋದಿಯವರು ಬಡವರು, ರೈತರು, ಯುವಕರು ಹಾಗೂ ಮಹಿಳೆಯರ, ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.