Research: ಮನುಷ್ಯ ಕನಸಲ್ಲೂ ಸಂವಹನ ನಡೆಸಬಲ್ಲ: ವಿಜ್ಞಾನಿಗಳು
ಇಬ್ಬರು ವ್ಯಕ್ತಿಗಳನ್ನು ಬಳಸಿ ಸಂಶೋಧನೆ ಯಶಸ್ವಿ
Team Udayavani, Oct 15, 2024, 7:35 AM IST
ಕ್ಯಾಲಿಫೋರ್ನಿಯಾ: ಗಾಢ ನಿದ್ರೆಯಲ್ಲಿರುವ ಇಬ್ಬರು ವ್ಯಕ್ತಿಗಳು ಕನಸಿನಲ್ಲಿ ಪರಸ್ಪರ ಸಂವಹನ ನಡೆಸುತ್ತಾರೆ ಎಂದು ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಹೇಳಿದ್ದಾರೆ. ಇದು ವಿಶ್ವದಲ್ಲೇ ಮೊದಲ ಬಾರಿ ನಡೆದ ಸಂವಹನ ಎಂದು ಅವರು ಹೇಳಿಕೊಂಡಿದ್ದಾರೆ.
ರೆಮ್‌ಸ್ಪೇಸ್ ಎಂಬ ಸಂಸ್ಥೆ ಈ ಸಂಶೋಧನೆ ನಡೆಸಿದೆ. ಇದಕ್ಕಾಗಿ ಇಬ್ಬರು ವ್ಯಕ್ತಿಗಳನ್ನು ಬಳಕೆ ಮಾಡಿಕೊಂಡಿದ್ದು, ಒರ್ವ ವ್ಯಕ್ತಿ ಗಾಢ ನಿದ್ರೆಯಲ್ಲಿದ್ದಾಗ “ಜುಲಕ್’ ಎಂಬ ಪದ ಉಚ್ಚರಿಸಿದ್ದಾನೆ. ಈ ಸಮಯದಲ್ಲಿ ಆತ ಲುಸಿಡ್ ಡ್ರೀಮ್ (ಗಾಢ ನಿದ್ರೆಯಲ್ಲಿದ್ದಾಗ ಕಾಣುವ ಕನಸು)ನಲ್ಲಿದ್ದ ಎಂಬುದನ್ನು ವೈಜ್ಞಾನಿಕ ಸಾಧನಗಳ ಮೂಲಕ ಖಚಿತ ಪಡಿಸಿಕೊಳ್ಳಲಾಗಿದೆ.
ಇದಾದ 8 ನಿಮಿಷ ಗಳ ಬಳಿಕ ಮತ್ತೂಬ್ಬ ವ್ಯಕ್ತಿಯನ್ನು ಇದೇ ಲುಸಿಡ್ ಡ್ರೀಮ್ ಸ್ಥಿತಿಗೆ ತಲುಪಿಸಿ, ಇಯರ್‌ಫೋನ್ ಮೂಲಕ “ಜುಲಕ್’ ಎಂಬ ಶಬ್ದದ ಎಲೆಕ್ಟ್ರಾನಿಕ್ ತರಂಗಗಳನ್ನು ಕೇಳಿಸಲಾಗಿದೆ. ತತ್‌ಕ್ಷಣವೇ ಆ ವ್ಯಕ್ತಿ ಜುಲಕ್ ಎಂದು ಉಚ್ಚರಿಸಿದ್ದಾರೆ. ರೆಮ್‌ಸ್ಪೇಸ್ ಈ ಸಂಶೋಧನೆ ಬಗ್ಗೆ ಹೇಳಿದ್ದರೂ ಇದಕ್ಕೆ ಬಳಕೆ ಮಾಡಿರುವ ವೈಜ್ಞಾನಿಕ ವಿಧಾನವನ್ನು ಅವರು ವಿವರಿಸಿಲ್ಲ. ಒಂದು ವೇಳೆ ಇದು ಸತ್ಯವಾ ದರೆ, ಮಾನಸಿಕ ರೋಗಗಳ ಚಿಕಿತ್ಸೆ ಮತ್ತು ಕೌಶಲಾಭಿವೃದ್ಧಿಗೆ ಇದು ನೆರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.