ಮಾಜಾಳಿಯಲ್ಲಿ ಅಪರೂಪದ ಏಡಿ ಪತ್ತೆ
ಕಡಲ ವಿಜ್ಞಾನಿಗಳಲ್ಲಿ ಅಚ್ಚರಿ, ದೂರದರ್ಶಕ ಯಂತ್ರದ ಸ್ವರೂಪದ ಕಣ್ಣನ್ನು ಹೊಂದಿದೆ
Team Udayavani, May 22, 2022, 11:42 AM IST
ಕಾರವಾರ: ಮಾಜಾಳಿ ಕಡಲತೀರದಲ್ಲಿ ಉದ್ದ ಕಣ್ಣಿನ ಈಜುವ ಏಡಿಯೊಂದು ಪತ್ತೆಯಾಗಿದ್ದು, ಇದು ಕಡಲ ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅರಬ್ಬೀ ಸಮುದ್ರದಲ್ಲಿ ಈಚಿನ ವರ್ಷಗಳಲ್ಲಿ ಈ ಮಾದರಿಯ ಏಡಿ ತಳಿ ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಕಡಲ ಜೀವಶಾಸ್ತ್ರ ವಿಭಾಗದ ಉಪನ್ಯಾಸಕರು ಹೇಳಿದ್ದಾರೆ.
ಮಾಜಾಳಿಯ ಮೀನುಗಾರ ಧನೇಶ್ ಸೈಲ್ ಮೀನುಗಾರಿಕೆಗೆ ಹೋದಾಗ ಅವರ ಬಲೆಗೆ ಹೊಸ ಸ್ವರೂಪದ, ಅಪರೂಪದ ಏಡಿ ಸಿಕ್ಕಿದೆ.
ಅಸಾನಿ ಚಂಡಮಾರುತದ ಪರಿಣಾಮ ಮೀನುಗಾರಿಕೆ ಇಲ್ಲವಾಗಿದೆ. ದೋಣಿಗಳು ಬಂದರಲ್ಲಿ ಲಂಗುರ ಹಾಕಿವೆ. ಅಲ್ಲದೇ ಜೂನ್, ಜುಲೈ ಎರಡು ತಿಂಗಳು ಮೀನುಗಾರಿಕೆಗೆ ನಿಷೇಧ ಕೂಡ ಹೇರಲಾಗುತ್ತದೆ. ಚಂಡಮಾರುತದ ಪರಿಣಾಮ ಮಳೆ ಪ್ರಾರಂಭ ಆಗಿರುವುದರಿಂದ ಮೀನುಗಾರಿಕೆ ಕೂಡ ಸ್ತಬ್ಧವಾಗಿದೆ.
ಕಾರವಾರ, ಮಾಜಾಳಿ ಕಡಲತೀರದಲ್ಲಿ ಸಾಂಪ್ರದಾಯಿಕವಾಗಿ ಸಣ್ಣ ಸಣ್ಣ ದೋಣಿಗಳು ಹವಾಮಾನ ನೋಡಿಕೊಂಡು ಮೀನುಗಾರಿಕೆ ಮಾಡುವುದು ಸಹಜ. ಈ ಸಂದರ್ಭದಲ್ಲಿ ಧನೇಶ್ ಸೈಲ್‌ಗೆ ಈ ಏಡಿ ಸಿಕ್ಕಿದ್ದು, ವಿಚಿತ್ರವಾಗಿ ಕಂಡ ಕಾರಣ ಕಾರವಾರದ ಕಡಲಜೀವ ವಿಜ್ಞಾನಿಗಳಿಗೆ ಈ ಬಗ್ಗೆ ತಿಳಿಸಿದ್ದಾರೆ.
ಕಡಲ ಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ| ಶಿವಕುಮಾರ್ ಹರಗಿ ಏಡಿಯ ತಳಿಯ ಕುರಿತಾಗಿ ಮಾಧ್ಯಮಗಳಿಗೆ ಕೆಲ ಮಾಹಿತಿ ಹಂಚಿಕೊಂಡರು. ತನ್ನ ಶರೀರದ ಗಾತ್ರದಷ್ಟೇ ಉದ್ದವಾದ ಕಣ್ಣನ್ನು ಹೊಂದಿರುವ ಈ ಏಡಿಗೆ ಜಪಾನ್ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಈ ಏಡಿಗಳನ್ನು ಅಲ್ಲಿ ಆಹಾರಕ್ಕಾಗಿ ಬಳಸುವ ಕಾರಣ ಬಹು ಮೌಲ್ಯವುಳ್ಳದ್ದೂ ಆಗಿದೆ. ಉದ್ದನೆಯ ಕಣ್ಣಿನ ಜೊತೆಗೆ ಈಜುವ ಏಡಿಯಾಗಿರುವುದು ವಿಶೇಷವಾಗಿದೆ.
ಏಡಿ ಬಹಳ ಅಪರೂಪ ಹಾಗೂ ವಿಶೇಷತೆಯಿಂದ ಕೂಡಿದೆ. ಉಷ್ಣವಲಯ, ಸಮಶೀತೋಷ್ಣವಲಯದ ಸಾಗರದಲ್ಲಿ ಇವು ಕಂಡು ಬರುತ್ತವೆ. ಕೆಂಪು ಸಮುದ್ರ, ಹವಾಯಿ ದ್ವೀಪ, ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಏಷ್ಯಾ ದ್ವೀಪ ರಾಷ್ಟ್ರಗಳಲ್ಲಿ ಅತೀ ಹೆಚ್ಚಾಗಿ ಇವು ದೊರೆಯುತ್ತವೆ. ಭಾರತದ ಪೂರ್ವ ಕರಾವಳಿಯಲ್ಲೂ ಇವು ಸಿಕ್ಕ ದಾಖಲೆಗಳಿವೆ. ಆದರೆ ಪಶ್ಚಿಮ ಕರಾವಳಿಯಲ್ಲಿ ಬಹಳ ಅಪರೂಪ. ಅನೇಕ ವರ್ಷಗಳ ಹಿಂದೆ ಕರ್ನಾಟಕದ ಕರಾವಳಿಯಲ್ಲಿ ಈ ಪ್ರಕಾರದ ಏಡಿ ಪತ್ತೆಯಾಗಿತ್ತು ಎಂದು ಕಡಲಜೀವ ಶಾಸ್ತ್ರ ವಿಭಾಗದ ಉಪನ್ಯಾಸಕ ಡಾ| ಶಿವಕುಮಾರ್ ಹರಗಿ ಹೇಳಿದರು.
ಈಚಿನ ವರ್ಷಗಳಲ್ಲಿ ಈ ಮಾದರಿಯ ಏಡಿ ಕಾಣಿಸಿಕೊಂಡಿರಲಿಲ್ಲ. ಈಗ ಹೊಸ ತಳಿ ಪತ್ತೆಯಾಗಿದೆ ಎಂದರು. ಏಡಿಯ ಮೈಬಣ್ಣ ಬೂದು ಹಸಿರು ಇರುತ್ತದೆ. ಪ್ರೌಢಾವಸ್ಥೆಗೆ ಬಂದಾಗ ಇದರ ಕಂದು ಬಣ್ಣಕ್ಕೆ ತಿರುಗುತ್ತದೆ. ಸಮುದ್ರ ಜೀವಿಯಾಗಿದ್ದು, ಕಡಲ ಮರಳು ಮತ್ತು ಮಣ್ಣಿನಲ್ಲಿ ಇವು ವಾಸ ಮಾಡುತ್ತವೆ. ಈಜಲು ಕಾಲಿನ ವ್ಯವಸ್ಥೆಗಳನ್ನು ಹೊಂದಿರುವ ಈ ಏಡಿ ಆರಾಮವಾಗಿ ಸಾಗರದಲ್ಲಿ ಈಜಬಲ್ಲದು. ಸಮುದ್ರದ ಮೇಲ್ಮೈ ಮೇಲೆ ಹೆಚ್ಚು ಈಜುವ ಕಾರಣ ಇವುಗಳು ಬಹಳ ಸುಲಭವಾಗಿ ಮೀನುಗಾರರ ಬಲೆಗಳಿಗೆ ಸಿಕ್ಕಿಬಿಡುತ್ತವೆ. ಸಾಮಾನ್ಯವಾಗಿ 12- 15 ಸೆಂ. ಮೀ.ನಷ್ಟು ಬೆಳೆದು, 15- 20 ಗ್ರಾಂನಷ್ಟು ತೂಗುತ್ತವೆ ಎನ್ನುತ್ತಾರೆ ಅವರು.
ಇವುಗಳು ತನ್ನ ದೇಹದ ಗಾತ್ರದಷ್ಟೇ ಉದ್ದದ ಕಣ್ಣುಗಳನ್ನು ಹೊಂದಿರುತ್ತವೆ. ಈ ಕಣ್ಣುಗಳನ್ನು ಬೇಟೆಗಾಗಿ ಬಳಕೆ ಮಾಡುತ್ತವೆ. ಸಮುದ್ರದ ಮರಳಿನಲ್ಲಿ ಹೊಂಚು ಹಾಕಿ ಕುಳಿತು ಉದ್ದನೆಯ ದುರ್ಬಿನ್ ಮಾದರಿಯ ಕಣ್ಣಿನ ಮೂಲಕ ತನ್ನ ಬೇಟೆಯನ್ನು ಗುರುತಿಸಿ ಬೇಟೆಯಾಡುತ್ತವೆ. ಇದರ ವೈಜ್ಞಾನಿಕ ಹೆಸರು ಸ್ಯೂಡೊಪೊತಲಾಮಸ್ ವಿಜಿಲ್ ಎಂದು ಅವರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.