Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
40 ಪರ್ಸೆಂಟ್ ಕಮಿಷನ್‌ಗೆ ಸಂಬಂಧಿಸಿದ ದಾಖಲೆ ನಾಳೆ ನ್ಯಾ.ನಾಗಮೋಹನದಾಸ ಸಮಿತಿಗೆ ಸಲ್ಲಿಕೆ: ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ
Team Udayavani, Nov 19, 2024, 8:18 PM IST
ಕಲಬುರಗಿ: ಈ ಹಿಂದಿನ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ 40 ಪರ್ಸೆಂಟ್ ಕಮಿಷನ್ ಆರೋಪ ಸಂಬಂಧವಾಗಿ ಲೋಕಾಯುಕ್ತಗೆ ದೂರೇ ನೀಡಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘ (ಕಾಂಟ್ರಾಕ್ಟರ್ ಅಸೋಸಿಯೇಷನ್)ದ ರಾಜ್ಯಾಧ್ಯಕ್ಷ ಜಗನ್ನಾಥ ಶೇಗಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಬಿಎಂಪಿಗೆ ಸಂಬಂಧಿಸಿದಂತೆ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪಗಳು ಶುದ್ಧ ಸುಳ್ಳೆಂದು ಲೋಕಾಯುಕ್ತ ತನಿಖಾ ಅಧಿಕಾರಿಗಳು ಸಲ್ಲಿಸಿರುವ ವರದಿಗೂ ಗುತ್ತಿಗೆದಾರರ ಸಂಘದ ಈ ಹಿಂದಿನ ರಾಜ್ಯಾಧ್ಯಕ್ಷ ದಿವಂಗತ ಕೆಂಪಣ್ಣ ಅವರು ಮಾಡಿರುವ ಆರೋಪಕ್ಕೂ ಸಂಬಂಧವಿಲ್ಲ. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಬಿಬಿಎಂಪಿಗೆ ಸಂಬಂಧಿಸಿದಂತೆ ನೀಡಲಾದ ದೂರಿಗೆ ಲೋಕಾಯುಕ್ತ ತನಿಖಾಧಿಕಾರಿಗಳು ವರದಿ ನೀಡಿದ್ದಾರೆ ಎಂದರು.
ಪ್ರಮುಖವಾಗಿ ಅಂಬಿಕಾಪತಿ ನೀಡಿರುವ ದೂರನ್ನು ಸಂಘದ ರಾಜ್ಯ ಸಮಿತಿ ಗಮನಕ್ಕೆ ತಂದಿಲ್ಲ. ಜತೆಗೆ ಈಗ ಅಂಬಿಕಾಪತಿ ಮೃತಪಟ್ಟಿದ್ದಾರೆ. ಕೊನೆ ಪಕ್ಷ ಅಂಬಿಕಾಪತಿಯವರು ನೀಡಲಾಗಿರುವ ಬಿಬಿಎಂಪಿಗೆ ಸಂಬಂಧಿಸಿದಂತೆ ದೂರಿಗೆ ಲೋಕಾಯುಕ್ತ ತನಿಖಾಧಿಕಾರಿಗಳು ರಾಜ್ಯ ಗುತ್ತಿಗೆದಾರರ ಸಂಘವನ್ನಾದರೂ ಸಂಪರ್ಕಿಸಬೇಕಿತ್ತು. ಹೀಗಾಗಿ ಲೋಕಾಯುಕ್ತ ತನಿಖಾಧಿಕಾರಿಗಳು ನೀಡಿರುವ ಸುಳ್ಳು ವರದಿ ಸಂಘ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದಾಖಲೆ ಸಲ್ಲಿಕೆ:
ಗುತ್ತಿಗೆದಾರರ ಸಂಘದ ಹಿಂದಿನ ರಾಜ್ಯಾಧ್ಯಕ್ಷ ಕೆಂಪಣ್ಣ ಅವರು ಹಿಂದಿನ ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ 40 ಪರ್ಸೆಂಟ್ ಕಮಿಷನ್ ಕುರಿತಾಗಿ ಪ್ರಧಾನಿಗೆ ಪತ್ರ ಬರೆಯುವುದರ ಜತೆಗೆ ತದ ನಂತರ ಸಿದ್ಧರಾಮಯ್ಯ ಅವರಿಗೂ ದೂರು ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ರಚನೆ ಮಾಡಲಾಗಿದೆ. ಈಗ ಸಮಿತಿ ಎಲ್ಲ ಕಡೆಯಿಂದ ಮಾಹಿತಿ ಮತ್ತು ಅಭಿಪ್ರಾಯ ಸಂಗ್ರಹಿಸುತ್ತಿದೆ. ಹೀಗಾಗಿ ನ. 20ರಂದು ನ್ಯಾ. ಮೋಹನದಾಸ್ ಸಮಿತಿ ರಾಜ್ಯ ಗುತ್ತಿಗೆದಾರ ಸಂಘಕ್ಕೆ ಆಹ್ವಾನ ನೀಡಿ ಮಾಹಿತಿ ಪ್ರಮುಖವಾಗಿ ದಾಖಲೆಗಳ ಸಲ್ಲಿಸುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ 40 ಪರ್ಸೆಂಟ್ ಕಮಿಷನ್‌ಗೆ ಸಂಬಂಧಿಸಿದಂತೆ ರಾಜ್ಯಾದಾದ್ಯಂತ ಸಂಗ್ರಹಿಸಲಾದ ಎಲ್ಲ ದಾಖಲೆಗಳ ಸಮಿತಿಗೆ ಸಲ್ಲಿಸಲಿದೆ ಎಂದು ಶೇಗಜಿ ತಿಳಿಸಿದರು.
ಕೆಂಪಣ್ಣ ಮೃತಪಡುವ ಮುನ್ನ ದಿನಗಳಲ್ಲಿ ತಾವು 40 ಪರ್ಸೆಂಟ್ ಕಮಿಷನ್‌ಗೆ ಸಂಬಂಧಿತ ಹೋರಾಟ ಮುಂದುವರಿಯಲಿ, ಸೂಕ್ತ ದಾಖಲೆಗಳ ಸಮಿತಿಗೆ ಸಲ್ಲಿಸಿ ಎಂದು ಹೇಳಿದ್ದರು. ತದ ನಂತರ ತಾವು ಅಧ್ಯಕ್ಷರಾದ ಮೇಲೆ ಶೇ.40 ಪರ್ಸೆಂಟ್ ಕಮಿಷನ್‌ಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳ ಸಂಗ್ರಹಿಸಲಾಗಿದ್ದು, ಈಗ ಬುಧವಾರ ಬೆಂಗಳೂರಿನಲ್ಲಿ ಸಮಿತಿಗೆ ಎಲ್ಲ ದಾಖಲಾತಿಗಳನ್ನು ಸಲ್ಲಿಸಲಾಗುವುದು. 40 ಪರ್ಸೆಂಟ್ ಕಮಿಷನ್ ಹೋರಾಟ ಒಂದು ತಾರ್ಕಿಕ ಅಂತ್ಯಗೊಳಿಸುವವರೆಗೂ ಸಂಘ ಹಿಂದೆ ಬೀಳುವುದಿಲ್ಲ ಎಂದು ಪ್ರಕಟಿಸಿದರು.
ಬಿಬಿಎಂಪಿಗೆ ಸಂಬಂಧಿಸಿದಂತೆ ಮಾತ್ರ ಲೋಕಾಯುಕ್ತ ತನಿಖಾಧಿಕಾರಿಗಳು ನೀಡಿರುವ ಕಮಿಷನ್ ಆರೋಪ ಸುಳ್ಳು ಎಂದಿರುವುದನ್ನೇ ವಿಪಕ್ಷದವರು ಗುತ್ತಿಗೆದಾರರ ಸಂಘದ ಹಿಂದಿನ ರಾಜ್ಯಾಧ್ಯಕ್ಷ ಕೆಂಪಣ್ಣ ಆರೋಪ ಸುಳ್ಳೆಂದು ಬಿಂಬಿಸುತ್ತಿರುವುದು ಸರಿಯಲ್ಲ. ಸಂಘದ ಆರೋಪಕ್ಕೆ ಸದಾ ಬದ್ದವಿದ್ದು, ತಮ್ಮ ಬಳಿ ಎಲ್ಲ ಆಡಿಯ-ವಿಡಿಯೋಗಳ ಜತೆಗೆ ದಾಖಲೆಗಳನ್ನು ನ್ಯಾ. ನಾಗಮೋಹನದಾಸ್ ಸಮಿತಿಗೆ ಸಂಘದ ಎಲ್ಲ ಪದಾಧಿಕಾರಿಗಳೊಂದಿಗೆ ಸಲ್ಲಿಸಲಾಗುವುದು ಎಂದು ಜಗನ್ನಾಥ ಶೇಗಜಿ ಪುನರುಚ್ಚರಿಸಿದರು.
ಕಾಂಗ್ರೆಸ್ ಸರ್ಕಾರದಲ್ಲೂ ಕಮಿಷನ್
ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲೂ ಶೇ.10ರಿಂದ 15ರವರೆಗೆ ಕಮಿಷನ್ ಕೇಳಿ ಬರುತ್ತಿದೆ. ಕೆಕೆಆರ್‌ಡಿಬಿ ಕಾಮಗಾರಿಯಲ್ಲಿ ಪ್ರಮುಖವಾಗಿ ಕೇಳಿ ಬಂದಿದೆ. ಇದರಲ್ಲಿ ಎಲ್ಲ ಪಕ್ಷದ ಶಾಸಕರು ಸೇರಿದ್ದಾರೆ. ಇದರ ಕುರಿತಾಗಿಯೂ ದಾಖಲೆಗಳ ಸಂಗ್ರಹಿಸಲಾಗುತ್ತಿದೆ ಎಂದು ಶೇಗಜಿ ತಿಳಿಸಿದರು. ಸಂಘದ ಪದಾಧಿಕಾರಿಗಳಾದ ಮೋಹಸೀನ್ ಪಟೇಲ್, ಸಂಜಯ್ ಆರ್.ಕೆ, ಗುರುನಂಜಯ್ಯ, ಶಿವಾನಂದ ಪಾಟೀಲ್, ರಾಜಶೇಖರ ಬುದ್ದಿವಂತ ಸೇರಿದಂತೆ ಇತರ ಪದಾಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.