ಬಾಂಗ್ಲಾ ದೇಶದಲ್ಲಿ ಗಲಭೆ..ಸಿಂಧನೂರಿನಲ್ಲಿ ದುಗುಡ!-1971ರ ನಿರಾಶ್ರಿತ ಕುಟುಂಬದ ಕಥನ…

ಈ ಕ್ಯಾಂಪ್‌ಗಳಲ್ಲಿ ಪ್ರಸ್ತುತ ಸುಮಾರು 2-3 ಸಾವಿರದಷ್ಟು ಕುಟುಂಬಗಳಿವೆ..

Team Udayavani, Aug 8, 2024, 5:04 PM IST

ಬಾಂಗ್ಲಾ ದೇಶದಲ್ಲಿ ಗಲಭೆ..ಸಿಂಧನೂರಿನಲ್ಲಿ ದುಗುಡ!-1971ರ ನಿರಾಶ್ರಿತ ಕುಟುಂಬದ ಕಥನ…

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರಿಯಾಬಿಟೇಶನ್‌ ಕ್ಯಾಂಪ್‌(ಆರ್‌.ಎಚ್‌.ಕ್ಯಾಂಪ್‌) ಗಳಲ್ಲಿ ಆತಂಕ-ದುಗುಡಕ್ಕೆ ಕಾರಣವಾಗಿದೆ. ಹೌದು. ನೆರೆಯ ದೇಶದ ವಿದ್ಯಮಾನ ಅದರಲ್ಲೂ
ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿ, ದೌರ್ಜನ್ಯ, ಹಿಂದೂಗಳ ಮನೆ-ಆಸ್ತಿ, ದೇವಸ್ಥಾನ ಧ್ವಂಸದಂತಹ ಕೃತ್ಯಗಳು ಸಿಂಧನೂರು ತಾಲೂಕಿನ ನಿರಾಶ್ರಿತ ಕ್ಯಾಂಪ್‌ಗಳಲ್ಲಿ ಸರಿ ಸುಮಾರು ನಾಲ್ಕು ದಶಕಗಳಿಂದ ಬದುಕು ಕಟ್ಟಿಕೊಂಡು ಇಲ್ಲಿಯವರೇ ಆಗಿರುವ ಮೂಲತಃ ಬಾಂಗ್ಲಾ ನಿವಾಸಿಗಳ ನೋವು ದಿನದಿಂದ ದಿನಕ್ಕೆ ಹೆಚ್ಚುವಂತೆ ಮಾಡಿದೆ.

1971ರಲ್ಲಿ ನಡೆದ ಬಾಂಗ್ಲಾ ದೇಶ ವಿಮೋಚನಾ ಸಂದರ್ಭ ಪಾಕಿಸ್ತಾನದ ಸೇನೆಯಿಂದ ವಿಶೇಷವಾಗಿ ಹಿಂದೂಗಳ ಮೇಲೆ ಅತ್ಯಾಚಾರ, ಆಸ್ತಿ-ಪಾಸ್ತಿ ನಷ್ಟ ಅಪಾರ ಪ್ರಮಾಣದಲ್ಲಿ ನಡೆದಿತ್ತು. ಆಗ ಬಾಂಗ್ಲಾ ತೊರೆದು ಭಾರತಕ್ಕೆ ಬಂದ ನಿರಾಶ್ರಿತ ಹಿಂದೂ ಕುಟುಂಬಗಳಿಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಸರ್ಕಾರ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುಂಗಭದ್ರ ಜಲಾಶಯದ ಎಡದಂಡೆ ನಾಲೆಗೆ ಹೊಂದಿಕೊಂಡಂತೆ ಐದು ಕ್ಯಾಂಪ್‌ ನಿರ್ಮಿಸಿ, ಐದು ಸಾವಿರ ಎಕರೆಯಷ್ಟು ಭೂಮಿ ಹಂಚಿಕೆ ಮಾಡಿ ಆಶ್ರಯ ಕಲ್ಪಿಸಿತ್ತು. ಈ ಕ್ಯಾಂಪ್‌ಗಳಲ್ಲಿ ಪ್ರಸ್ತುತ ಸುಮಾರು 2-3 ಸಾವಿರದಷ್ಟು ಕುಟುಂಬಗಳಿದ್ದು, ಎರಡ್ಮೂರು ತಲೆಮಾರುಗಳನ್ನು ಇಲ್ಲಿಯೇ ಕಳೆದಾಗಿದೆ.

ಮರುಕಳಿಸಿದ ಆತಂಕ: ನಿರಾಶ್ರಿತರಾಗಿ ಭಾರತಕ್ಕೆ ಬಂದು ನೆಲೆಸಿದ್ದರೂ ಇಂದಿಗೂ ಬಾಂಗ್ಲಾದಲ್ಲಿನ ಸಂಬಂಧಿಕರ ಜತೆಗಿನ ಬಾಂಧವ್ಯ ಮುಂದುವರಿದಿತ್ತು. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೋಗಿ ಬರುವುದು ನಡೆದೇ ಇತ್ತು. ಆದರೆ ಈಗಿನ ಹಿಂಸೆ-ದೌರ್ಜನ್ಯ ನೋಡಿದರೆ ನಮ್ಮ ಸಂಬಂಧಿಕರು 43 ವರ್ಷಗಳ ಹಿಂದೆ ನಾವು ಅನುಭವಿಸಿದ ಸ್ಥಿತಿಯನ್ನೇ ಅನುಭವಿಸುತ್ತಿರುವಂತಿದೆ. ಈಗ ಸಂಬಂಧಿಕರ ಸ್ಥಿತಿ-ಗತಿ ವಿಚಾರಿಸಲು ಫೋನ್‌ ಸಂಪರ್ಕ ಇಲ್ಲ. ಅವರ ಜೀವಕ್ಕೆ ಏನಾದರೂ ಅಪಾಯ ಎದುರಾಗಿದೆಯಾ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ಯಾವ ಮಾಹಿತಿಯೂ ದೊರೆಯುತ್ತಿಲ್ಲ. ಕನಿಷ್ಟ ಅವರ ಸಂಪರ್ಕಕ್ಕಾದರೂ ಅವಕಾಶ ದೊರೆಯಲಿ ಎಂಬ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ.

ಬಾಂಗ್ಲಾದಲ್ಲಿ 1947ರಲ್ಲಿ ಹಿಂದೂಗಳ ಜನಸಂಖ್ಯೆ ಶೇ.31ಆಗಿತ್ತು. 1961ರ ವೇಳೆಗೆ ಅದು ಶೇ.19ಕ್ಕೆ ಕುಸಿದರೆ, 1971ರ ಘಟನೆ ನಂತರ 1974 ಅವಧಿಗೆ ಶೇ.14ಕ್ಕೆ ಕುಸಿದಿತ್ತು. ಈಗ ಬಾಂಗ್ಲಾದಲ್ಲಿ ಹಿಂದೂಗಳ ಸಂಖ್ಯೆ ಶೇ.5-9ರಷ್ಟಿದೆ. ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ, ದೇವಸ್ಥಾನ-ಮಂದಿರಗಳ ಮೇಲೆ ದಾಳಿಯಂತಹ ಘಟನೆಗಳು ಆಗಾಗ ನಡೆಯುತ್ತಿದ್ದರೂ ಈಗ  ನಡೆದಿರುವ ಗಲಭೆ ಬಳಿಕ ಹಿಂದೂಗಳು ಅಲ್ಲಿ ಬದುಕುವುದು ಕಷ್ಟವಾಗಬಹುದು ಎಂದು ಹೇಳುತ್ತಾರೆ.

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ದಾಳಿ ನಮ್ಮನ್ನು ಆತಂಕಕ್ಕೀಡು ಮಾಡಿದೆ. ಸುಮಾರು 43 ವರ್ಷಗಳ ಹಿಂದೆ ನಮ್ಮ ತಾತ ಸೇರಿದಂತೆ ಅನೇಕ ಕುಟುಂಬಗಳು ಕರ್ನಾಟಕದಲ್ಲಿ ನೆಲೆ ಕಂಡುಕೊಂಡಿದ್ದರೂ, ಇಂದಿಗೂ ಅಲ್ಲಿನ ನಮ್ಮ
ಸಂಬಂಧಿಕರೊಂದಿಗೆ ಸಂಪರ್ಕ ಇದೆ. ಗಲಭೆ ನಂತರದಲ್ಲಿ ನೇರ ಸಂಪರ್ಕ ಇಲ್ಲ. ಫೋನ್‌ ಸಂಪರ್ಕವೂ ಸ್ಥಗಿತಗೊಳಿಸಲಾಗಿದೆ. ಪಶ್ಚಿಮ ಬಂಗಾಲದಲ್ಲಿರುವ ನಮ್ಮ ಸಂಬಂಧಿಯೊಬ್ಬರ ಮೂಲಕ ಮಾಹಿತಿ ಪಡೆಯುತ್ತಿದ್ದೇವೆ.
ಪ್ರದೀಪ, ಆರ್‌.ಎಚ್‌.ಕ್ಯಾಂಪ್‌ ನಿವಾಸಿ.

■ ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.