‘ಜಂಪಿಂಗ್ ಚಿಕನ್ ಪೀಸ್’ : ಹಸಿ ಕೋಳಿ ಮಾಂಸ ಪ್ಲೇಟಿಂದ ಜಿಗಿದಾಗ!
Team Udayavani, Jul 28, 2019, 7:02 PM IST
ನಿಮ್ಮ ಎದುರಿಗಿರುವ ತಟ್ಟೆಯಲ್ಲಿ ಇಟ್ಟಿರುವ ಕೋಳಿ ಅಥವಾ ಮೀನಿನ ಖಾದ್ಯ ಇದ್ದಕ್ಕಿದ್ದಂತೆಯೇ ಅಲ್ಲಿಂದ ಜಿಗಿ ಜಿಗಿ ಜಿಗಿದರೆ ಹೇಗಿರುತ್ತದೆ..? ಇದನ್ನು ಕಲ್ಪಸಿಕೊಳ್ಳುವುದಕ್ಕೇ ಒಂದು ರೀತಿಯಾಗುತ್ತದೆ ಅಲ್ಲವೇ? ಆದರೆ ಇಲ್ಲೊಂದು ಇದೇ ರೀತಿಯ ಪ್ರಕರಣವೊಂದು ವರದಿಯಾಗಿದೆ.
ಇದು ವಿಚಿತ್ರವಾದರೂ ನಿಜ, ರೆಸ್ಟೋರೊಂದರಲ್ಲಿ ಸರ್ವ್ ಮಾಡಲಾಗಿದ್ದ ಹಸಿ ಕೋಳಿ ಮಾಂಸವೊಂದು ತಟ್ಟೆಯಿಂದ ಜಿಗಿದು ಕೆಳಗೆ ಬೀಳುತ್ತಿರುವ ವೀಡಿಯೋವನ್ನು ಇದೀಗ ನೆಟ್ಟಿಗರೊಬ್ಬರು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.
ಅಮೆರಿಕಾದ ಫ್ಲೋರಿಡಾ ನಿವಾಸಿಯಾಗಿರುವ ರೀ ಫಿಲಿಪ್ಸ್ ಎಂಬುವವರು ಈ ವಿಡಿಯೋವನ್ನು ಎರಡು ವಾರಗಳ ಹಿಂದೆಯೇ ಪೋಸ್ಟ್ ಮಾಡಿದ್ದರು ಸಹ ಕಳೆದ ಕೆಲವು ದಿನಗಳಿಂದೀಚೆಗೆ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ. ಮಾತ್ರವಲ್ಲದೇ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಭಯ ಮತ್ತು ಆಶ್ಚರ್ಯ ಭರಿತರಾಗಿ ಕಮೆಂಟ್ ಮಾಡುತ್ತಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆಯೇ ಸುತ್ತಮುತ್ತಲಿನ ಟೇಬಲ್ ನಲ್ಲಿದ್ದ ಮಂದಿ ಭಯ ಮತ್ತು ಅಚ್ಚರಿಯಿಂದ ಕಿರುಚಾಡಿದ್ದಾರೆ. ಇದೀಗ ಈ ವಿಡಿಯೋ ಫೇಸ್ವುಕ್ ನಲ್ಲಿ ಎರಡು ಕೋಟಿಗಿಂತಲೂ ಅಧಿಕ ಬಾರಿ ವೀಕ್ಷಿಸಲ್ಪಟ್ಟಿದೆ. ಈ ಘಟನೆ ನಡೆದ ರೆಸ್ಟೋರೆಂಟ್ ಎಲ್ಲಿದೆ ಎಂದು ಗೊತ್ತಾಗಿಲ್ಲವಾದರೂ ವಿಡಿಯೋದಲ್ಲಿರುವ ಇತರೇ ಖಾದ್ಯಗಳನ್ನು ನೋಡುವಾಗ ಇದೊಂದು ಜಪಾನೀ ಅಥವಾ ಕೊರಿಯನ್ ರೆಸ್ಟೋರೆಂಟ್ ನಲ್ಲಿ ನಡೆದಿರಬಹುದಾದ ಘಟನೆ ಎಂದು ನಾವು ಊಹಿಸಿಕೊಳ್ಳಬಹುದಾಗಿದೆ.
ಯಾವುದಕ್ಕೂ ನೀವೂ ಒಂದು ಸಲ ಜಂಪಿಂಗ್ ಚಿಕನ್ ಪೀಸ್ ನ ವಿಡಿಯೋವನ್ನು ನೋಡಿ!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.