Rare occurrence: ಮಳೆಗಾಗಿ ಪ್ರಾರ್ಥಿಸಿ ಬಾಲಕರಿಬ್ಬರಿಗೆ ಮದುವೆ
ಇಬ್ಬರು ಬಾಲಕರನ್ನು ವಧು-ವರರನ್ನಾಗಿ ಮಾಡಿ ಮಾಂಗಲ್ಯ ಧಾರಣೆ
Team Udayavani, Sep 30, 2024, 2:29 AM IST
ಕುಣಿಗಲ್ (ತುಮಕೂರು): ಮಳೆಗಾಗಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ, ಕತ್ತೆಗಳ ಮದುವೆ ಮಾಡುವುದು ಸಾಮಾನ್ಯ. ಆದರೆ, ತಾಲೂಕಿನ ಅಮೃತ್ತೂರು ಹೋಬ ಳಿಯ ಸೊಂಡೇಕೊಪ್ಪ ಗ್ರಾಮದಲ್ಲಿ ಇಬ್ಬರು ಬಾಲಕರನ್ನು ವಧು-ವರರನ್ನಾಗಿಸಿ ಮದುವೆ ಮಾಡಿಸಿ, ಜನರಿಗೆ ಭೋಜನ ವ್ಯವಸ್ಥೆ ಮಾಡಿದ ಅಪರೂಪದ ಪ್ರಸಂಗ ನಡೆದಿದೆ.
ಇಬ್ಬರು ಬಾಲಕರನ್ನು ವಧು-ವರರನ್ನಾಗಿ ಮಾಡಿ ಮಾಂಗಲ್ಯ ಧಾರಣೆ ಮಾಡಲಾಯಿತು. ಇಡೀ ಗ್ರಾಮದಲ್ಲಿ ಮದುವೆಯ ವಾತಾವರಣ ಸೃಷ್ಟಿಯಾಗಿತ್ತು. ಮದುವೆಗಾಗಿ ಬಂಧು-ಬಳಗ ಸ್ನೇಹಿತರು ಭಾಗವಹಿಸಿದ್ದರು. ಗ್ರಾಮಸ್ಥರು ವಧು-ವರರಿಗೆ ಅಕ್ಷತೆ ಹಾಕಿ, ಶುಭ ಹಾರೈಸಿದರು.
ಈ ವೇಳೆ ವಾದ್ಯಗೋಷ್ಠಿ ಮೊಳಗಿತು. ಅನಂತರ ವಧು-ವರರನ್ನು ಗ್ರಾಮಸ್ಥರು ಮೆರವಣಿಗೆ ನಡೆಸಿ ಮಳೆಗಾಗಿ ಪ್ರಾರ್ಥಿಸಿದರು. ಕಾಕಾತಾಳೀಯವೇನೋ ಎಂಬಂತೆ ಸೊಂಡೇಕೊಪ್ಪ ಸೇರಿದಂತೆ ಅಮೃತ್ತೂರು ಹೋಬಳಿಯ ಕೆಲವು ಭಾಗಗಳಲ್ಲಿ ಶನಿವಾರ ತಡರಾತ್ರಿ ಜೋರಾಗಿ ಮಳೆ ಸುರಿಯಿತು. ಗ್ರಾಮದ ಜನರು ಸಂತಸಪಟ್ಟರು. ರವಿವಾರ ಸಂಜೆ ಕುಣಿಗಲ್‌ನಲ್ಲಿ ಸ್ವಲ್ಪ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.