ಕುಂದಾಪುರ ಕೋಡಿ ಭಾಗದಲ್ಲಿ ರಿಂಗ್‌ ರಸ್ತೆಗೆ ಬೇಡಿಕೆ: ಮಾರ್ಚ್‌ನಲ್ಲಿ ಕಾಮಗಾರಿ ಆರಂಭ


Team Udayavani, Feb 11, 2023, 11:05 AM IST

kunda

ಕುಂದಾಪುರ: ಕುಂದಾಪುರ ನಗರದಲ್ಲಿ ರಿಂಗ್‌ ರಸ್ತೆಗೆ 20 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ. ಈ ರಸ್ತೆ ಪರಿಪೂರ್ಣವಾಗಲು ಇನ್ನೂ 16 ಕೋ.ರೂ. ಅಗತ್ಯವಿದೆ. ಕೋಡಿಗೆ ಅಗತ್ಯವಿರುವಂತೆ ರಿಂಗ್‌ರೋಡ್‌ ಬೇಕೆಂದು ಕೂಗು ಎದ್ದಿದೆ.

ಕುಂದಾಪುರ ನಗರ:ರಿಂಗ್‌ ರಸ್ತೆ

ನಗರದಲ್ಲಿ ರಿಂಗ್‌ ರಸ್ತೆ ನಿರ್ಮಾಣಕ್ಕೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು 20 ಕೋ.ರೂ. ಸರಕಾರದಿಂದ ಮಂಜೂರು ಮಾಡಿಸಿದ್ದಾರೆ.915 ಮೀ. ಹಾಗೂ 1,110 ಮೀ.ನಂತೆ ತಲಾ 9.98 ಕೋ.ರೂ. ವೆಚ್ಚದಲ್ಲಿ ಒಟ್ಟು 19.96 ಕೋ.ರೂ.ಗಳಲ್ಲಿ ಕಾಮಗಾರಿ ನಡೆಯಲಿದೆ. ರಸ್ತೆಯ ಎಡ ಬದಿಯಲ್ಲಿ 0.9 ಮೀ. ಚರಂಡಿ, ಇನ್ನೊಂದು ಬದಿಯಲ್ಲಿ ತಡೆಗೋಡೆ ಇರಲಿದ್ದು ಜಾಗ ಲಭ್ಯತೆ ಇರುವಲ್ಲಿ 3 ಮೀ. ಅಗಲದ ಪಾದಚಾರಿ ಪಥ ಇಂಟರ್‌ಲಾಕ್‌ ಹಾಕಿ ಇರಲಿದೆ. ರಸ್ತೆ 7.5 ಮೀ. ಅಗಲ ಇರಲಿದೆ. 18 ತಿಂಗಳ ಕಾರ್ಯಾವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕೆಂಬ ಶರತ್ತಿದೆ.

ಇಲಾಖೆ ಮೂಲಗಳ ಪ್ರಕಾರ ಎರಡು ಗುತ್ತಿಗೆ ಇಬ್ಬರಿಗೆ ಆಗಿದೆ. ಒಬ್ಬ ಗುತ್ತಿಗೆದಾರರ ಜತೆಗೆ ಜ.24ರಂದು ಒಪ್ಪಂದ ಕೂಡ ಆಗಿದ್ದು ಕಾಮಗಾರಿ ಆರಂಭಿಸಲು ಹಸುರು ನಿಶಾನೆ ದೊರೆತಂತಾಗಿದೆ. ಮಾರ್ಚ್‌ ಮೊದಲ ವಾರದ ಒಳಗೆ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ಸಿಆರ್‌ಝಡ್‌ ನಿರಾಕ್ಷೇಪಣೆಗೆ ಸಂಬಂಧಿಸಿದಂತೆ ಜಿಲ್ಲಾ ಹಂತದಲ್ಲಿ ಕಡತ ವಿಲೇವಾರಿ ಆಗಿದ್ದು ಬೆಂಗಳೂರು ಹಂತದಲ್ಲಿ ಅನುಮತಿಗೆ ಬಾಕಿ ಇದೆ. ಈಗ ಮಂಜೂರಾದ ಮೊತ್ತದಲ್ಲಿ ಪೂರ್ಣಪ್ರಮಾಣದಲ್ಲಿ ಕಾಮಗಾರಿ ಅಸಾಧ್ಯವಾದ ಕಾರಣ ಮತ್ತೆ 16 ಕೋ.ರೂ. ಅಗತ್ಯವಿದೆ. ಶಾಸಕರು ಇದರ ಮಂಜೂರು ಪ್ರಯತ್ನದಲ್ಲಿ ನಿರತರಾಗಿದ್ದಾರೆ ಎಂದು ಪುರಸಭೆ ಸದಸ್ಯ ಮೋಹನದಾಸ ಶೆಣೈ ಹೇಳಿದ್ದಾರೆ.

ಇತ್ತ ಗಮನಹರಿಸಿ

ಕೋಡಿ ಭಾಗದಲ್ಲಿ ಸೀವಾಕ್‌ ನಿರ್ಮಾಣವಾಗಿದೆ. ಪ್ರವಾಸೋದ್ಯಮಕ್ಕೆ ನೀಲಿ ನಕ್ಷೆ ತಯಾರಾಗಿದೆ. ಈಚೆಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದರು. ಕುಂದಾಪುರದ ಮುಕುಟ ಮಣಿ ಕೋಡಿ. ಹೊರ ಜಿಲ್ಲೆಯಿಂದ ಬರುವ ಅನೇಕರು ಕಡಲ ತೀರ ನೋಡಲು ಬರುವುದು ಕೋಡಿಗೆ. ಆದರೆ ಅಲ್ಲಿನ ಸ್ಥಿತಿ ನೋಡಿದರೆ ಬೇಸರ ಆಗುತ್ತದೆ. ಸರಕಾರ ಹಾಗೂ ಪುರಸಭೆ ಗಮನ ನೀಡಿದರೆ ಮಲ್ಪೆ ಕಡಲ ತೀರದ ಮಾದರಿಯಲ್ಲಿ ಕೋಡಿ ಕಡಲತೀರ ಕಂಗೊಳಿಸುವುದರಲ್ಲಿ ಸಂಶಯವಿಲ್ಲ.

ಉಪ್ಪು ನೀರಿನ ಸಮಸ್ಯೆ

ಈ ಪರಿಸರದಲ್ಲಿ ಅದೆಷ್ಟೋ ವರ್ಷದಿಂದ ಹೊಳೆಯ ಉಪ್ಪು ನೀರು ಊರಿನ ಅರ್ಧ ಭಾಗದಷ್ಟು ಭೂಮಿಯನ್ನೇ ನಾಶ ಮಾಡಿದೆ. ಕೋಡಿ ಗದ್ದೆಯಲ್ಲಿ ನೀರು ಸೇರಿ ಕೊಳೆತು ನಾರುವ ವಾಸನೆಯ ಜತೆಗೆ ಹಗಲು ರಾತ್ರಿ ಎನ್ನದೆ ಸೊಳ್ಳೆಗಳ ಕಾಟದಿಂದ ಜನರು ಬೇಸತ್ತು ಹೋಗಿದ್ದಾರೆ. ಇಲ್ಲಿಯ ವ್ಯವಸ್ಥೆ ಕೇಳುವವರೇ ಇಲ್ಲ. ಗ್ರಾಮಸ್ಥರ ಯಾವ ಮನವಿಗೂ ಪುರಸಭೆ ಸ್ಪಂದಿಸಲೇ ಇಲ್ಲ ಎನ್ನುತ್ತಾರೆ ಶರತ್‌ ಶೇರೆಗಾರ್‌. ಕುಂದಾಪುರಕ್ಕೆ ಕೋಡಿ ಅನತಿ ದೂರ ಇರುವುದಿಂದಲೋ ಕೋಡಿ ಪುರಸಭೆ ವ್ಯಾಪ್ತಿಯಲ್ಲಿ ಇದೆಯೋ ಇಲ್ಲವೋ ಎಂಬ ಭಾವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಇದ್ದಿರಬಹುದು ಎನ್ನುತ್ತಾರೆ ಕೋಡಿ ಅಶೋಕ್‌ ಪೂಜಾರಿ.

ಕುಂದಾಪುರ ಮೆಸ್ಕಾಂ ಗ್ರಾ. ಪಂ. ಲೆಕ್ಕದಲ್ಲಿ ಕೋಡಿ ಭಾಗದ ವಿದ್ಯುತ್‌ ಬಿಲ್‌ ಸಂಗ್ರಹಿಸಿ ಕೋಡಿ ಪುರಸಭೆ ವ್ಯಾಪ್ತಿಯಲ್ಲಿ ಇರುವುದರಿಂದ ಹಳೆ ಬಾಕಿಯನ್ನೂ ನೀಡಬೇಕೆಂದು ನೋಟಿಸ್‌ ನೀಡಿತ್ತು. ಕೋಡಿ ಪುರಸಭೆ ವ್ಯಾಪ್ತಿಗೆ ಸೇರಿದೆ ಎಂದು ಜನಸಾಮಾನ್ಯರಿಗೆ ವಿದ್ಯುತ್‌ ಬಿಲ್‌ ಕೂಡ ಹೆಚ್ಚುವರಿ ಪಡೆಯಲಾಗುತ್ತಿದೆ. ಆದರೆ ಪುರಸಭೆಯಿಂದ ಸೌಲಭ್ಯದ ವಿಷಯ ಬಂದಾಗ ಕೋಡಿಯನ್ನು ಮೀಸಲಿಡಲಾಗುತ್ತದೆ ಎನ್ನುವುದು ಈ ಭಾಗದ ಜನರ ಅಳಲು.

16 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಕೆ ಈಗ ಮಂಜೂರಾದ ಮೊತ್ತದಲ್ಲಿ ಪ್ರಭಾಕರ ಟೈಲ್ಸ್‌ ವರೆಗೆ ಈ ಕಾಮಗಾರಿ ನಡೆಯಲಿದ್ದು ಮುಂದಿನ ಕಾಮಗಾರಿಗೆ 16 ಕೋ.ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ.

-ಹರ್ಷವರ್ಧನ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌

ರಿಂಗ್‌ ರಸ್ತೆಯೇ ಪರಿಹಾರ
ಇಲ್ಲಿನ ಸಮಸ್ಯೆ ನಿವಾರಣೆಗೆ ಪರಿಹಾರ ರಿಂಗ್‌ ರಸ್ತೆ ಎನ್ನುತ್ತಾರೆ ಈ ಭಾಗದ ಜನ. ಕೋಡಿ ಸೇತುವೆ ಬಳಿಯ ಜಟ್ಟಿಗೇಶ್ವರ ದೇವಸ್ಥಾನ ಎದುರಿನಿಂದ ಸೀವಾಕ್‌ ಬಳಿಯ ಮೀನುಗಾರಿಕಾ ಬೋಟ್‌ ನಿಲ್ಲುವ ಜೆಟ್ಟಿಯ ತನಕ ಕೇವಲ 500 ಮೀಟರ್‌ ಆಸುಪಾಸಿನ ಅಂತರದ ರಿಂಗ್‌ ರಸ್ತೆನಿರ್ಮಿಸಬೇಕು. ನಗರದ ರಿಂಗ್‌ ರಸ್ತೆಗೆ ರೂ. 20 ಕೋಟಿ ಅನುದಾನ ಮಂಜೂರು ಆಗಿರುವಾಗ ಈ ಸಣ್ಣ ಕಾಮಗಾರಿಗೆ 2-3 ಕೋಟಿ ರೂ. ಅನುದಾನ ತರುವುದು ಶಾಸಕರಿಗೆ ಕಷ್ಟವಲ್ಲ.

ಕೋಡಿ ಸೇತುವೆ ಬಳಿಯಿಂದ ಸೀವಾಕ್‌ ಗೆ ಈ ನೇರ ರಸ್ತೆ ಬಹಳಷ್ಟು ಉಪಕಾರವಾಗಲಿದೆ. ಈಗಾಗಲೇ ಶಿವಾಲಯ ಮೂಲಕ ಇಕ್ಕಟ್ಟಾದ ರಸ್ತೆಯಲ್ಲಿ ವಾರಾಂತ್ಯದಲ್ಲಿರಜಾದಿನಗಳಲ್ಲಿ ಸಂಜೆಯ ಹೊತ್ತು ಬಹಳಷ್ಟು ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಸುತ್ತು ಬಳಸಿ ಸಾಗುವ ಸುಮಾರು 1.5 ಕಿ.ಮೀ. ಉಳಿಯುತ್ತದೆ. ಶಾಸಕರು ಆದ್ಯತೆಯ ಮೇರೆಗೆ ಈ ಕಾಮಗಾರಿಗೆ ಮಂಜೂರಾತಿ ಒದಗಿಸಿದಲ್ಲಿ ಪ್ರವಾಸಿಗರಿಗೆ, ವಿಹಾರಾರ್ಥಿಗಳಿಗೆ ಅನುಕೂಲವಾಗಲಿದೆ. ಶಿವಾಲಯದ ಆಸುಪಾಸಿನ ನಿವಾಸಿಗಳಿಗೆ ಕಿರಿಕಿರಿ ಕೂಡ ತಪ್ಪಲಿದೆ.

_ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.