ಮರುಬಳಕೆಯ ಸ್ಪೇಸ್ ಶಟಲ್ ಅಭಿವೃದ್ಧಿ
ಚಳ್ಳಕೆರೆಯಲ್ಲಿ ಇಸ್ರೋದಿಂದ ಪ್ರಯೋಗ
Team Udayavani, Oct 17, 2019, 5:50 AM IST
ಹೊಸದಿಲ್ಲಿ: ವಿದೇಶದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಗಳಾದ ನಾಸಾ ಮತ್ತು ಸ್ಪೇಸ್‌ಎಕ್ಸ್ ಅಭಿವೃದ್ಧಿ ಪಡಿಸುತ್ತಿರುವ ಮರು ಬಳಕೆ ಮಾಡಬಲ್ಲ ಉಡಾವಣ ವಾಹಕಗಳನ್ನು ಇಸ್ರೋ ಕೂಡ ಕೆಲವು ವರ್ಷಗಳಿಂದ ಅಭಿವೃದ್ಧಿಪಡಿಸುತ್ತಿದ್ದು, ಈಗ ಮಹತ್ವದ ಪ್ರಯೋಗಕ್ಕೆ ಮುಂದಾಗಿದೆ. ವಿಶೇಷವೆಂದರೆ ಈ ಪ್ರಯೋಗಕ್ಕೆ ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಸೈನ್ಸ್ ಸಿಟಿಯೇ ಕೇಂದ್ರಬಿಂದುವಾಗ ಲಿದೆ. ಗಗನಯಾನವನ್ನು ಗಮನದಲ್ಲಿಟ್ಟು ಕೊಂಡು ಈ ಪ್ರಯೋಗಕ್ಕೆ ಇಸ್ರೋ ಮುಂದಾಗಿದೆ.
ಮರುಬಳಕೆ ಮಾಡಬಹುದಾದ ಸ್ಪೇಸ್ ಶಟಲ್‌ಗಳ ಅಭಿವೃದ್ಧಿ ಪ್ರಕ್ರಿಯೆಯನ್ನು 2016ರಿಂದಲೂ ಇಸ್ರೋ ನಡೆಸುತ್ತಿದೆ. ಈ ಬಾಹ್ಯಾಕಾಶ ನೌಕೆಗಳು ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿ ವಾಪಸ್ ಭೂಮಿಗೆ ಬಂದು ತಲುಪುತ್ತವೆ. ಅನಂತರ ಇದೇ ವಾಹಕಗಳನ್ನು ಬಳಸಿ ಇನ್ನೊಂದು ಉಪಗ್ರಹವನ್ನು ಕಕ್ಷೆಗೆ ಕಳುಹಿಸಬಹುದು. ಇದರಿಂದ ಉಡಾವಣೆ ವೆಚ್ಚ ಗಮನಾರ್ಹವಾಗಿ ಇಳಿಕೆಯಾಗುತ್ತದೆ.
ಯಶಸ್ವಿ ಪ್ರಯೋಗ
ಈ ಪ್ರಯೋಗವನ್ನು ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ ಫಾಲ್ಕನ್ 9 ರಾಕೆಟ್‌ಗಳು ಯಶಸ್ವಿಯಾಗಿ ಮಾಡಿವೆ. ಇಸ್ರೋ ಕೂಡ 2016ರ ಮೇ 23ರಂದು ಯಶಸ್ವಿಯಾಗಿ ಪ್ರಯೋಗ ಮಾಡಿತ್ತು.
ಭೂಮಿ ಮೇಲೆ ಪ್ರಯೋಗ
ಈ ಬಾರಿ ಪ್ರಾಯೋಗಿಕವಾಗಿ ಭೂಮಿಯ ಮೇಲೆಯೇ ಸ್ಪೇಸ್ ಶಟಲ್ ಇಳಿಸುವ ಪ್ರಯೋಗ ಮಾಡಲಿದೆ. ಚಳ್ಳಕೆರೆಯಲ್ಲಿ ಸುಮಾರು 2.2 ಕಿ.ಮೀ. ಉದ್ದದ ರನ್‌ವೇ ನಿರ್ಮಿಸಲಾಗಿದೆ. ಈ ರನ್‌ವೇ ಮೇಲೆ 3 ಕಿ.ಮೀ. ಎತ್ತರದಿಂದ ಹೆಲಿಕಾಪ್ಟರ್ ಬಳಸಿ ಸ್ಪೇಸ್ ಶಟಲ್ ಅನ್ನು ಕೆಳಕ್ಕೆ ಎಸೆಯ ಲಾಗುತ್ತದೆ. ಸ್ವಲ್ಪ ಹೊತ್ತು ಹಾರಾಡಿದ ಬಳಿಕ ಇದು ವಿಮಾನದ ರೀತಿಯಲ್ಲೇ ರನ್‌ವೇ ಯಲ್ಲಿ ಇಳಿಯಲಿದೆ. ಇದರಲ್ಲಿನ ಕಂಪ್ಯೂಟರ್‌ಗಳೇ ಶಟಲ್ ಅನ್ನು ಸಂಪೂರ್ಣ ನಿಯಂತ್ರಣ ಮಾಡಲಿವೆ. ಯಾವಾಗ ಈ ಸ್ಪೇಸ್ ಶಟಲ್ ಪ್ರಯೋಗ ನಡೆಸಲಾಗುತ್ತದೆ ಎಂಬುದರ ಬಗ್ಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.