ಇಂದಿನಿಂದ ಈ ಸರಣಿ ಶುರು; ಸ್ವಾತಂತ್ರ್ಯ ಕಲಿಗಳ ನೆನಹು
Team Udayavani, Aug 5, 2022, 6:20 AM IST
ನಾವೀಗ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಸಂಭ್ರಮದಲ್ಲಿದ್ದೇವೆ. ಈಗಾಗಲೇ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆಯನ್ನೂ ನಡೆಸುತ್ತಿದ್ದೇವೆ. ಇಂಥ ಹೊತ್ತಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ನೆನೆಯಲೇ ಬೇಕು. ಪ್ರಮುಖ 75 ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯ ಮಾಡಿಕೊಡಲಿದ್ದು, ಇಂದಿನಿಂದ ಈ ಸರಣಿ ಶುರುವಾಗಲಿದೆ.
ಕಿತ್ತೂರು ರಾಣಿ ಚೆನ್ನಮ್ಮ – 1778-1829 :
ದೇಶದಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ಶುರುವಾಗುವ ಮುನ್ನವೇ ಬ್ರಿಟಿಷರ ವಿರುದ್ಧ ಸಿಡಿದೆದ್ದ ವೀರ ವನಿತೆ. ಕಿತ್ತೂರು ಸಂಸ್ಥಾನದ ರಾಣಿಯಾಗಿದ್ದ ಇವರು, ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ಕೇಳಿದ್ದ ಕಪ್ಪ ಕೊಡದೇ ತಿರುಗಿಬಿದ್ದರು. ಈ ವೇಳೆ, ಬ್ರಿಟಿಷರು ಮೊದಲ ಬಾರಿ ಕಿತ್ತೂರಿನ ಮೇಲೆ ದಾಳಿ ಮಾಡಿದಾಗ್ಯೂ, ಅವರ ವಶಕ್ಕೆ ಹೋಗದಂತೆ ಹೋರಾಟ ನಡೆಸಿದ್ದರು. ಆದರೆ, ಎರಡನೇ ದಾಳಿ ವೇಳೆ ಸೆರೆ ಸಿಕ್ಕಿ ಸೆರೆಮನೆಯಲ್ಲೇ ಮೃತಪಟ್ಟರು. ಇವರನ್ನು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ದೇಶದ ಮೊದಲ ಮಹಿಳೆಯರಲ್ಲಿ ಒಬ್ಬರು ಎಂದೇ ಗುರುತಿಸಲಾಗುತ್ತಿದೆ.
ಸಂಗೊಳ್ಳಿ ರಾಯಣ್ಣ – 1830 :
ಕಿತ್ತೂರು ಸಂಸ್ಥಾನದಲ್ಲಿದ್ದ ಸಂಗೊಳ್ಳಿ ರಾಯಣ್ಣ ಕೂಡ ಬ್ರಿಟಿಷರ ವಿರುದ್ಧ ಸಿಡಿದೆದ್ದ ದೇಶದ ಅಗ್ರ ಸ್ವಾತಂತ್ರ್ಯ ವೀರ. 1824ರಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದು ಅವರಿಂದ ಬಂಧಿತನಾಗಿ, ಬಿಡುಗಡೆಗೊಳ್ಳುತ್ತಾರೆ. ನಂತರದ ದಿನಗಳಲ್ಲಿ ವೀರಾವೇಶದಿಂದ ಕಿತ್ತೂರು ಚೆನ್ನಮ್ಮ ಜತೆಗೆ ನಿಂತು ಹೋರಾಟ ನಡೆಸುತ್ತಾ ಹೋಗುತ್ತಾರೆ. ಸ್ಥಳೀಯರನ್ನು ಜತೆಗೂಡಿಸಿ ಕೊಂಡು, ಬ್ರಿಟಿಷರ ವಿರುದ್ಧ ಸೈನ್ಯ ಕಟ್ಟಿ ಹೋರಾಡುವ ರಾಯಣ್ಣ, ಅವರ ಕಚೇರಿಗಳನ್ನು ಸುಡುತ್ತಾರೆ. ಹಾಗೆಯೇ ವಯನಾಡಿನಲ್ಲಿದ್ದ ಬ್ರಿಟಿಷ್ ಸೇನೆಯ ಮೇಲೆ ದಾಳಿ ಮಾಡುತ್ತಾರೆ. ಅಲ್ಲಿದ್ದ ಸಂಪ ತ್ತನ್ನು ತೆಗೆದುಕೊಂಡು ಬರು ತ್ತಾರೆ. ಬ್ರಿಟಿ ಷರಿಗೆ ಎಂದಿಗೂ ರಾಯಣ್ಣ ನನ್ನು ನೇರ ಯುದ್ಧದಲ್ಲಿ ಸೋಲಿ ಸಲು ಆಗುವುದೇ ಇಲ್ಲ. ಕಡೆಗೆ ಮೋಸದಿಂದ ರಾಯಣ್ಣನನ್ನು ಬಂಧಿಸಿ 1830ರಲ್ಲಿ ಗಲ್ಲಿಗೇರಿಸುತ್ತಾರೆ.
ತಿಲ್ಕಾ ಮಾಂಜಿ 1750-1785 :
ತಿಲ್ಕಾ ಮಾಂಜಿ ಎಂಬ ಸಂಥಲ್ ಬುಡಕಟ್ಟು ನಾಯಕ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. 1784ರಲ್ಲಿ ಆದಿವಾಸಿಗಳ ಸೇನೆಯ ನಾಯಕತ್ವ ವಹಿಸಿ, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. 1770ರ ಸುಮಾರಿನಲ್ಲಿ ಸಂಥಲ್ ಪ್ರದೇಶ ಬರಗಾಲದಿಂದ ತತ್ತರಿಸಿ ಹೋಗಿತ್ತು. ಜನ ಹಸಿವೆಯಿಂದ ಸಾಯುತ್ತಿದ್ದರು. ಆಗ ತಿಲ್ಕಾ ಮಾಂಜಿ, ಬ್ರಿಟಿಷ್ ಕಂಪನಿಯನ್ನು ದರೋಡೆ ಮಾಡಿ, ತನ್ನವರಿಗೆ ಹಂಚುತ್ತಿದ್ದರು. ಕಡೆಗೆ ಬ್ರಿಟಿಷರು ಇವರನ್ನು ಸೆರೆ ಹಿಡಿದು, ಕುದುರೆಗೆ ಕಟ್ಟಿ ಭಗಲ್ಪುರದ ತನಕ ಎಳೆದು ತಂದಿದ್ದರು. ಅಲ್ಲೇ ಇವರನ್ನು ಬ್ರಿಟಿಷರು ಗಲ್ಲಿಗೇರಿಸಿದರು.
ಮಂಗಲ್ ಪಾಂಡೆ 1827-1857 :
34ನೇ ಬೆಂಗಾಲ್ ನೇಟಿವ್ ಇನ್‌ಫ್ಯಾಂಟ್ರಿಯಲ್ಲಿ ಸೈನಿಕನಾಗಿದ್ದ ಮಂಗಲ್ ಪಾಂಡೆಯನ್ನು ಇಂದಿಗೂ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂದೇ ಗುರುತಿಸುತ್ತೇವೆ. 1857ರಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದ ಸೈನಿಕ. ದಂಗೆ ಎದ್ದಾಗಲೇ ಇವರನ್ನು ಬಂಧಿಸಿದ್ದ ಬ್ರಿಟಿಷರು, ಏ.28ರಂದು ಗಲ್ಲಿಗೇರಿಸಲು ಸಿದ್ಧತೆ ನಡೆಸಿದ್ದರು. ಆದರೆ, ಇನ್ನಷ್ಟು ಸೈನಿಕರು ದಂಗೆ ಏಳಬಹುದು ಎಂಬ ಕಾರಣದಿಂದಾಗಿ 10 ದಿನ ಮೊದಲೇ ಗಲ್ಲಿಗೇರಿಸಿದ್ದರು.
ಗಂಗು ಮೆಹ್ತರ್ – 1859 :
ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾ ಮದ ವೇಳೆ, ಅಂದರೆ, 1857ರಲ್ಲಿ ಸುಮಾರು 150 ಬ್ರಿಟಿಷ್ ಸೈನಿಕರನ್ನು ಇವರು ಕೊಂದಿದ್ದರು. ಬಿಥೂರ್ ಎಂಬಲ್ಲಿ ದಲಿತ ಕುಟುಂಬವೊಂದರಲ್ಲಿ ಹುಟ್ಟಿದ ಇವರು, ಚಿಕ್ಕಂದಿನಲ್ಲೇ ಕುಸ್ತಿ ಕಲಿತಿದ್ದರು. 1858ರಲ್ಲಿ ಬ್ರಿಟಿಷರು ಇವರನ್ನು ಸೆರೆ ಹಿಡಿದು, ಕಾನ್ಪುರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಗಲ್ಲಿಗೇರಿಸಿದ್ದರು.
ತಾಂತ್ಯ ಟೋಪೆ 1814-1859 :
ರಾಮಚಂದ್ರ ಪಾಂಡುರಂಗ ಎಂಬ ಹೆಸರುಳ್ಳ, ತಾಂತ್ಯ ಟೋಪೆ ಅವರು, ಬ್ರಿಟಿಷರ ವಿರುದ್ಧ ಸುಮಾರು 150 ಬಾರಿ ಸಮರ ಮಾಡಿದ್ದರು. ಹಾಗೆಯೇ ನಾನಾ ಸಾಹೇಬ್ ಮತ್ತು ರಾಣಿ ಲಕ್ಷ್ಮೀ ಭಾಯಿ ಅವರ ನಿಕಟವರ್ತಿ. ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಇವರು ಭಾಗಿಯಾಗಿದ್ದರು. ರಾಣಿ ಲಕ್ಷ್ಮೀಬಾಯಿ ಅವರು ಗ್ವಾಲಿಯರ್ ಅನ್ನು ವಶಪಡಿಸಿಕೊಳ್ಳುವಲ್ಲಿಯು ಇವರು ನೆರವಾಗಿದ್ದರು. ಇವರನ್ನು 1859ರಲ್ಲಿ ಗಲ್ಲಿಗೇರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹರ್ ಘರ್ ತಿರಂಗಾ- ಈ ವರ್ಷ 30 ಕೋಟಿಗೂ ಅಧಿಕ ರಾಷ್ಟ್ರಧ್ವಜ ಮಾರಾಟ, 500 ಕೋಟಿ ಆದಾಯ: ಸಿಎಐಟಿ
ಬಿಗಿ ಪೊಲೀಸ್ ಬಂದೋಬಸ್ತ್; ಭಾಗವತ್, ನಾಗ್ಪುರ್ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ
ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು
ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಛಲ ಇತ್ತು: ನಾಗಭೂಷಣ ರಾವ್
ಬೆಂಗಳೂರಿನ ಸ್ವಾತಂತ್ರ್ಯ ಚಳವಳಿ ಉಳಿದ ನಗರಗಳಿಗಿಂತ ಭಿನ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.