ಮೀಸಲಾತಿ ಮರು ವರ್ಗೀಕರಣಗೊಳಿಸಿ ಆದೇಶ


Team Udayavani, Mar 31, 2023, 6:12 AM IST

ಮೀಸಲಾತಿ ಮರು ವರ್ಗೀಕರಣಗೊಳಿಸಿ ಆದೇಶ

ಬೆಂಗಳೂರು: ಸಚಿವ ಸಂಪುಟದ ತೀರ್ಮಾನದಂತೆ ಮೀಸ ಲಾತಿ ಮರುವರ್ಗೀಕರಣಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ಅದರಂತೆ 3ಎಯಲ್ಲಿರುವ ಒಕ್ಕಲಿಗ ಮತ್ತು ಇತರ ಸಮುದಾಯಗಳನ್ನು ಅತಿ ಹಿಂದುಳಿದ ಎಂದು ಪರಿಗಣಿಸಿ ಪ್ರವರ್ಗ-2ಸಿ ಎಂದು ಪರಿಗಣಿಸಿ ಹೊಸ ಪ್ರವರ್ಗ ಸೃಷ್ಟಿಸಲಾಗಿದೆ. 3ಬಿ ಯಲ್ಲಿರುವ ವೀರಶೈವ ಲಿಂಗಾ ಯತ ಪಂಚಮಸಾಲಿ ಮತ್ತು ಇತರ ಸಮು ದಾಯಗಳನ್ನು ಅತಿ ಹಿಂದುಳಿದ ಎಂದು ಪರಿಗಣಿಸಿ 2ಡಿ ಮೀಸಲಾತಿ ಅವಕಾಶದ ಹೊಸ ಪ್ರವರ್ಗ ಸೃಜಿಸಲಾಗಿದೆ.
ಆದರೆ ಈಗಾಗಲೇ ಅತ್ಯಂತ ಹಿಂದು ಳಿದ ಪ್ರವರ್ಗ-1 ಹಾಗೂ 2ಎಗೆ ಧಕ್ಕೆ ಹಾಗೂ ಬದಲಾವಣೆ ಆಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳತಕ್ಕದ್ದು ಎಂದೂ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದ್ದು, ಪ್ರವರ್ಗ-2ಸಿ ಮತ್ತು 2ಡಿಗೆ ನೀಡಿರುವ ಮೀಸಲಾತಿಯು ಶಿಕ್ಷಣ ಮತ್ತು ಉದ್ಯೋಗಕ್ಕೆ ಸೀಮಿತ ವಾಗಿರಲಿದೆ. ಈ ಮೊದಲು 2ಬಿ ಯಲ್ಲಿದ್ದ ಧಾರ್ಮಿಕ ಅಲ್ಪಸಂಖ್ಯಾಕರನ್ನು (ಮುಸ್ಲಿಂ) ಹಿಂದುಳಿದ ಪಟ್ಟಿಯಿಂದ ಶೇ.10 ಮೀಸಲಾತಿ ಇರುವ ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿಸಲಾಗಿದೆ.

ಆದೇಶ ಪತ್ರ ಹಸ್ತಾಂತರ
ಆದೇಶದ ಪ್ರತಿಯನ್ನು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಹಸ್ತಾಂತರಿಸಿದರು. ಆದೇಶ ಪತ್ರ ಪಡೆದ ಸ್ವಾಮೀಜಿ, ಮುಖ್ಯಮಂತ್ರಿಯನ್ನು ಅಭಿನಂದಿಸಿ ಸಮ್ಮಾನಿಸಿದರು. ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, 2ಎ ಮೀಸಲಾತಿ ಪಡೆಯಲು ಹೈಕೋರ್ಟ್‌ನಲ್ಲಿ ತಡೆ ಇರುವುದರಿಂದ 2ಡಿ ಎಂಬ ಹೊಸ ಪ್ರವರ್ಗವನ್ನು ಸೃಷ್ಟಿಸಿ ಸರಕಾರ ಶೇ.7ರ ಮೀಸಲಾತಿ ಕೊಟ್ಟಿದ್ದು, ಇದು ನಮ್ಮ ನಿರಂತರ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯವಾಗಿದೆ. ಹೋರಾಟದಿಂದ ಎಲ್ಲ ಲಿಂಗಾಯತ ಒಳಪಂಗಡಗಳಿಗೆ ಹಾಗೂ ಇತರ ಸಮಾಜಗಳಿಗೆ ಮೀಸಲಾತಿಯನ್ನು ಪಡೆಯಲು ಅವಕಾಶ ಮಾಡಿಕೊಟ್ಟ ಸಮಾಜ ನಮ್ಮದು ಎಂದರು.

ಹೊಸದಾಗಿ ಸೃಷ್ಟಿಸಿದ ಪ್ರವರ್ಗದ ಸಮುದಾಯ
ಪ್ರವರ್ಗ- 2ಸಿ (ಅತಿ ಹಿಂದುಳಿದವರು)
ಮೀಸಲಾತಿ ಪ್ರಮಾಣ- ಶೇ. 6
ಒಳಪಡುವ ಜಾತಿಗಳು- ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್‌ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್‌ಕಾರ್‌ ಒಕ್ಕಲಿಗ, ದಾಸ್‌ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ (Gouda/ Gowda), ಹಳ್ಳಿಕಾರ್‌, ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮ, ರಡ್ಡಿ, ಗೌಂಡರ್‌, ನಾಮಧಾರಿ ಗೌಡ, ಉಪ್ಪಿನ ಕೊಳಗ/ ಉತ್ತಮ ಕೊಳಗ.

ಕೊಡಗರು, ಬಲಿಜ, ಬಲಜಿಗ/ ಬಣಜಿ/ ಗೌಡ ಬಣಜಿಗ, ನಾಯ್ಡು, ತೆಲಗು ಬಲಿಜ/ ತೆಲಗು ಬಣಜಿಗ, ಶೆಟ್ಟಿ ಬಲಿಜ/ ಶೆಟ್ಟಿ ಬಣಜಿಗ, ದಾಸರ ಬಲಿಜ/ ದಾಸರ ಬಲಜಿಗ/ ದಾಸರ ಬಣಜಿಗ/ ದಾಸ ಬಣಜಿಗ, ಕಸºನ್‌, ಮುನ್ನೂರ/ ಮುನ್ನಾರ್‌ ಕಾಪು, ಬಳೆಗಾರ/ ಬಳೆ ಬಣಜಿಗ/ ಬಳೆ ಚಿಟ್ಟಿ/ ಬಣಗಾರ, ರೆಡ್ಡಿ (ಬಲಿಜ), ಜನಪ್ಪನ್‌, ಉಪ್ಪಾರ (ಬಲಿಜ), ತುಲೇರು (ಬಲಿಜ).

ಪ್ರವರ್ಗ- 2ಡಿ (ಅತಿ ಹಿಂದುಳಿದವರು)
– ಮೀಸಲಾತಿ ಪ್ರಮಾಣ- ಶೇ. 7
ವೀರಶೈವ ಲಿಂಗಾಯತ, ಲಿಂಗಾಯತ ಉಪಜಾತಿಗಳಾದ ಹೆಳವ, ಅಂಬಿಗ, ಭೋಯಿ, ಗಂಗಾಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ, ಕುರುಬ, ಬಜಂತ್ರಿ, ಬಂಡಾರಿ, ಹಡಪದ, ಕ್ಷೌರಿಕ, ನವಲಿಗ ನಾವಿ, ಅಕ್ಕಸಾಲಿ, ಬಡಿಗಾರ್‌, ಕಮ್ಮಾರ, ಕಂಸಾಳ, ಪಂಚಾಳ, ಮೇದರ ಉಪ್ಪಾರ, ಗೌಳಿ, ಲಿಂಗಾಯತ/ ವೀರಶೈವ- ವೀರಶೈವ ಪಂಚಮಸಾಲಿ.

ಮರಾತ, ಮರಾಠ, ಅರೆ ಕ್ಷತ್ರಿ, ಅರೆ ಮರಾಠ, ಆರ್ಯ ಮರಾಠ, ಆರ್ಯ, ಆರ್ಯರು, ಕೊಂಕಣ ಮರಾಠ, ಕ್ಷತ್ರಿಯ ಮರಾಠ, ಕುಳವಾಡಿ. ಜತೆಗೆ ಕ್ರಿಶ್ಚಿಯನ್‌, ಬಂಟ್‌, ಪರಿವಾರ ಬಂಟ್‌, ಜೈನರು (ದಿಗಂಬರರು), ಸಾತಾನಿ, ಚಾತ್ತಾದ ಶ್ರೀವೈಷ್ಣವ/ ಚಾತ್ತಾದ ವೈಷ್ಣವ/ ಶಾತ್ತಾದ ವೈಷ್ಣವ/ ಶಾತ್ತಾದ ಶ್ರೀವೈಷ್ಣವ, ಕದ್ರಿ ವೈಷ್ಣವ, ಸಮೆರಾಯ, ಸಾತ್ತದವಲ್‌, ಸಾತ್ತದವನ್‌, ವೈಷ್ಣವ.

ಟಾಪ್ ನ್ಯೂಸ್

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

kejriwal-2

AAP ಬೇಡಿಕೆ: ನಿರ್ಗಮಿತ ಸಿಎಂ ಕೇಜ್ರಿವಾಲ್ ಅವರಿಗೆ ಸರಕಾರಿ ವಸತಿ ಕಲ್ಪಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime

Bidar; ಪತ್ನಿ ಜತೆ ಅನೈತಿಕ ಸಂಬಂಧ‌:ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಿದ ಪತಿ!!

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Bhavani Revanna

SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ

1-frr

Bail ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POlice

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

11

Udupi: ರೈಲು ಹತ್ತುತ್ತಿದ್ದಾಗ ಬಿದ್ದ ಮಹಿಳೆಯ ರಕ್ಷಣೆ

1-aaccc

Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು

3

Uppala: ಸುಮಾರು 3.5 ಕೋಟಿ ರೂ. ಮೌಲ್ಯದ ಅಮಲು ಪದಾರ್ಥ ವಶಕ್ಕೆ : ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.