ಭ್ರಷ್ಟ BJP ಸರಕಾರ ಕಿತ್ತೂಗೆಯಿರಿ: ಪ್ರಿಯಾಂಕಾ
ರಾಜ್ಯ ಬಿಜೆಪಿ ಸರಕಾರ 1.5 ಲಕ್ಷ ಕೋಟಿ ರೂ. ಲೂಟಿ ಮಾಡಿದೆ
Team Udayavani, Apr 26, 2023, 7:31 AM IST
ಹೆಳವರಹುಂಡಿ/ಹನೂರು: ಮೈಸೂರು ಜಿಲ್ಲೆಯ ವರುಣಾ ಹಾಗೂ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಗಳವಾರ ಚುನಾವಣ ಪ್ರಚಾರ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು, ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರಲ್ಲದೆ, ರಾಜ್ಯ ಬಿಜೆಪಿ ಸರಕಾರದ ರಚನೆಯೇ ದುರಾಸೆ, ಆಮಿಷದಿಂದ ಕೂಡಿತ್ತು. ಇಂತಹ ಸರಕಾರವನ್ನು ಈ ಚುನಾವಣೆಯಲ್ಲಿ ಕಿತ್ತೂಗೆಯಬೇಕು ಎಂದು ಕರೆ ನೀಡಿದರು.
ತಿ.ನರಸೀಪುರದ ಹೆಳವರಹುಂಡಿ ಗ್ರಾಮದಲ್ಲಿ ಮಾತನಾಡಿದ ಪ್ರಿಯಾಂಕಾ, ರಾಜ್ಯ ಬಿಜೆಪಿ ಸರಕಾರ 1.5 ಲಕ್ಷ ಕೋಟಿ ರೂ. ಲೂಟಿ ಮಾಡಿದೆ ಎಂದು ಗಂಭೀರ ಆರೋಪ ಮಾಡಿದರಲ್ಲದೆ, ಈ ಹಣದಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಡಬಹುದಿತ್ತು, ಆಸ್ಪತ್ರೆಗಳನ್ನು ನಿರ್ಮಿಸಬಹುದಿತ್ತು, 750 ಕಿ.ಮೀ. ಮೆಟ್ರೋ ರೈಲು ಹಳಿಯನ್ನು ನಿರ್ಮಿಸಬಹುದಿತ್ತು, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದಿತ್ತು ಎಂದು ಹೇಳಿದರು.
ಮಹಾತ್ಮರ ಆಶೀರ್ವಾದ ಬೇಕು
ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದದಿಂದ ತಪ್ಪಿಸಿಕೊಳ್ಳಬಾರದೆಂದರೆ ಏನರ್ಥ? ಬಸವೇಶ್ವರರು, ನಾರಾಯಣಗುರು ಅವರಂತಹ ಮಹಾತ್ಮರ ಆಶೀರ್ವಾದ ನಮಗೆ ಮುಖ್ಯವಾಗಬೇಕು. ಚುನಾವಣೆಯಲ್ಲಿ ಮತ ಯಾಚಿಸುವಾಗ ನರೇಂದ್ರ ಮೋದಿ ಅವರ ಆಶೀರ್ವಾದ ಎಂದರೆ ಅದು ಕನ್ನಡ ನಾಡಿಗೆ ಮಾಡಿದ ಅಪಮಾನ ಎಂದರು.
ನಂದಿನಿ ದುರ್ಬಲಗೊಳಿಸಲು ಬಿಜೆಪಿ ಯತ್ನ
ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಮಾತನಾಡಿದ ಪ್ರಿಯಾಂಕಾ ವಾದ್ರಾ, ಈ ರಾಜ್ಯದ ನಂದಿನಿಯನ್ನು ದುರ್ಬಲಗೊಳಿಸಿ ಗುಜರಾತ್‌ನ ಅಮುಲ್ ಸಂಸ್ಥೆಯ ಮಾರಾಟ ಹೆಚ್ಚಳ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಹಾಲಿನ ಉತ್ಪಾದನೆ ಹೆಚ್ಚಾಗಿ ಆ ಹಾಲನ್ನು ಸರಕಾರಿ ಶಾಲೆ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿತ್ತು. ಆದರೆ ಬಿಜೆಪಿ ಸರಕಾರ ನಂದಿನಿ ಹಾಲಿನ ಕೊರತೆಯಿದೆ ಎಂಬ ಕಾರಣ ನೀಡುತ್ತಿದೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಉತ್ಪಾದನೆಯಾಗುತ್ತಿದ್ದ ಹಾಲು ಈಗ ಎಲ್ಲಿ ಹೋಗುತ್ತಿದೆ ಎಂದು ಕಿಡಿಕಾರಿದರು.
ಗಿರಿಜನ ಮಹಿಳೆಯರೊಂದಿಗೆ ಪ್ರಿಯಾಂಕಾ ಸಂವಾದ
ನಮ್ಮ ಪಕ್ಷ ಅಧಿಕಾರಕ್ಕೆ ಬರಲಿ, ಬಿಡಲಿ. ನಿಮ್ಮ ಗ್ರಾಮದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ನಿಮ್ಮ ಹೆಸರು ಮತ್ತು ಊರಿನ ಹೆಸರು ಬರೆದುಕೊಡಿ.
-ಹೀಗೆಂದು ಹೇಳಿದ ಪ್ರಿಯಾಂಕಾ ವಾದ್ರಾ ಬೇಡಗಂಪಣ ಮಹಿಳೆಯಿಂದ ಮಾಹಿತಿ ಪಡೆದರು. ಪಟ್ಟಣದಲ್ಲಿ ಚುನಾವಣ ಪ್ರಚಾರ ಸಭೆಯ ಬಳಿಕ ಬೇಡಗಂಪಣ ಮತ್ತು ಗಿರಿಜನ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂವಾದದಲ್ಲಿ ಮಲೆ ಮಹದೇಶ್ವರ ಬೆಟ್ಟ ಸಮೀಪದ ಕೊಕ್ಕಬರೆ ಗ್ರಾಮದ ಬೊಮ್ಮಮ್ಮ ಮಾತನಾಡಿ, ನಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕವಿಲ್ಲ, ರಸ್ತೆಯಿಲ್ಲ, ಗ್ರಾಮದಲ್ಲಿ 5ನೇ ತರಗತಿವರೆಗೆ ಮಾತ್ರ ಶಾಲೆಯಿದ್ದು, ಬಳಿಕ ಬೇರೆಡೆಗೆ ಕಳುಹಿಸಬೇಕಿದೆ. ನಮ್ಮ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಪ್ರಿಯಾಂಕಾ ವಾದ್ರ, ನಮ್ಮ ಸರಕಾರ ಬರಲಿ ಬಿಡಲಿ, ಗ್ರಾಮಕ್ಕೆ ನಮ್ಮ ಜನರನ್ನು ಕಳುಹಿಸಿಕೊಟ್ಟು, ಏನಾಗಬೇಕೋ ಅದನ್ನೆಲ್ಲಾ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಒಡೆಯರಪಾಳ್ಯ ಸಮೀಪದ ಹೊಸಪೋಡು ಗ್ರಾಮದ ಗಿರಿಜನ ಮಹಿಳೆ ತಿರುಮಮ್ಮ ಮಾತನಾಡಿ, ನಮ್ಮ ಗ್ರಾಮಕ್ಕೆ ಸಮರ್ಪಕವಾದ ರಸ್ತೆಯಿಲ್ಲ. ಶಾಲೆಯಿಲ್ಲ ಎಂದು ದೂರಿದರು. ನಾವು ಆದಿವಾಸಿ ಸೋಲಿಗರೆಲ್ಲ ಇಂದಿರಾಗಾಂಧಿ ಮತ್ತು ಅವರ ಪಕ್ಷವನ್ನೇ ಬೆಂಬಲಿಸುವುದು ಎಂದಾಗ ವೇದಿಕೆಯಿಂದ ಕೆಳಗಿಳಿದ ಪ್ರಿಯಾಂಕಾ ವಾದ್ರಾ, ತಿರುಮಮ್ಮ ಅವರನ್ನು ಅಪ್ಪಿಕೊಂಡರು. ನೀವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ನಿಮ್ಮ ಎಲ್ಲ ಕೆಲಸಗಳನ್ನು ಮಾಡಿಕೊಡಲಾಗುವುದು. ನೀವೂ ಸಹ ಮುಂದುವರೆಯಬಹುದು ಎಂದು ನಗುಮೊಗದಿಂದ ಹೇಳಿದರು.ನಾನು ಈ ಹಿಂದೆ ಹುತ್ತೂರು ಗ್ರಾಪಂ ಸದಸ್ಯೆಯಾಗಿದ್ದೆ. ಇದೀಗ ಪ್ರಿಯಾಂಕ ಅವರು ನನ್ನ ಬಳಿ ಮಾತನಾಡಿ ನನ್ನನ್ನು ತಬ್ಬಿಕೊಂಡಿರುವುದು ಸಂತಸವಾಗಿದೆ ಎಂದು ತಿರುಮಮ್ಮ ಹರ್ಷ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.