ಜನರ ಹೆಗಲೇರಿದ ಆರೋಗ್ಯ ರಕ್ಷಣೆ ಹೊಣೆ
ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ತುಂಬಿಕೊಂಡ ವಾಹನ; ತೆರೆದ ಅಂಗಡಿ-ಮುಂಗಟ್ಟು; ವಾಣಿಜ್ಯ ವಹಿವಾಟು ಆರಂಭ
Team Udayavani, May 5, 2020, 6:00 AM IST
ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಸದ್ದು ಇನ್ನೂ ಪೂರ್ಣ ಅಡಗದೆ ಇದ್ದರೂ ಲಾಕ್‌ಡೌನ್ ಬಹುತೇಕ ಸಡಿಲವಾಗಿದ್ದು, ಜನತೆಗೆ ಗೃಹ ಬಂಧನದಿಂದ ಮುಕ್ತಿ ದೊರೆತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳೂ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಹೆಚ್ಚಿನ ಎಲ್ಲ ಚಟುವಟಿಕೆಗಳು ಪುನರಾರಂಭವಾಗಿವೆ. ಪರಿಣಾಮವಾಗಿ ಜನಸಂಚಾರ ಎಲ್ಲೆಡೆ ಅಧಿಕವಾಗಿದ್ದು, ಸೋಂಕಿಗೆ ಒಳಗಾಗ ದಂತೆ ಇನ್ನೀಗ ಜನರೇ ಸ್ವತಃ ರಕ್ಷಿಸಿಕೊಳ್ಳಬೇಕಿದೆ.
ಸರಕಾರದ ಆದೇಶದಂತೆ ಸೋಮವಾರ ಬೆಳಗ್ಗೆಯಿಂದಲೇ ಬಹುತೇಕ ಎಲ್ಲ ಕಡೆ ಅಂಗಡಿ-ಮುಂಗಟ್ಟುಗಳು, ಕೆಲವು ಕೈಗಾರಿಕೆಗಳು, ಕಂಪೆನಿಗಳು ಕಾರ್ಯಾರಂಭ ಮಾಡಿದವು. ಅದಕ್ಕೆ ಪೂರಕವಾಗಿ ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸುಮಾರು ಒಂದೂವರೆ ತಿಂಗಳಿನಿಂದ ಮನೆಯಲ್ಲೇ ಇದ್ದ ಉದ್ಯೋಗಿಗಳು, ಕಾರ್ಮಿಕರು ಬೆಳಗ್ಗೆ 9 ಗಂಟೆಗಾಗಲೇ ಸ್ವಂತ ವಾಹನಗಳೊಂದಿಗೆ ರಸ್ತೆಗಿಳಿದರು. ಕಿರಾಣಿ, ಮನೆಗೆ ಬೇಕಾದ ಸಾಮಗ್ರಿಗಳ ಖರೀದಿಗಾಗಿ ಗ್ರಾಹಕರು ಅಂಗಡಿಗಳತ್ತ ಹೆಜ್ಜೆ ಹಾಕಿದರು.
ಎಲ್ಲ ಪ್ರಕಾರದ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಿದ್ದರಿಂದ ಕಿರಾಣಿ, ಕಾಂಡಿಮೆಂಟ್ಸ್, ಮೆಕ್ಯಾನಿಕ್ ಶಾಪ್, ಜೆರಾಕ್ಸ್, ಸಾಕುಪ್ರಾಣಿ-ಪಕ್ಷಿಗಳ ಮಾರಾಟ, ಬಟ್ಟೆ ಅಂಗಡಿಗಳೆಲ್ಲ ತಿಂಗಳ ಧೂಳು ಕೊಡವಿಕೊಂಡು ಗ್ರಾಹಕರ ಸ್ವಾಗತಕ್ಕೆ ಎದುರು ನೋಡುತ್ತಿದ್ದವು. ಆದರೆ ಹೊಟೇಲ್‌ಗಳು, ತಳ್ಳುವ ಗಾಡಿ ಸಹಿತ ಕೆಲವು ಪ್ರಕಾರದ ಅಂಗಡಿಗಳು ತೆರೆದಿರಲಿಲ್ಲ. ಚಿನ್ನ-ಬೆಳ್ಳಿ ಆಭರಣ ಮಳಿಗೆಗಳಿಗೆ ಅವಕಾಶ ಇದ್ದರೂ ಮೊದಲ ದಿನ ಬಾಗಿಲು ಹಾಕಿದ್ದು ಕಂಡುಬಂತು.
ಇಷ್ಟು ದಿನಗಳ ಕಾಲ ಕೇವಲ ಅಗತ್ಯ ವಸ್ತುಗಳನ್ನು ಖರೀದಿಸಿ ತತ್‌ಕ್ಷಣ ಮನೆ ಸೇರಿಕೊಳ್ಳುತ್ತಿದ್ದ ಜನರು ಸೋಮವಾರ ಮುಖಗವಸು ಹಾಕಿಕೊಂಡು ಪೇಟೆಗಳಿಗೆ ನಿರ್ಭೀತಿಯಿಂದ ಬಂದರು. ಬಹುತೇಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಪ್ರಬುದ್ಧತೆ ಮೆರೆದರು. ಎರಡು ತಿಂಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಲಾಕ್‌ಡೌನ್ ಸಡಿಲಿಕೆಗೊಂಡ ಮೊದಲ ದಿನ ವ್ಯಾಪಾರ-ವಹಿವಾಟು ತುಸು ನೀರಸವಾಗಿತ್ತು. ಉಡುಪಿ ಜಿಲ್ಲೆ ಹಸುರು ವಲಯದಲ್ಲಿದ್ದರೂ ಸೋಮವಾರದ ಮಟ್ಟಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ಇತ್ತು.
ರೆಡ್ ಝೋನ್‌ಗಳಲ್ಲಿ ಮಾತ್ರ ಈ ವಿನಾಯಿತಿ ಇಲ್ಲ. ಇನ್ನೊಂದೆಡೆ ಸೋಂಕು ಅಲ್ಲಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಸಹಿತ ಎಚ್ಚರಿಕೆಯಿಂದ ಇರಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಸಡಿಲಿಕೆಯ ಬೆನ್ನಲ್ಲೇ ಕಟ್ಟಡ ನಿರ್ಮಾಣ, ಐಟಿ-ಬಿಟಿ ಕಂಪೆನಿಗಳು, ಸಂಘ-ಸಂಸ್ಥೆಗಳ ಕಚೇರಿಗಳು, ಸ್ಟಾರ್ಟ್‌ಅಪ್ ಗಳು, ಫ್ಯಾಕ್ಟರಿಗಳು ತಮ್ಮ ಉದ್ಯೋಗಿಗಳಿಗೆ ಇ-ಮೇಲ್ ಅಥವಾ ಮೊಬೈಲ್ ಸಂದೇಶಗಳ ಮೂಲಕ ಕೆಲಸಕ್ಕೆ ಹಾಜರಾಗುವಂತೆ ಹಿಂದಿನ ದಿನವೇ ಸೂಚನೆ ನೀಡಿ ದ್ದವು. ಅದರಂತೆ ಬೆಳಗ್ಗೆ 9 ಗಂಟೆಗಾಗಲೇ ಒಂದೊಂದಾಗಿ ವಾಹನಗಳು ರಸ್ತೆಗಿಳಿದವು. ಕಾರು ಮತ್ತು ದ್ವಿಚಕ್ರ ವಾಹನಗಳು ಹೆಚ್ಚಾಗಿದ್ದವು. ಇದರಿಂದ ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ, ಆನಂದರಾವ್ ವೃತ್ತ, ಕಿನೋ ಥಿಯೇಟರ್ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿತ್ತು. ಈ ಹಿಂದೆ ನಿರ್ಬಂಧಿಸಿದ್ದ ಮೇಲ್ಸೇತುವೆ, ಕೆಳಸೇತುವೆ, ದ್ವಿಪಥದಲ್ಲಿ ಏಕಪಥವನ್ನು ಮುಕ್ತಗೊಳಿಸಲಾಗಿತ್ತು.
ಅಮಲಿಗಾಗಿ ಇನ್ನಿಲ್ಲದ ಕಸರತ್ತು!
ಇದೆಲ್ಲದರ ನಡುವೆ ರಾಜ್ಯಾದ್ಯಂತ ಇಡೀ ದಿನದ ಪ್ರಮುಖ ಆಕರ್ಷಣೆ ಮದ್ಯ ಮಾರಾಟಗಾರರು ಮತ್ತು ಖರೀದಿದಾರರಾಗಿದ್ದರು. ಸ್ಟಾಕ್ ಖಾಲಿ ಆದೀತೆಂಬ ಆತಂಕ ಮತ್ತು ಸಂಜೆ 7ರ ಅನಂತರ ಸಿಗುವುದಿಲ್ಲ ಎಂಬ ಆತಂಕದಲ್ಲಿ ಮುಂಚಿತ ಖರೀದಿಗಾಗಿ ನಾನಾ ಕಸರತ್ತು ನಡೆಯಿತು. ಮದ್ಯ ಅಂಗಡಿಗಳು ತೆರೆಯುತ್ತಿದ್ದಂತೆ ಪಾನಪ್ರಿಯರು ಲಗ್ಗೆ ಇರಿಸಿದರು. ಅಲ್ಲಿ ಸಾಮಾಜಿಕ ಅಂತರಕ್ಕಾಗಿ ಗುರುತು ಹಾಕಿದ್ದ ಬಾಕ್ಸ್‌ಗಳಲ್ಲಿ ಪಾದರಕ್ಷೆ, ಟವಲ್, ಟೊಪ್ಪಿಗೆ ಇಟ್ಟು ಕಾಯ್ದಿರಿಸಿಕೊಳ್ಳುವ ಜಾಣ್ಮೆಯೂ ಕಂಡುಬಂತು. ನೂಕುನುಗ್ಗಲಿನ ಮುನ್ಸೂಚನೆ ದೊರೆತ ವ್ಯಾಪಾರಿಗಳು ಕೂಡ ನಿಯಂತ್ರಣಕ್ಕೆ ಪೂರ್ವಸಿದ್ಧತೆ ಮಾಡಿಕೊಂಡಿದ್ದರು. ಹಾಗಾಗಿ ಬಹುತೇಕ ಕಡೆ ವ್ಯವಸ್ಥಿತವಾಗಿ ಮದ್ಯದ ವ್ಯಾಪಾರ ನಡೆಯಿತು. ಎಲ್ಲ ಕಡೆಯೂ ಪಾರ್ಸೆಲ್‌ಗೆ ಮಾತ್ರ ಅವಕಾಶ ಇತ್ತು.
ಈ ಮಧ್ಯೆ ಸಡಿಲಿಕೆ ನೆಪದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ನೂರಾರು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು. ವಲಸೆ ಕಾರ್ಮಿಕರು, ಊರುಗಳಿಗೆ ತೆರಳಿರುವ ಉದ್ಯೋಗಿ ಗಳು ಮತ್ತೆ ಬೆಂಗಳೂರು, ಮೈಸೂರು, ಮಂಗಳೂರು ಒಳಗೊಂಡಂತೆ ಕೆಲಸ ಮಾಡುವ ಜಾಗ ತಲುಪಲು ಅಗತ್ಯ ಇರುವ ಪಾಸು ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಮಂಜೂರಾದ ಪಾಸು ಸಂಗ್ರಹಕ್ಕೆ ಕೆಲವರು ಗಂಟೆಗಟ್ಟಲೆ ಸರದಿ ನಿಂತಿದ್ದರು.
ಸಡಿಲಿಕೆ; ಗೂಡು ಸೇರುವ ಧಾವಂತ
ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಮಾತ್ರ ಸಡಿಲಿಕೆ ಇದ್ದುದರಿಂದ ಉಳಿದ ಸಮಯದಲ್ಲಿ ಇಡೀ ರಾಜ್ಯ ಮತ್ತೆ ಸ್ತಬ್ಧಗೊಂಡಿತು. ಸಂಜೆ 5 ಗಂಟೆ ಆಗುತ್ತಿದ್ದಂತೆ ಜನರು ಕೆಲಸದ ಸ್ಥಳದಿಂದ ಮನೆಗಳತ್ತ ಧಾವಂತದಲ್ಲಿ ಹೆಜ್ಜೆ ಹಾಕಿದರು. ಇದರಿಂದ ಪ್ರಮುಖ ಜಂಕ್ಷನ್‌ಗಳು, ರಸ್ತೆಗಳಲ್ಲಿ ಸಂಚಾರದಟ್ಟಣೆ ಬಿಸಿ ಉಂಟಾಯಿತು. ಮತ್ತೂಂದೆಡೆ ವಲಸೆ ಕಾರ್ಮಿಕರ ತವರಿನ ಪಯಣ ಸೋಮವಾರ ಕೂಡ ಮುಂದುವರಿಯಿತು. ಇಡೀ ದಿನ 550 ಬಸ್‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ತೆರಳಿದರು. ಇದರೊಂದಿಗೆ ಒಟ್ಟಾರೆ ಆರು ರೈಲುಗಳಲ್ಲೂ ಜನರು ಊರಿಗೆ ಹೋಗಿದ್ದು, ಕಳೆದೆರಡು ದಿನಗಳಲ್ಲಿ ಒಟ್ಟಾರೆ ಸುಮಾರು 30 ಸಾವಿರ ಕಾರ್ಮಿಕರು ತೆರಳಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.