Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ
60 ವರ್ಷಮೇಲ್ಪಟ್ಟವರಿಗೆ ಸಿಗಲಿದೆ ಸೌಲಭ್ಯ
Team Udayavani, Jan 1, 2025, 2:24 AM IST
ಚಿಕ್ಕಬಳ್ಳಾಪುರ: ರಾಜ್ಯದ ಅಕ್ಷರ ದಾಸೋಹ ನೌಕರರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರಕಾರ 60 ವರ್ಷ ವಯೋಮಿತಿ ಪೂರೈಸಿದವರಿಗೆ ಇಡುಗಂಟು ನೀಡುವ ನಿರ್ಧಾರ ಕೈಗೊಂಡಿದೆ. ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಕಾರ್ಯಕ್ರಮದಡಿ (ಮಧ್ಯಾಹ್ನ ಉಪಾಹಾರ ಯೋಜನೆ ) ಆಯ್ಕೆಗೊಂಡ 60 ವರ್ಷಗಳ ವಯೋಮಿತಿಯನ್ನು ಪೂರೈಸಿದವರಿಗೆ ಒಮ್ಮೆ ಇಡುಗಂಟು ನೀಡುವ ಘೋಷಣೆಯನ್ನು ರಾಜ್ಯ ಸರಕಾರ ಮಾಡಿದೆ.
ಸರಕಾರದ ಆದೇಶದಂತೆ 2022 ಮಾ. 31ರಂದು ಅಥವಾ ನಂತರ ಅಡುಗೆ ಕೆಲಸದಿಂದ ಬಿಡುಗಡೆ ಹೊಂದಿರುವ ಅಥವಾ ಕೆಲಸದಿಂದ ಬಿಡುಗಡೆ ಹೊಂದುವ ಅಡುಗೆ ಸಿಬಂದಿ ಅಂತಿಮವಾಗಿ ಒಂದು ಬಾರಿಯ ಇಡುಗಂಟು ಸೌಲಭ್ಯ ಸಿಗಲಿದೆ. ಅರ್ಹ ಅಡುಗೆ ಸಿಬಂದಿಗೆ ಇಡುಗಂಟು ನೀಡುವ ಸಂದರ್ಭದಲ್ಲಿ ಸುತ್ತೋಲೆಯಲ್ಲಿ ನಮೂದಿಸಿರುವ ಎಲ್ಲ ಷರತ್ತುಗಳನ್ನು ಜಿಲ್ಲಾ ಮತ್ತು ತಾಲೂಕು ಹಂತಗಳಲ್ಲಿನ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು.
ಇಡುಗಂಟು ನೀಡಬೇಕಾಗಿರುವ ಅರ್ಹ ಪ್ರಕರಣಗಳಲ್ಲಿ ಅಡುಗೆ ಸಿಬಂದಿ ಅಥವಾ ಅರ್ಹ ಕಾನೂನುಬದ್ಧ ಅವಲಂಬಿತರು ಬೇಡಿಕೆ ಪ್ರಸ್ತಾವನೆಯನ್ನು ಸೇವೆ ಸಲ್ಲಿಸಿರುವ ಶಾಲೆಯ ಮುಖ್ಯ ಶಿಕ್ಷಕರಿಗೆ ಸಲ್ಲಿಸುವುವಂತೆ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ವಿ. ತ್ರಿಲೋಕ ಚಂದ್ರ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಯಾರಿಗೆ ಎಷ್ಟು?
5 ವರ್ಷಕ್ಕೂ ಮೇಲ್ಪಟ್ಟು ಹಾಗೂ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ್ದಲ್ಲಿ 30,000 ರೂ., ಹಾಗೂ 15 ವರ್ಷ ಹಾಗೂ ಅದಕ್ಕೂ ಹೆಚ್ಚು ಸೇವೆ ಸಲ್ಲಿಸಿದ್ದಲ್ಲಿ 40,000 ರೂ., ಇಡಿಗಂಟು ನೀಡಲು ಸರಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.