ರಾಜ್ಯಗಳಿಗೆ ಇಂಜೆಕ್ಷನ್‌ ಹೊಣೆ : ರೆಮಿಡಿಸಿವಿರ್‌ ಉತ್ಪಾದನೆ ಹೆಚ್ಚಳ ಹಿನ್ನೆಲೆ ಕ್ರಮ


Team Udayavani, May 30, 2021, 7:05 AM IST

ರಾಜ್ಯಗಳಿಗೆ ಇಂಜೆಕ್ಷನ್‌ ಹೊಣೆ : ರೆಮಿಡಿಸಿವಿರ್‌ ಉತ್ಪಾದನೆ ಹೆಚ್ಚಳ ಹಿನ್ನೆಲೆ ಕ್ರಮ

ಹೊಸದಿಲ್ಲಿ: ಕೊರೊನಾ ಚಿಕಿತ್ಸೆಗೆ ಬಳಸಲಾಗುವ ರೆಮಿಡಿಸಿವಿರ್‌ ಇಂಜೆಕ್ಷನ್‌ನ ಉತ್ಪಾದನೆಯು ದೇಶಾದ್ಯಂತ ಹೆಚ್ಚಳವಾಗಿದ್ದು, ಈ ಹಿನ್ನೆಲೆಯಲ್ಲಿ ಇಂಜೆಕ್ಷನ್‌ನ ಖರೀದಿ ಹೊಣೆಯನ್ನು ಕೇಂದ್ರ ಸರಕಾರ‌ವು ರಾಜ್ಯಗಳಿಗೆ ವಹಿಸಿದೆ. ಪರಿಣಾಮ, ಕೋವಿಡ್‌-19 ಲಸಿಕೆಯ ಮಾದರಿಯಲ್ಲೇ ರೆಮಿಡಿಸಿವಿರ್‌ ಅನ್ನು ಕೂಡ ಇನ್ನು ಮುಂದೆ ರಾಜ್ಯಗಳೇ ಖರೀದಿಸಬೇಕಾಗುತ್ತದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಮಾನ್ಸುಖ್‌ ಮಾಂಡವೀಯ ಶನಿವಾರ ಈ ವಿಚಾರ ತಿಳಿಸಿದ್ದಾರೆ. ಪ್ರಸ್ತುತ ದೇಶದಲ್ಲಿ ರೆಮಿಡಿಸಿವಿರ್‌ ಪೂರೈಕೆ ಬೇಡಿಕೆಗಿಂತಲೂ ಹೆಚ್ಚಾಗಿದೆ. ಎ.11ರಂದು ಪ್ರತೀ ದಿನ 33 ಸಾವಿರ ಶೀಶೆ ಇಂಜೆಕ್ಷನ್‌ ಉತ್ಪಾದಿಸಲಾಗುತ್ತಿತ್ತು. ಈಗ ಅದು 10 ಪಟ್ಟು ಹೆಚ್ಚಳವಾಗಿದ್ದು, ದಿನಕ್ಕೆ 3.50 ಲಕ್ಷ ಶೀಶೆಗಳನ್ನು ತಯಾರಿಸಲಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಕೇಂದ್ರ ಸರಕಾರ‌ವು ರಾಜ್ಯಗಳಿಗೆ ರೆಮಿಡಿಸಿವಿರ್‌ ಹಂಚಿಕೆ ಮಾಡುವುದಿಲ್ಲ. ಬದಲಿಗೆ ರಾಜ್ಯಗಳೇ ಅದನ್ನು ಖರೀದಿಸಬಹುದು ಎಂದು ಮಾಂಡವೀಯ ಹೇಳಿದ್ದಾರೆ.

ಕಳೆದ ವಾರದವರೆಗೆ, ಕೇಂದ್ರವು 98.87 ಲಕ್ಷ ವಯಲ್‌ಗಳಷ್ಟು ರೆಮಿಡಿಸಿವಿರ್‌ ಅನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿದೆ. ಸುಮಾರು 50 ಲಕ್ಷ ವಯಲ್‌ ಗಳನ್ನು ಖರೀದಿಸಿ, ತುರ್ತು ಅಗತ್ಯದ ವೇಳೆಗೆ ಬಳಸಿಕೊಳ್ಳಲು ಕೂಡ ಕೇಂದ್ರ ಸರಕಾರ ತೀರ್ಮಾನಿಸಿದೆ ಎಂದೂ ಅವರು ತಿಳಿಸಿದ್ದಾರೆ.

ಈ ನಡುವೆ, ವಿದೇಶಗಳಿಂದ ದೇಣಿಗೆ ರೂಪದಲ್ಲಿ ಬಂದ 18,040 ಆಮ್ಲಜನಕ ಸಾಂದ್ರಕಗಳು, 19,085 ಆಕ್ಸಿಜನ್‌ ಸಿಲಿಂಡರ್‌ ಗಳು ಹಾಗೂ ಸುಮಾರು 7.7 ಲಕ್ಷ ರೆಮಿಡಿಸಿವಿರ್‌ ಶೀಶೆಗಳನ್ನು ಎ.27ರಿಂದ ಮೇ 28ರವರೆಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಜುಲೈ ಅಂತ್ಯದ ವೇಳೆಗೆ ಪ್ರತೀ ದಿನ 1 ಕೋಟಿ ಮಂದಿಗೆ ಲಸಿಕೆ ವಿತರಿಸಲು ಭಾರತ ಸರಕಾರ ಚಿಂತನೆ ನಡೆಸಿದೆ. ದೇಶದಲ್ಲಿ ಲಸಿಕೆಯ ಉತ್ಪಾದನೆಗೆ ವೇಗ ನೀಡಬೇಕು ಮತ್ತು ಎಷ್ಟು ಸಾಧ್ಯವೋ ಅಷ್ಟು ಲಸಿಕೆಗಳನ್ನು ವಿದೇಶಗಳಿಂದ ಖರೀದಿಸಬೇಕು.
– ಡಾ| ರಣದೀಪ್‌ ಗುಲೇರಿಯಾ, ಏಮ್ಸ್‌ ಮುಖ್ಯಸ್ಥ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.