ಕಾರ್ಮಿಕ ಕಲ್ಯಾಣದ ಪ್ರೋತ್ಸಾಹಧನ ಬಿಡುಗಡೆ
Team Udayavani, Jan 13, 2022, 5:10 AM IST
ಕುಂದಾಪುರ: ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ವಿವಾಹಕ್ಕೆ ನೀಡುತ್ತಿದ್ದ ಪ್ರೋತ್ಸಾಹಧನ ಸೋಮವಾರ ಬಿಡುಗಡೆಯಾಗಿದೆ. ಈ ಮೂಲಕ ಕಳೆದ 2 ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಕಾರ್ಮಿಕರ ಖಾತೆಗೆ ಹಣ ಜಮೆಯಾಗಿದೆ.
ಬಾಕಿ
2019ರಲ್ಲಿ ಅರ್ಜಿ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲೆಯ 134 ಜನರಿಗೆ ಮತ್ತು ಈ ಮಾರ್ಚ್ ಬಳಿಕ ಉಡುಪಿ ಜಿಲ್ಲೆಯವರಿಗೆ ಹಣ ಬಂದಿರಲಿಲ್ಲ. ನೋಂದಾಯಿತ ಕಟ್ಟಡ ಕಾರ್ಮಿಕ ಅಥವಾ ಕಾರ್ಮಿಕನ ಅವಲಂಬಿತ ಮಕ್ಕಳ ವಿವಾಹಕ್ಕಾಗಿ 50 ಸಾವಿರ ರೂ. ನೀಡಲಾಗುತ್ತದೆ. ಇದೇ ಜುಲೈಯಿಂದ ಈ ಮೊತ್ತವನ್ನು 60 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಒಬ್ಬರಿಗೆ ದೊರೆಯುತ್ತಿದ್ದ ಮೊತ್ತವನ್ನು 2021ರ ಮಾರ್ಚ್‌ನಿಂದ ಪತಿ-ಪತ್ನಿಗೆ ವಿಂಗಡಿಸಿ ನೀಡಲಾಗುತ್ತಿದೆ. 25 ಸಾವಿರ ರೂ.ಗಳ ಬಾಂಡ್ ಹಾಗೂ 25 ಸಾವಿರ ರೂ.ಗಳ ನಗದು. ಬಾಂಡ್ 3 ವರ್ಷಗಳ ಅನಂತರ ಬಡ್ಡಿ ಸಹಿತ ದೊರೆಯುತ್ತದೆ.
ಬಿಡುಗಡೆ
2019ರಲ್ಲಿ ಬಾಕಿಯಾಗಿದ್ದ ದ.ಕ. ಜಿಲ್ಲೆಯ 134 ಮಂದಿಗೆ ಏಕಗಂಟಿ ನಲ್ಲಿ ಹಣ ಬಿಡುಗಡೆಯಾಗಿ ಅವರ ಖಾತೆಗಳಿಗೆ ಜಮೆಯಾಗಿದೆ. ಅಲ್ಲದೆ ದ.ಕ.ಮತ್ತು ಉಡುಪಿಯಲ್ಲಿ 2021ರಲ್ಲಿ ಸಲ್ಲಿಕೆಯಾದ ಅರ್ಜಿಗಳಿಗೂ ಪ್ರೋತ್ಸಾಹ ಧನ ಬಿಡುಗಡೆಯಾಗಿದೆ. ದ.ಕ. ಜಿಲ್ಲೆಯಲ್ಲಿ 2019ರ 134 ಜನ ಸೇರಿ ಒಟ್ಟು 425 ಮಂದಿಗೆ ಈ ತಿಂಗಳಲ್ಲಿ ಹಣ ಬಿಡುಗಡೆಯಾಗಿದೆ. ಅದಕ್ಕೂ ಮುನ್ನ 590 ಮಂದಿಗೆ ಕಳೆದ ವರ್ಷ ಪ್ರೋತ್ಸಾಹಧನ ದೊರೆತಿತ್ತು. ಉಡುಪಿ ಜಿಲ್ಲೆಯಲ್ಲಿ ನವೆಂಬರ್ ಅಂತ್ಯದವರೆಗಿನ ಅರ್ಜಿಗಳು ಇತ್ಯರ್ಥಗೊಂಡು ಹಣ ಬಿಡುಗಡೆಯಾಗಿದೆ. ಅದರ ಅನಂತರದ ಬಾಬ್ತು ಬರಬೇಕಾದ 75 ಮಂದಿಗಷ್ಟೇ ಬಾಕಿಯಿದೆ.
ಇದನ್ನೂ ಓದಿ:ಪಾಸ್‌ಪೋರ್ಟ್ ಶ್ರೇಯಾಂಕ: ದೇಶಕ್ಕೆ 83ನೇ ರ್‍ಯಾಂಕ್ ಪ್ರಾಪ್ತಿ
“ಉದಯವಾಣಿ’ ವರದಿ
ಕಟ್ಟಡ ಕಾರ್ಮಿಕರಿಗೆ ಅಥವಾ ಅವರ ಅವಲಂಬಿತ ಮಕ್ಕಳ ವಿವಾಹಕ್ಕೆ ದೊರೆಯುವ ಹಣ ಬಿಡುಗಡೆಯಾಗದ ಕುರಿತು “ಉದಯವಾಣಿ’ ಡಿ. 6ರಂದು “ಕಾರ್ಮಿಕರ ಕಲ್ಯಾಣಕ್ಕೆ ಇನ್ನೂ ಬಂದಿಲ್ಲ ಪ್ರೋತ್ಸಾಹಧನ!’ ಎಂದು ವರದಿ ಪ್ರಕಟಿಸಿತ್ತು. ಹಣ ಬಿಡುಗಡೆಯೊಂದಿಗೆ ಕಾರ್ಮಿಕರ ಮುಖದಲ್ಲಿ ನಗು ಕಾಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ
Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ
Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.