ಕ್ವಾರಂಟೈನ್ ಅವಧಿಯಲ್ಲೇ ಅಭ್ಯಾಸ ಆರಂಭಿಸಿದ ಜಡೇಜ
Team Udayavani, Jun 6, 2021, 10:56 PM IST
ಸೌತಾಂಪ್ಟನ್ : ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತದ ಕ್ರಿಕೆಟಿಗರು ಕ್ವಾರಂಟೈನ್ ಅವಧಿಯಲ್ಲೇ ಕೆಲಕಾಲ ಹೊರಾಂಗಣ ಅಭ್ಯಾಸ ಆರಂಭಿಸಿದ್ದಾರೆ. ಪರಸ್ಪರ ಭೇಟಿಯಾಗದೆ ಪ್ರತ್ಯೇಕವಾಗಿ ನಡೆಸಿದ ಅಭ್ಯಾಸ ಇದಾಗಿತ್ತು. ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ, ಆಲ್‌ರೌಂಡರ್ ರವೀಂದ್ರ ಜಡೇಜ ಅಭ್ಯಾಸಕ್ಕೆ ಇಳಿದವರಲ್ಲಿ ಮೊದಲಿಗರು.
ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದ ಫೋಟೋ ವನ್ನು ಜಡೇಜ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ “ಫಸ್ಟ್ ಔಟಿಂಗ್ ಇನ್ ಸೌತಾಂಪ್ಟನ್’ ಎಂಬ ಶೀರ್ಷಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಪೂಜಾರ ಮೈದಾನದಲ್ಲಿ ಓಟದ ಅಭ್ಯಾಸ ಮಾಡುತ್ತಿರುವ ವೀಡಿಯೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಉಳಿದವರು ಜಿಮ್‌ನಲ್ಲಿ ಕಾಲ ಕಳೆದರು.
ಇದನ್ನೂ ಓದಿ: ಟೆಸ್ಟ್ ವಿಶ್ವಕಪ್ ಫೈನಲ್ “ಬೆಸ್ಟ್ ಆಫ್ ತ್ರೀ’ ಮಾದರಿಯಲ್ಲಿರಬೇಕಿತ್ತು : ಯುವಿ
ಸ್ಥಳೀಯ ಆರೋಗ್ಯ ಇಲಾಖೆ ಅನುಮತಿ ನೀಡಿದ ಬಳಿಕ ಇಸಿಬಿ ಭಾರತದ ಕ್ರಿಕೆಟಿ ಗರ ಅಭ್ಯಾಸಕ್ಕೆ ಅನುಮತಿ ನೀಡಿತು. ಕ್ರಿಕೆಟಿಗರು ತಂಗಿರುವ ಹೊಟೇಲ್ ಸ್ಟೇಡಿಯಂಗೆ ಹೊಂದಿಕೊಂಡಂತೆ ಇರುವುದರಿಂದ ಅಭ್ಯಾಸಕ್ಕೆ ಅನುಕೂಲವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.