Rewind 2023; ಚಿತ್ರರಂಗಕ್ಕೆ ವರ್ಷಪೂರ್ತಿ ಚೈತನ್ಯ ತುಂಬಿದ ಹೊಸಬರು


Team Udayavani, Dec 19, 2023, 1:20 PM IST

Rewind 2023; ಚಿತ್ರರಂಗಕ್ಕೆ ವರ್ಷಪೂರ್ತಿ ಚೈತನ್ಯ ತುಂಬಿದ ಹೊಸಬರು

2023 ಮುಗಿಯುತ್ತಾ ಬಂದಿದೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಿವೆ. ಡಿಸೆಂಬರ್‌ 15ರವರೆಗೆ ಬಿಡುಗಡೆಯಾಗಿರುವ ಸಿನಿಮಾಗಳನ್ನು ಲೆಕ್ಕ ಹಾಕಿದಾಗ ಈ ವರ್ಷ 211 ಪ್ಲಸ್‌ ಚಿತ್ರಗಳು ಸಿಗುತ್ತವೆ. ಈ ಸಂಖ್ಯೆ ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳಷ್ಟೇ ಹತ್ತಿರದಲ್ಲಿದೆ. 211 ಪ್ಲಸ್‌ ಸಿನಿಮಾಗಳಲ್ಲಿ ಸ್ಟಾರ್‌ಗಳ ಹಾಗೂ ಪರಿಚಿತ ಮುಖಗಳ, ಚಿತ್ರರಂಗದ ಮುಂಚೂಣಿ ನಟರ ಸಿನಿಮಾಗಳೆಂದು ಲೆಕ್ಕ ಹಾಕುತ್ತಾ ಹೋದರೆ ಸಿಗುವ ಸಂಖ್ಯೆ 25ರ ಹಾಸುಪಾಸಿನಲ್ಲೇ ಇದೆ. ಮಿಕ್ಕಂತ 186ಕ್ಕೂ ಹೆಚ್ಚು ಹೊಸಬರ ಚಿತ್ರಗಳು ಬಿಡುಗಡೆಯಾಗಿರೋದು ಸ್ಪಷ್ಟ. ಅಲ್ಲಿಗೆ ಒಂದು ಸಾಬೀತಾಗಿದೆ, ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ಚಿತ್ರರಂಗವನ್ನು ಸದಾ ಚಟುವಟಿಕೆಯಲ್ಲಿ ಇಟ್ಟಿರೋದು ಹೊಸಬರೇ.

ಯಾವುದೇ ಚಿತ್ರರಂಗವನ್ನಾದರೂ ತೆಗೆದು ನೋಡಿ, ಅಲ್ಲಿನ ಚಿತ್ರರಂಗವನ್ನು ಸದಾ ಹಸಿರಾಗಿರುವಂತೆ ಹಾಗೂ ನಿರಂತರ ಕೆಲಸ ಕಾರ್ಯಗಳು ನಡೆಯುವಂತೆ ಮಾಡುವುದು ಹೊಸಬರೇ. ಆದರೆ, ಇಂತಹ ಹೊಸಬರಿಗೆ ಗೆಲುವಿನ ಕೊರತೆ ಮಾತ್ರ ಕಾಡುತ್ತಲೇ ಇರುತ್ತದೆ.

ಭಿನ್ನ- ವಿಭಿನ್ನ ಪ್ರಯತ್ನ

ಚಿತ್ರರಂಗಕ್ಕೆ ಸ್ಟಾರ್‌ ಸಿನಿಮಾಗಳು ಎಷ್ಟು ಮುಖ್ಯವೋ ಹೊಸಬರ ಸಿನಿಮಾಗಳು ಅಷ್ಟೇ ಮುಖ್ಯ. ಸ್ಟಾರ್‌ ಸಿನಿಮಾಗಳು ವರ್ಷದ ಜಾತ್ರೆಯಾದರೆ, ಹೊಸಬರ ಸಿನಿಮಾಗಳು ಊರ ದಿನಸಿ ಅಂಗಡಿಯಂತೆ. ನಿರಂತರವಾಗಿ ಚಿತ್ರರಂಗಕ್ಕೆ ಕೆಲಸ ನೀಡುತ್ತಲೇ ಇರುತ್ತವೆ. 2023ರಲ್ಲೂ 185ಕ್ಕೂ ಹೆಚ್ಚು ಹೊಸಬರ ಸಿನಿಮಾಗಳು ಬಿಡುಗಡೆಯಾಗಿವೆ. ಇಲ್ಲಿ ಲವ್‌ಸ್ಟೋರಿ, ಆ್ಯಕ್ಷನ್‌, ಹಾರರ್‌, ಥ್ರಿಲ್ಲರ್‌, ಸಸ್ಪೆನ್ಸ್‌, ಸೇರಿದಂತೆ ಬೇರೆ ಬೇರೆ ಜಾನರ್‌ಗಳನ್ನು ಪ್ರಯತ್ನಿಸಿದ್ದಾರೆ. ಬಹುತೇಕ ಸಿನಿಮಾಗಳು ಅನುಭವದ ಹಾಗೂ ಪೂರ್ವತಯಾರಿಯ ಕೊರತೆಯಿಂದ ಸದ್ದಿಲ್ಲದೇ ಚಿತ್ರಮಂದಿರದಿಂದ ಮಾಯವಾದರೆ, ಒಂದಷ್ಟು ಚಿತ್ರಗಳು ಮೆಚ್ಚುಗೆಗೆ ಪಾತ್ರವಾಗಿವೆ. ಆದರೆ, ಸೂಕ್ತ ಪ್ರೋತ್ಸಾಹ, ಸಿನಿಮಾ ಮಂದಿರದಲ್ಲಿ ಸಿನಿಮಾಗಳನ್ನು ನಿಲ್ಲಿಸುವ ಸಾಮರ್ಥ್ಯದ ಕೊರೆತೆಯಿಂದಾಗಿ ತಣ್ಣಗಾಗಿವೆ.

ವರ್ಷದ ಮೊದಲ ಬ್ರೇಕ್‌ ನೀಡಿದ್ದೇ ಹೊಸಬರು

ಸಿನಿಮಾದ ಗೆಲುವನ್ನು ಊಹಿಸೋದು ಕಷ್ಟ. ಸೂಪರ್‌ ಹಿಟ್‌ ಆಗಬಹುದೆಂದು ಅಭಿಮಾನಿಗಳು ಕಾಯುತ್ತಿದ್ದ ಸ್ಟಾರ್‌ ಸಿನಿಮಾ ಇನ್ನಿಲ್ಲದಂತೆ ಸೋಲಬಹುದು. ಅದೇ ಸದ್ದಿಲ್ಲದೇ ಬಂದ ಹೊಸಬರು ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು. ಈ ವರ್ಷ ಕನ್ನಡ ಚಿತ್ರರಂಗಕ್ಕೆ ಮೊದಲ ಗೆಲುವು ಕೊಟ್ಟಿದ್ದೇ ಹೊಸಬರು. ಅದು “ಡೇರ್‌ ಡೆವಿಲ್‌ ಮುಸ್ತಫಾ’ ಚಿತ್ರದ ಮೂಲಕ. ಸಂಪೂರ್ಣ ಹೊಸಬರೇ ಸೇರಿ ಮಾಡಿದ ಈ ಚಿತ್ರಕ್ಕೆ ಬೆನ್ನೆಲುಬಾಗಿ ಇದ್ದಿದ್ದು ನಟ ಧನಂಜಯ್‌ ಮಾತ್ರ. ಆದರೆ, ಈ ಚಿತ್ರ ಒಂದು ಮಟ್ಟದ ಯಶಸ್ಸನ್ನು ತಂದುಕೊಟ್ಟು ನಿಟ್ಟುಸಿರು ಬಿಡುವಂತೆ ಮಾಡಿತು.

ಇದರ ಜೊತೆಗೆ “ಹೊಂದಿಸಿ ಬರೆಯಿರಿ’ ಚಿತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಕಮರ್ಷಿಯಲ್‌ ಆಗಿ ಕೋಟಿ ಕೋಟಿ ಕಲೆಕ್ಷನ್‌ ಮಾಡಿದ್ದು ಕೂಡಾ ಹೊಸಬರೇ ಸೇರಿ ಮಾಡಿದ “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರ. ಈ ಚಿತ್ರದ ಮೂಲಕ ಇಡೀ ಚಿತ್ರರಂಗಕ್ಕೊಂದು ಭರವಸೆ ಬಂದಿತ್ತು. ಹಾಗಾಗಿ, ಈ ವರ್ಷ ಆರಂಭದ ಗೆಲುವು ನೀಡಿದ್ದು ಕೂಡಾ ಹೊಸಬರೇ. ಹಾಗಂತ ಸ್ಟಾರ್‌ ಸಿನಿಮಾಗಳು ಗೆದ್ದಿಲ್ಲ ಎಂದಲ್ಲ, ಸ್ಟಾರ್‌ ಸಿನಿಮಾಗಳು ಕೂಡಾ ಕಲೆಕ್ಷನ್‌ನಲ್ಲಿ ಜೋರು ಸೌಂಡ್‌ ಮಾಡಿವೆ.

ರವಿಪ್ರಕಾಶ್ ರೈ

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

Food

2024ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ರೆಸಿಪಿ ಯಾವುದು ಗೊತ್ತಾ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.