ಮೂರು ಗಿರಿಗಳ ಕಥೆ ಹೇಳಲು ಹೊರಟ “ಹರಿಕಥೆಯಲ್ಲ ಗಿರಿಕಥೆ ಸಿನಿಮಾ”..!
ಪ್ರಮೋದ್ ಶೆಟ್ಟಿ ಕೈಗೆ ಸಿಕ್ಕಿ ಬಿದ್ದಿದ್ದೇಕೆ ಎಂಬ ಪ್ರಶ್ನೆ ತಲೆಯಲ್ಲಿ ಕೊರೆಯುತ್ತಿರಬೇಕಲ್ಲವಾ..?
Team Udayavani, Jun 21, 2022, 10:59 AM IST
ಬೆಂಗಳೂರು: ಕಥಾ ಸಂಗಮ ಸಿನಿಮಾ ಎಲ್ಲರಿಗೂ ನೆನಪಿದ್ದೆ ಇರುತ್ತದೆ. ಯಾಕಂದ್ರೆ ಈ ಸಿನಿಮಾವನ್ನು ಮಾಡಿದ್ದು ರಿಷಭ್ ಶೆಟ್ಟಿ. ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಾಗಿನಿಂದಲೂ ಒಂದಷ್ಟು ಪ್ರಯೋಗಾತ್ಮಕ, ಹೊಸತನಗಳಿಗೆ ತೆರೆದುಕೊಳ್ಳುವ ಗುಣದವರು ಈ ರಿಶಭ್ ಶೆಟ್ಟಿ. ಇದೀಗ ಅಂಥದ್ದೇ ಭಿನ್ನವಾದ ಕಥೆಯೊಂದಿಗೆ, ಮತ್ತೊಮ್ಮೆ ಜನರ ಮನಸ್ಸಲ್ಲಿ ಉಳಿದುಕೊಳ್ಳುವಂತ ಸಿನಿಮಾ ಕೊಡಲು ಸಜ್ಜಾಗಿದ್ದಾರೆ. ಇದು ಹರಿಕಥೆಯಲ್ಲ ಗಿರಿಕಥೆ ಸಿನಿಮಾ ಬಗೆಗಿನ ವಿಚಾರ.
ಈಗಾಗಲೇ ಟ್ರೇಲರ್ ವೀಕ್ಷಿಸಿದ್ದೀರಿ. ಸಿನಿಮಾದಲ್ಲಿ ಸಂಪೂರ್ಣವಾಗಿ ನಗುವಿನ ಪ್ಯಾಕ್ ಸಿಗುವ ಭರವಸೆಯನ್ನು ಇಟ್ಟುಕೊಂಡಿರುತ್ತೀರಾ. ಇದು ಮೂರು ಗಿರಿಗಳ ಕಥೆಯನ್ನು ಹೊಂದಿದೆ ಎಂಬ ಬಗ್ಗೆ ಚಿತ್ರತಂಡವೂ ಹೇಳಿತ್ತು, ಟ್ರೇಲರ್ ನಲ್ಲೂ ಅದು ಅನಾವರಣವಾಗಿದೆ. ಆದ್ರೆ ಆ ಮೂರು ಗಿರಿಗಳಿದ್ದಾರಲ್ಲ ಡೈರೆಕ್ಟರ್ ಗಿರಿ, ವಿಲನ್ ಗಿರಿ, ಹೀರೋಯಿನ್ ಗಿರಿಜಾ. ಈ ಮೂವರು ಒಟ್ಟಾಗಿ ಪ್ರಮೋದ್ ಶೆಟ್ಟಿ ಕೈಗೆ ಸಿಕ್ಕಿ ಬಿದ್ದಿದ್ದೇಕೆ ಎಂಬ ಪ್ರಶ್ನೆ ತಲೆಯಲ್ಲಿ ಕೊರೆಯುತ್ತಿರಬೇಕಲ್ಲವಾ..? ಅದಕ್ಕೆ ಉತ್ತರ ಜೂನ್ 23 ರಂದು ರಾಜ್ಯಾದ್ಯಂತ ಎಲ್ಲಾ ಥಿಯೇಟರ್ ನಲ್ಲೂ ಸಿಗಲಿದೆ.
ಸಿನಿಮಾ ತಂಡ ಮೊದಲಿನಿಂದಲೂ ಸಾಕಷ್ಟು ಜಾಣ ನಡೆಯನ್ನು ಅನುಸರಿಸುತ್ತಲೇ ಬಂದಿದೆ. ಸಿನಿಮಾದ ಕಥೆ ಬಗ್ಗೆ ಕೊಂಚವೂ ಸುಳಿವು ಬಿಟ್ಟುಕೊಟ್ಟಿಲ್ಲ. ಈಗಲೂ ಆ ಕ್ಯೂರಿಯಾಸಿಟಿ, ಸೀಕ್ರೇಟ್ ಅನ್ನು ಹಾಗೆಯೇ ಕಾಪಾಡಿಕೊಂಡಿದೆ. ಗಿರಿಗಳ ಕಥೆ, ಆ ಗಿರಿಗಳು ಯಾರ್ಯಾರು ಎಂಬುದನ್ನಷ್ಟೇ ಬಿಟ್ಟುಕೊಟ್ಟಿದೆ. ಒಂದು ಲೈನ್ ಇಷ್ಟೊಂದು ಮಜಭೂತಾಗಿದೆ. ಇನ್ನು ಪೂರ್ಣ ಸಿನಿಮಾದಲ್ಲಿ ಏನೆಲ್ಲಾ ಇರುತ್ತೆ ಎಂಬುದು ತೆರೆಯ ಮೇಲೆ ವೀಕ್ಷಿಸಬೇಕು.
ಸದ್ಯ ಟೀಸರ್, ಟ್ರೇಲರ್ ಹಾಡಿನಿಂದ ಸದ್ದು ಮಾಡಿದ್ದ ಹರಿಕಥೆಯಲ್ಲ ಗಿರಿಕಥೆ ಸಿನಿಮಾ ರಿಲೀಸ್ ಗೆ ಹತ್ತಿರವಿದೆ. ಜೂನ್ 23 ಕ್ಕೆ ತೆರೆಗೆ ಬರಲಿದೆ. ಈ ಸಿನಿಮಾವನ್ನು ಸಂದೇಶ್ ಬ್ಯಾನರ್ ನಡಿ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದು, ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಹೊನ್ನವಳ್ಳಿ ಕೃಷ್ಣ, ದಿನೇಶ್ ಮಂಗ್ಳೂರ್, ತುಳು ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ರಘು ಪಾಂಡೇಶ್ವರ್ ಮುಂತಾದವರ ತಾರಾಗಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.