ತಡರಾತ್ರಿ ದಟ್ಟ ಕಾಡಿನಲ್ಲಿ ಕಾರಿನೊಳಗೆ 6 ತಾಸು ಕಳೆದ ಮೂವರನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ
Team Udayavani, Sep 23, 2020, 2:03 PM IST
ಚಾಮರಾಜನಗರ: ಇಂಥ ಘಟನೆಗಳನ್ನು ಸಿನಿಮಾಗಳಲ್ಲಿ, ಕಥೆಗಳಲ್ಲಿ ನೋಡಿರುತ್ತೇವೆ. ಜೀವ ಭಯದಲ್ಲಿದ್ದವರನ್ನು ಹೀರೋ ಬಂದು ರಕ್ಷಿಸಿ ಕಾಪಾಡುತ್ತಾನೆ. ನಿಜ ಜೀವನದಲ್ಲಿ ಹೀಗಾಗುತ್ತದೆಯೇ ಅಂದುಕೊಳ್ಳುತ್ತೇವೆ! ಆದರೆ ಅಂಥದೇ ಸಿನಿಮೀಯ ರೀತಿಯ ಘಟನೆ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಅರಣ್ಯದಲ್ಲಿ ನಡೆದಿದೆ.
ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ದಟ್ಟ ಅರಣ್ಯದ ಹಳ್ಳವೊಂದರಲ್ಲಿ ಸಿಲುಕಿಕೊಂಡ ಕಾರಿನೊಳಗೆ ರಾತ್ರಿ ವೇಳೆ ಸುಮಾರು 6 ತಾಸು ಕಳೆದಿದ್ದ ತಂದೆ ಮಗ ಹಾಗೂ ಚಾಲಕನನ್ನು ಪೊಲೀಸ್ ಇನ್ ಸ್ಪೆಕ್ಟರ್ ಒಬ್ಬರು ರಕ್ಷಿಸಿ ಹೀರೋ ಆಗಿದ್ದಾರೆ!
ಬೆಂಗಳೂರು ನಿವಾಸಿ ಉದ್ಯಮಿ ಎನ್. ರೂಪೇಶ್ ಕುಮಾರ್ ರೆಡ್ಡಿ, ಅವರ ಪುತ್ರ ತೇಜೇಶ್ವರ ಹಾಗೂ ಚಾಲಕ ಕೇಶವ ಅವರನ್ನು ಚಾಮರಾಜನಗರ ಡಿಸಿಐಬಿ ಇನ್ ಸ್ಪೆಕ್ಟರ್ ಮಹದೇವಶೆಟ್ಟಿ ಮತ್ತು ತಂಡದವರು ರಕ್ಷಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಘಟನೆ ವಿವರ :
ರೂಪೇಶ್ ಕುಮಾರ್ ಅವರು ತಮ್ಮ ಪುತ್ರನೊಂದಿಗೆ ಸೆ. 16ರಂದು ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿದ್ದರು. ಅಂದು ರಾತ್ರಿ ತಮ್ಮ ಪುತ್ರ ಮತ್ತು ಚಾಲಕನೊಂದಿಗೆ ಬಿಳಿಗಿರಿರಂಗನಬೆಟ್ಟದಿಂದ ಕೆ.ಗುಡಿಗೆ ಬರುತ್ತಿದ್ದರು. ಆಗ ಮಾರ್ಗ ಮಧ್ಯದ ಹಳ್ಳವೊಂದರಲ್ಲಿ ಅವರ ಕಾರು ಸಿಲುಕಿತು. ಮೊಬೈಲ್ ಫೋನ್ ನೆಟ್ ವರ್ಕ್ ಕೂಡ ಇರಲಿಲ್ಲ. ಹೀಗಾಗಿ ಹುಲಿ, ಆನೆಗಳ ಭಯದಿಂದ ಕಾರಿನೊಳಗೇ ಮೂವರೂ ಕುಳಿತರು. ಸುಮಾರು 6 ಗಂಟೆಗಳ ಕಾಲ ಹೀಗೇ ಕಾಲ ಕಳೆದಿದ್ದಾರೆ.
ಬೆಳಗಿನ ಜಾವ 2 ಗಂಟೆ ಸಮಯಕ್ಕೆ ಗಾಂಜಾ ಅಕ್ರಮ ಸಾಗಾಣಿಕೆ ಜಾಡು ಹಿಡಿದು ಗಸ್ತು ತಿರುಗುತ್ತಿದ್ದ ಡಿಸಿಐಬಿ ಇನ್‍ಸ್ಪೆಕ್ಟರ್ ಮಹದೇವ ಶೆಟ್ಟಿ ಅವರು ಅದೇ ಮಾರ್ಗದಲ್ಲಿ ಹೋಗಿದ್ದಾರೆ. ಇವರ ಕಾರು ಹಳ್ಳದಲ್ಲಿ ಸಿಲುಕಿಕೊಂಡಿರುವುದನ್ನು ಗಮನಿಸಿ, ಅವರನ್ನು ಕಾರಿನಿಂದ ಇಳಿಸಿ ತಮ್ಮ ಜೀಪಿನಲ್ಲಿ ಕೂರಿಸಿಕೊಂಡು ಅವರು ತಂಗಿದ್ದ ಹೋಟೆಲಿಗೆ ಬಿಟ್ಟಿದ್ದಾರೆ.
ಇದನ್ನೂ ಓದಿ : ಅಂಪೈರ್ ವಿರುದ್ಧ ಮತ್ತೆ ಗರಂ ಆದ ಕ್ಯಾಪ್ಟನ್ ಕೂಲ್ ಧೋನಿ : ಆಗಿದ್ದೇನು ಗೊತ್ತಾ ?
ಈ ವಿಷಯವನ್ನು ಇಂದು ರೂಪೇಶ್ ರೆಡ್ಡಿ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸರಾ ಥಾಮಸ್ ಅವರಿಗೆ ಮೆಸೇಜ್ ಮೂಲಕ ತಿಳಿಸಿದ್ದಾರೆ. ತಮ್ಮ ಮೂವರ ಜೀವವನ್ನು ಉಳಿಸಿದ ಇನ್ ಸ್ಪೆಕ್ಟರ್ ಹಾಗೂ ಎಸ್ಪಿಯವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.
ಈ ಮೆಸೇಜನ್ನು ಎಸ್ಪಿ ಅವರು ಇಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದು, ಉತ್ತಮ ಕೆಲಸ ಮಾಡಿದ ಡಿಸಿಐಬಿ ಇನ್‍ಸ್ಪೆಕ್ಟರ್ ಮಹದೇವಶೆಟ್ಟಿ ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಎಚ್‌ಡಿಕೆ
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.