ಇಲ್ಲಿ ರಸ್ತೆ ಅಭಿವೃದ್ಧಿಯೇ ಒಂದು ಸಮಸ್ಯೆ :ವರ್ಷ ಕಳೆಯುತ್ತಾ ಬಂದರೂ ಕಾಮಗಾರಿ ಮುಗಿಯುತ್ತಿಲ್ಲ
ತೀನ್ ಕಂದೀಲ್-ಅಶೋಕ ಡಿಪೋವರೆಗಿನ ರಸ್ತೆ ನನೆಗುದಿಗೆ
Team Udayavani, Jan 31, 2022, 12:45 PM IST
ರಾಯಚೂರು : ಕೆಲವೆಡೆ ರಸ್ತೆಗಳ ಅಭಿವೃದ್ಧಿ ಆಗುತ್ತಿಲ್ಲ ಎಂಬ ಆರೋಪಗಳಿದ್ದರೆ, ಇಲ್ಲಿ ರಸ್ತೆ ಅಭಿವೃದ್ಧಿ ಆರಂಭಿಸಿದ್ದೇ ಸಮಸ್ಯೆಯಾಗಿದೆ. ವರ್ಷ ಕಳೆಯುತ್ತಾ ಬಂದರೂ ರಸ್ತೆ ನಿರ್ಮಾಣ ಕಾಮಗಾರಿ ಮುಗಿಯದಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.
ನಗರದ ತೀನ್ ಕಂದೀಲ್ ವೃತ್ತದಿಂದ ಅಶೋಕ ಡಿಪೋದವರೆಗಿನ ರಸ್ತೆ ಅಗಲೀಕರಣ ಕಾರ್ಯ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಕೊನೆಗೂ ರಸ್ತೆ ಕಾಮಗಾರಿ ಶುರುವಾಯಿತು. ಆದರೆ, ವರ್ಷ ಕಳೆಯುತ್ತಾ ಬಂದರೂ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಇದು ಸ್ಥಳೀಯರು, ಬೀದಿ ಬದಿ ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದ್ದು, ನಿತ್ಯ ಯಾತನೆ ಎದುರಿಸುವಂತಾಗಿದೆ.
ಸಾಕಷ್ಟು ಅಡೆ ತಡೆಗಳ ನಡುವೆ ರಸ್ತೆ ತೆರವು ಕಾರ್ಯಾಚರಣೆ ಮಾಡಿ ಮುಗಿಸಲಾಗಿದೆ. ಆದರೆ, ಮುಂದಿನ ಕಾಮಗಾರಿಗಳು ವೇಗ ಪಡೆಯುತ್ತಿಲ್ಲ. ಇದರಿಂದ ಅರೆಬರೆಯಾಗಿರುವ ಕೆಲಸದಲ್ಲೇ
ಜನಜೀವನ ದೂಡುವಂತಾಗಿದೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಕಾರಣವೋ, ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣವೋ ತಿಳಿಯದಾಗಿದೆ.
ನಗರೋತ್ಥಾನ ಯೋಜನೆಯಡಿ ರಸ್ತೆ ಅಗಲೀಕರಣ, ಚರಂಡಿ ಹಾಗೂ ಒಳಚರಂಡಿ ಕಾಮಗಾರಿಗೆ 4.30 ಕೋಟಿ ರೂ. ಖರ್ಚು ಮಾಡಲಾಗಿದೆ. ತೆರವು ವೇಳೆಯೂ ಯಡವಟ್ಟು: ರಸ್ತೆ ಅಭಿವೃದ್ಧಿ
ಮಾಡುವ ಮುನ್ನ ಎರಡು ಬದಿ ತೆರವು ಮಾಡುವಾಗಲೂ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದವು. ಈ ವಿಚಾರವಾಗಿ ಸ್ಥಳೀಯರು ಅಧಿಕಾರಿಗಳು,
ಜನಪ್ರತಿನಿಧಿಗಳೊಂದಿಗೆ ವಾಕ್ಸಮರ ಕೂಡ ಮಾಡಿದ್ದಾರೆ. ಆದರೆ, ಇದು ರಾಜಕೀಯ ವಿಷಯವಾಗಿ ಸಮಸ್ಯೆ ದೊಡ್ಡದಾಗಿತ್ತು. ಒಂದು ಕಡೆ ಮಾತ್ರ ಹೆಚ್ಚು ತೆರವು ಮಾಡಿದ್ದು, ಮತ್ತೂಂದು
ಬದಿಯಲ್ಲಿ ಸರಿಯಾಗಿ ತೆರವು ಮಾಡಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ, ಇದೇ ವಿಚಾರವಾಗಿ ನಗರಸಭೆ ಅಧ್ಯಕ್ಷ, ಹಿಂದಿನ ಪೌರಾಯುಕ್ತ, ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಗಲಾಟೆ ಕೂಡ ನಡೆದಿತ್ತು.
ಇದನ್ನೂ ಓದಿ : ಧಾರ್ಮಿಕ ಮತಾಂತರಕ್ಕೆ ಹೆದರಿ ತಂಜಾವೂರಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಸಿಬಿಐಗೆ
ಬೀದಿ ಬದಿ ವರ್ತಕರಿಗೆ ಸಂಕಷ್ಟ: ಈ ಮಾರ್ಗವಾಗಿ ಬೀದಿ ವ್ಯಾಪಾರ ಮಾಡಿಕೊಂಡಿದ್ದ ಅನೇಕ ಕುಟುಂಬಗಳಿಗೆ ಇದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಮಚ್ಚಿ ಬಜಾರ್ ಎಂದೇ
ಕರೆಯುವ ಪ್ರದೇಶದಲ್ಲಿ ಮೀನು ಮಾರಿ ಜಿವನ ನಡೆಸುವ ಕುಟುಂಬಗಳು ಹೆಚ್ಚಾಗಿದ್ದವು. ಈಗ ರಸ್ತೆ ಕಾಮಗಾರಿ ಶುರುವಾದಾಗಿನಿಂದ ಅವರ ವ್ಯಾಪಾರ ವಹಿವಾಟು ಸಾಕಷ್ಟು
ಸಮಸ್ಯೆಯಾಗುತ್ತಿದೆ. ಇನ್ನೂ ತಳ್ಳು ಬಂಡಿಗಳಲ್ಲಿ ವ್ಯಾಪಾರ ಮಾಡಿಕೊಂಡ ಸಾಕಷ್ಟು ಜನರಿಗೂ ಸಮಸ್ಯೆಯಾಗಿದೆ. ಈ ರಸ್ತೆಯಲ್ಲಿ ಸಿಟಿ ಬಸ್ ಸಂಚಾರವೂ ನಿಂತು ಹೋಗಿದೆ. ಯಾವುದೇ
ದೊಡ್ಡ ವಾಹನಗಳ ಓಡಾಟ ಕಷ್ಟವಾಗಿದೆ. ಆದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಸಿ ನಮಗೆ ಅನುಕೂಲ ಮಾಡಿಕೊಡಲಿ ಎನ್ನುವುದು ಸ್ಥಳೀಯರ ಒತ್ತಾಸೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.