ಅನರ್ಹತೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಲಿರುವ ರೆಬೆಲ್ಸ್
ಸ್ಪೀಕರ್ ಅವಸರ ಮಾಡಿದ್ದಾರೆ - ಹೆಚ್. ವಿಶ್ವನಾಥ್
Team Udayavani, Jul 28, 2019, 12:25 PM IST
ಬೆಂಗಳೂರು: ರಾಜೀನಾಮೆ ನೀಡಿದ್ದ ಎಲ್ಲಾ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದು, ಅನರ್ಹಗೊಂಡ ಶಾಸಕರ ಸಂಖ್ಯೆ 17ಕ್ಕೇರಿದೆ. ಈಗಿನ ಬೆಳವಣಿಗೆಯಲ್ಲಿ ಅನರ್ಹಗೊಂಡ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ರಾಜೀನಾಮೆ ನೀಡಿದ್ದ ಶಾಸಕರಾದ ಎಸ್.ಟಿ. ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಪ್ರತಾಪಗೌಡ ಪಾಟೀಲ್, ರೋಷನ್ ಬೇಗ್, ಎಂಟಿಬಿ ನಾಗರಾಜ್, ಸುಧಾಕರ್, ಬಿಸಿ ಪಾಟೀಲ್, ಶಿವರಾಂ ಹೆಬ್ಬಾರ್, ಗೋಪಾಲಯ್ಯ, ಶ್ರೀಮಂತ ಪಾಟೀಲ್, ಆನಂದ್ ಸಿಂಗ್, ನಾರಯಣ ಗೌಡ, ಹೆಚ್. ವಿಶ್ವನಾಥ್ ಅವರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಸಿ ಆದೇಶ ಹೊರಡಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಆರ್. ಶಂಕರ್ ಅವರನ್ನು ಈ ವಿಧಾನ ಸಭೆಯ ಅವಧಿಯವರೆಗೆ ಅನರ್ಹಗೊಳಿಸದ್ದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹೆಚ್. ವಿಶ್ವನಾಥ್, ಅನರ್ಹತೆ ತೀರ್ಪನ್ನು ಮಾಧ್ಯಮಗಳ ಮೂಲಕ ತಿಳಿದಿದ್ದೇನೆ. ಸ್ಪೀಕರ್ ಅವರ ತೀರ್ಪು ಆತುರದ ನಿರ್ಧಾರವಾಗಿದೆ. ಯಾವ ಯಾವ ಸನ್ನಿವೇಶದಲ್ಲಿ ಏನೇನು ಆಯ್ತು, ಸರ್ಕಾರ ಯಾರ ಪರವಾಗಿತ್ತು. ಇವೆಲ್ಲವನ್ನು ಸುದೀರ್ಘವಾಗಿ ಅವರು ಯೋಚಿಸಬೇಕಿತ್ತು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.