Ranji: 2023-24 “ಸಿ” ವಿಭಾಗದಲ್ಲಿ ಕರ್ನಾಟಕ
Team Udayavani, Jun 20, 2023, 6:14 AM IST
ಹೊಸದಿಲ್ಲಿ: ಭಾರತದ 2023-24ನೇ ಸಾಲಿನ “ರಣಜಿ ಟ್ರೋಫಿ’ ಕ್ರಿಕೆಟ್ ಪಂದ್ಯಾವಳಿ ಜನವರಿ 5ರಿಂದ ಮಾರ್ಚ್ 14ರ ತನಕ ಒಟ್ಟು 70 ದಿನಗಳ ಕಾಲ ನಡೆಯಲಿದೆ.
ತಂಡಗಳನ್ನು 5 ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ 4 “ಎಲೈಟ್’ ವಿಭಾಗಗಳಿದ್ದರೆ, ಒಂದು ಪ್ಲೇಟ್ ವಿಭಾಗವಾಗಿದೆ. ಕರ್ನಾಟಕ “ಸಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ದಕ್ಷಿಣ ವಲಯದ ಮತ್ತೂಂದು ಪ್ರಮುಖ ತಂಡವಾದ ತಮಿಳುನಾಡು ಕೂಡ ಇದೇ ವಿಭಾಗದಲ್ಲಿದೆ. ಫೆ. 19ರ ತನಕ ಲೀಗ್ ಪಂದ್ಯಗಳು ನಡೆಯಲಿದ್ದು, ಫೆ. 23ರಂದು ನಾಕೌಟ್ ಹಣಾಹಣಿ ಮೊದಲ್ಗೊಳ್ಳಲಿದೆ.
4 ಎಲೈಟ್ ವಿಭಾಗಗಳಲ್ಲಿ ಮೊದ ಲೆರಡು ಸ್ಥಾನ ಸಂಪಾದಿಸಿದ ತಂಡ ಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ.
ಈ ಸಲದ ವಿಶೇಷವೆಂದರೆ, ದೇಶಿ ಕ್ರಿಕೆಟ್ ಪಂದ್ಯಾವಳಿಗಳ ಚಾಂಪಿಯನ್ ತಂಡಗಳ ಬಹುಮಾನ ಮೊತ್ತವನ್ನು ಬಿಸಿಸಿಐ ದೊಡ್ಡ ಮಟ್ಟದಲ್ಲಿ ಹೆಚ್ಚಿಸಿದ್ದು. ಅದರಂತೆ ರಣಜಿ ಟ್ರೋಫಿ ವಿಜೇತ ತಂಡ 2 ಕೋಟಿ ರೂ. ಬದಲು 5 ಕೋಟಿ ರೂ. ಮೊತ್ತವನ್ನು ಗಳಿಸಲಿದೆ.
ಎಲೈಟ್ “ಎ’ ವಿಭಾಗ: ಸೌರಾಷ್ಟ್ರ, ಜಾರ್ಖಂಡ್, ಮಹಾರಾಷ್ಟ್ರ, ವಿದರ್ಭ, ರಾಜಸ್ಥಾನ, ಹರ್ಯಾಣ, ಮಣಿಪುರ.
ಎಲೈಟ್ “ಬಿ’ ವಿಭಾಗ: ಬಂಗಾಲ, ಆಂಧ್ರಪ್ರದೇಶ, ಮುಂಬಯಿ, ಕೇರಳ, ಛತ್ತೀಸ್‌ಗಢ, ಉತ್ತರಪ್ರದೇಶ, ಆಸ್ಸಾಂ, ಬಿಹಾರ.
ಎಲೈಟ್ “ಸಿ’ ವಿಭಾಗ: ಕರ್ನಾಟಕ, ಪಂಜಾಬ್, ರೈಲ್ವೇಸ್, ತಮಿಳುನಾಡು, ಗೋವಾ, ಗುಜರಾತ್, ತ್ರಿಪುರ, ಚಂಡೀಗಢ.
ಎಲೈಟ್ “ಡಿ’ ವಿಭಾಗ: ಮಧ್ಯ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಬರೋಡ, ದಿಲ್ಲಿ, ಒಡಿಶಾ, ಪುದುಚೇರಿ, ಜಮ್ಮು ಮತ್ತು ಕಾಶ್ಮೀರ.
ಪ್ಲೇಟ್ ವಿಭಾಗ: ನಾಗಾಲ್ಯಾಂಡ್, ಹೈದರಾಬಾದ್, ಮೇಘಾಲಯ, ಸಿಕ್ಕಿಂ, ಮಿಜೋರಾಂ, ಅರುಣಾ ಚಲಪ್ರದೇಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.