![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Aug 14, 2024, 12:49 AM IST
ನ್ಯೂಯಾರ್ಕ್: ಮಂಗಳ ಗ್ರಹದಲ್ಲಿ ನೀರಿರುವ ಬಗ್ಗೆ ದಶಕಗಳಿಂದ ಸಂಶೋ ಧನೆ ನಡೆಸುತ್ತಿರುವ ವಿಜ್ಞಾನಿಗಳು, ಈ ಬಗ್ಗೆ ಹೊಸ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ. ಮಂಗಳ ಗ್ರಹದ ಸುಮಾರು 20 ಕಿ.ಮೀ. ಆಳದಲ್ಲಿ ಈಗಲೂ ನೀರು ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
2018ರಿಂದಲೂ ಮಂಗಳ ಮೇಲ್ಮೆ„ ನಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಸಾದ ಇನ್‌ಸೈಟ್ ಲ್ಯಾಂಡರ್ ಒದಗಿಸಿರುವ ಮಾಹಿತಿಯನ್ನು ಆಧರಿಸಿ ಈ ಅನುಮಾನ ವ್ಯಕ್ತಪಡಿಸಲಾಗಿದೆ. ಈ ಲ್ಯಾಂಡರ್ ಸುಮಾರು 4 ವರ್ಷಗಳ ಮಂಗಳನ ನೆಲದಲ್ಲಾಗುವ ಕಂಪನದ ಮಾಪನವನ್ನು ಅಧ್ಯಯನ ಮಾಡುತ್ತಿದೆ. ಈ ಅಧ್ಯಯನಗಳಿಂದ ಸುಮಾರು 3 ಶತಕೋಟಿ ವರ್ಷಗಳ ಹಿಂದೆ ಮಂಗಳನ ನೆಲದಲ್ಲಿ ನದಿಗಳು, ಸರೋವರಗಳು ಮತ್ತು ಸಮುದ್ರಗಳು ಇದ್ದವು ಎಂಬುದು ದೃಢಪಟ್ಟಿದೆ.
ಇದೀಗ ಮಂಗಳನ ಗರ್ಭ ದಲ್ಲೂ ನೀರು ಹರಿದಿರುವ ಜಾಗಗಳಿಗೆ ಎಂಬ ಮಾಹಿತಿ ಸಿಕ್ಕಿರುವ ಕಾರಣ, ಲ್ಯಾಂಡರ್ ತಲುಪಲಾಗದಷ್ಟು ಆಳದಲ್ಲಿ ಇನ್ನೂ ನೀರಿರಬಹುದು ಎಂದು ವಿಜ್ಞಾನಿ ಗಳು ಹೇಳಿದ್ದಾರೆ. ಮಂಗಳ ಗ್ರಹದಲ್ಲಿ ನೀರು ಇರುವುದು ಖಚಿತವಾದರೆ, ಇಲ್ಲಿ ಜೀವಿಗಳು ಇದ್ದವು ಎಂಬುದಕ್ಕೆ ಹೆಚ್ಚಿನ ಪುಷ್ಠಿ ದೊರಕಿದಂತಾಗುತ್ತದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.