ಆರ್‌ಟಿ-ಪಿಸಿಆರ್ ಪರೀಕ್ಷೆ ಬಳಿಕವೇ ಬಿಡುಗಡೆ
ಡಿಸ್ಚಾರ್ಜ್ ನೀತಿ ಪರಿಷ್ಕರಿಸಿದ ಆರೋಗ್ಯ ಸಚಿವಾಲಯ
Team Udayavani, May 10, 2020, 6:25 AM IST
ಸಾಂದರ್ಭಿಕ ಚಿತ್ರ.
ಕೋವಿಡ್-19 ಸೋಂಕಿನ ಚಿಕಿತ್ಸೆ ಪಡೆದವರು ಒಂದೊಮ್ಮೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಇಲ್ಲವೇ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಅಂಥವರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಿ ವರದಿ ನೆಗೆಟಿವ್ ಬಂದರೆ ಮಾತ್ರ ಡಿಸ್ಚಾರ್ಜ್ ಮಾಡಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಸೋಂಕುಪೀಡಿತರ ಡಿಸ್ಚಾರ್ಜ್ ನೀತಿಯನ್ನು ಪರಿಷ್ಕರಿಸಿರುವ ಸಚಿವಾಲಯ, ಚಿಕಿತ್ಸೆ ಬಳಿಕ ಸೋಂಕಿನ ಲಕ್ಷಣ ಹೊಂದಿರದ, ಅಲ್ಪ ಪ್ರಮಾಣದಲ್ಲಿ ಪೂರ್ವ ಲಕ್ಷಣಗಳನ್ನು ಹೊಂದಿರುವ, ಸೌಮ್ಯ ಮತ್ತು ಅತೀ ಸೌಮ್ಯ ಪ್ರಕರಣ ಎಂದು ಪರಿಗಣಿಸಲ್ಪಟ್ಟವರನ್ನುಡಿಸ್ಚಾರ್ಜ್ ವೇಳೆ ಪರೀಕ್ಷೆಗೆ ಒಳಪಡಿಸುವ ಅಗತ್ಯ ಇಲ್ಲ ಎಂದಿದೆ. ಇದುವರೆಗೆ ಇದ್ದ ನಿಯಮದ ಪ್ರಕಾರ ಕ್ವಾರಂಟೈನ್‌ಗೆ ಒಳಗಾದವರನ್ನು 14ನೇ ದಿನ ಪರೀಕ್ಷೆಗೆ ಒಳಪಡಿಸಿ, ಫಲಿತಾಂಶ ನೆಗೆಟಿವ್ ಬಂದರೂ 24 ತಾಸುಗಳಲ್ಲಿ ಮತ್ತೂಮ್ಮೆ ಪರೀಕ್ಷೆ ನಡೆಸಲಾಗುತ್ತಿತ್ತು.
ಮೂರು ಹಂತದ ಕೋವಿಡ್ ಪರೀಕ್ಷೆಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳು ಮತ್ತು ವೈದ್ಯ ಕೀಯ ತೀವ್ರತೆ ಆಧರಿಸಿದ ಸೋಂಕುಪೀಡಿತರ ವರ್ಗೀಕರಣಕ್ಕೆ ಅನುಗುಣವಾಗಿ ಡಿಸ್ಚಾರ್ಜ್ ನೀತಿಯನ್ನು ಪರಿಷ್ಕರಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಔಷಧದ ನೆರವಿಲ್ಲದೆಯೇ ಮೂರು ದಿನಗಳ ಅವಧಿಯಲ್ಲಿ ಜ್ವರ ಕಡಿಮೆಯಾದರೆ ಅಥವಾ ಮರುಕಳಿಸದಿದ್ದರೆ ಮತ್ತು ಆಮ್ಲಜನಕದ ನೆರ ವಿಲ್ಲದೆ ರೋಗಿಯ ಉಸಿರಾಟವು ನಾಲ್ಕು ದಿನಗಳ ವರೆಗೆ ಶೇ.95ಕ್ಕಿಂತಲೂ ಉತ್ತಮವಾಗಿದ್ದರೆ ಅಂತಹವರನ್ನು 10 ದಿನಗಳ ಅನಂತರ ಪರೀಕ್ಷೆ ಇಲ್ಲದೆಯೇ ಮನೆಗೆ ಕಳುಹಿಸಬಹುದು. ಆದರೆ 7 ದಿನಗಳ ವರೆಗೆ ಮನೆಯಲ್ಲೇ ಐಸೊಲೇಶನ್‌ಗೆ ಒಳಪಡುವಂತೆ ರೋಗಿಗೆ ಸಲಹೆ ನೀಡಬೇಕು. ಜ್ವರ ಹೆಚ್ಚಿರುವ, ಆಮ್ಲಜನಕದ ನೆರವಿಲ್ಲದೆ ಉಸಿರಾಡಲು ತೊಂದರೆ ಅನುಭವಿಸುವ ರೋಗಿ ಗಳು ಪೂರ್ಣ ಗುಣಮುಖರಾದ ಬಳಿಕವೇ ಡಿಸ್ಚಾರ್ಜ್ ಮಾಡಬೇಕು ಎಂದು ಪರಿಷ್ಕೃತ ನೀತಿಯಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.