Road Development: ದ.ಕನ್ನಡ ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿಗೆ 42 ಕೋ. ರೂ. ಅನುದಾನ
ಕೇಂದ್ರ ಸರ್ಕಾರದ ರಸ್ತೆ, ಮೂಲಸೌಕರ್ಯ ನಿಧಿಯಿಂದ ಬಿಡುಗಡೆ, ಶೀಘ್ರದಲ್ಲೇ ಕಾಮಗಾರಿ ಆರಂಭ: ಸಂಸದ ಕ್ಯಾ. ಬ್ರಿಜೇಶ್ ಚೌಟ
Team Udayavani, Sep 3, 2024, 7:12 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಟ್ಟು 42 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು, ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅಡಿ ಈ ಅನುದಾನ ನೀಡಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 74.30 ಕಿಲೋ ಮೀಟರ್ ರಸ್ತೆಗಳ ಅಭಿವೃದ್ಧಿಪಡಿಸಲಾಗುತ್ತದೆ. ಈ ಎಲ್ಲಾ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ 42 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಧನ್ಯವಾದ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಯಾವೆಲ್ಲ ರಸ್ತೆಗಳ ಅಭಿವೃದ್ದಿ ಕಾಮಗಾರಿಗೆ ಎಷ್ಟು ಅನುದಾನ ಸಿಕ್ಕಿದೆ?
1. ಮಂಗಳೂರು ತಾಲೂಕು ವ್ಯಾಪ್ತಿಯ ಮಾಣಿ-ಉಳ್ಳಾಲ ರಾಜ್ಯ ಹೆದ್ದಾರಿಯ 5.7 ಕಿ.ಮೀ ರಸ್ತೆ ನವೀಕರಣಕ್ಕೆ 3.42 ಕೋ.ರೂ.
2. ಉಚ್ಚಿಲ-ದೇರಳಕಟ್ಟೆ ಜಿಲ್ಲಾ ರಸ್ತೆಯ 1 ಕಿ.ಮೀ. ನವೀಕರಣಕ್ಕೆ 60 ಲಕ್ಷ ರೂ.
3. ಪೆರ್ಮನ್ನೂರು-ಪಾವೂರು ರಸ್ತೆ 1.1 ಕಿ.ಮೀ. ನವೀಕರಣಕ್ಕೆ 66 ಲಕ್ಷ ರೂ.
4. ಕೋಟೆಕಾರು – ಪಾತೂರು 2.2 ಕಿ.ಮೀ ರಸ್ತೆಗೆ 1.32 ಕೋ.ರೂ.
5. ರಾಜ್ಯ ಹೆದ್ದಾರಿ 64ರ ಕಡೂರು-ಕಾಞಂಗಾಡ್ 2.25ಕಿ.ಮೀ. ರಸ್ತೆಗೆ 1.35 ಕೋ.ರೂ.
6. ಬಂಟ್ವಾಳ ವ್ಯಾಪ್ತಿಯಲ್ಲಿನ ಸುರತ್ಕಲ್ -ಕಬಕ 3.33 ಕಿ.ಮೀ. ರಸ್ತೆ ಕಾಮಗಾರಿಗೆ 2 ಕೋ.ರೂ
7. ಪಾಣೆಮಂಗಳೂರು-ಪಾತೂರು 3.2 ಕಿ.ಮೀ ರಸ್ತೆಗೆ 1.92 ಕೋ.ರೂ.
8. ಮಾರಿಪಳ್ಳ-ಕಲ್ಪನೆ 1.22 ಕಿ.ಮೀ. ರಸ್ತೆಗೆ 73 ಲ.ರೂ.
9. ನಿಂತಿಕಲ್ಲು-ಬೆಳ್ಳಾರೆ-ನೆಟ್ಟಾರು 6.2 ಕಿ.ಮೀ. ರಸ್ತೆ ಮೇಲ್ದರ್ಜೆಗೇರಿಸಲು 3.72 ಕೋ.ರೂ.
10. ಸುಳ್ಯ-ಪೈಚಾರು-ಬೆಳ್ಳಾರೆ 3.8 ಕಿಮೀ ರಸ್ತೆ ಮೇಲ್ದರ್ಜೆಗೇರಿಸಲು 2.28 ಕೋ.ರೂ.
11. ರಾಜ್ಯ ಹೆದ್ದಾರಿ ಸುಬ್ರಹ್ಮಣ್ಯ-ಮಂಜೇಶ್ವರದ 5.2 ಕಿಮೀ ರಸ್ತೆಗೆ 3.12ಕೋ.ರೂ.
12. ಪುತ್ತೂರು ತಾಲೂಕಿನ ನಿಂತಿಕಲ್ಲು-ಬೆಳ್ಳಾರೆ-ನೆಟ್ಟಾರು-ಅಮ್ಚಿನಡ್ಕ-ಕಾವು-ಈಶ್ವರಮಂಗಲ-ಪಲ್ಲತ್ತಾರು ರಾಜ್ಯ ಹೆದ್ದಾರಿಯಿಂದ ಜಿಲ್ಲಾರಸ್ತೆಗೆ ಸಂಪರ್ಕದ 4.8 ಕಿ.ಮೀ ರಸ್ತೆ ಕಾಮಗಾರಿಗೆ 2.88 ಕೋ.ರೂ.
13. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ-ಉಪ್ಪಿನಂಗಡಿ 10 ಕಿಮೀ ರಸ್ತೆ ಕಾಮಗಾರಿಗಳಿಗೆ 6 ಕೋ.ರೂ.
14. ಮಂಗಳೂರು ತಾಲೂಕಿನ ಪುನರೂರು-ಶಾಂತಿಪಲ್ಕೆ-ದಾಮಸ್ಕಟ್ಟೆಯ 11.7 ಕಿ.ಮೀ.ರಸ್ತೆ ನವೀಕರಣಕ್ಕೆ 6 ಕೋ.ರೂ.
15. ಮಂಗಳೂರು ತಾಲೂಕಿನ ಭಟ್ರಕೆರೆ-ಕತ್ತಲ್ಸರ್ -ಕುಕ್ಕುದಕಟ್ಟೆ- ನೀರ್ಕೆರೆ-ತೋಡಾರು -ಮಾಸ್ತಿಕಟ್ಟೆ 6.1 ಕಿ.ಮೀ. ಜಿಲ್ಲಾ ರಸ್ತೆಗೆ 3ಕೋ.ರೂ.
16. ಸಂಪಿಗೆ-ಅಶ್ವಥಪುರ -ನೀರ್ಕೆರೆ -ಮಿಜಾರು 6.5ಕಿ.ಮೀ. ಜಿಲ್ಲಾ ರಸ್ತೆ ಅಭಿವೃದ್ದಿಗೆ 3ಕೋ.ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.