ರೊಮ್ಯಾಂಟಿಕ್‌ ಸಿನೆಮಾಕ್ಕೆ “ರಿಷಿ’ ರಂಗು


Team Udayavani, May 3, 2020, 5:40 AM IST

ರೊಮ್ಯಾಂಟಿಕ್‌ ಸಿನೆಮಾಕ್ಕೆ “ರಿಷಿ’ ರಂಗು

ಭಾರತೀಯ ಚಿತ್ರರಂಗ ಎರಡೇ ದಿನದಲ್ಲಿ ಇಬ್ಬರು ಅದ್ಭುತ ನಟರನ್ನು ಕಳೆದುಕೊಂಡಿದೆ. ಸಹಜ ನಟನೆಯಿಂದ ವಿಶ್ವಾದ್ಯಂತ ಮನೆಮಾತಾಗಿದ್ದ ಇರ್ಫಾನ್‌ ಖಾನ್‌ ಹಾಗೂ ರೊಮ್ಯಾಂಟಿಕ್‌ ಸಿನೆಮಾಗಳಿಗೆ ಹೊಸ ರೂಪ ನೀಡಿ, ಇಳಿವಯಸ್ಸಿನಲ್ಲೂ ವಿನೂತನ ಪಾತ್ರಗಳಿಂದ ಗಮನಸೆಳೆದಿದ್ದ ರಿಷಿ ಕಪೂರ್‌ರ ಅಗಲಿಕೆ, ಅವರ ಅಗಣಿತ ಅಭಿಮಾನಿಗಳಿಗೆ ಬಹಳ ನೋವು ತಂದಿದೆ.

ಅದು 70ರ ದಶಕದ ಆಸುಪಾಸು. ಯಾವುದಾದರೂ ಹಳ್ಳಿಯಲ್ಲಿ ಜಾತ್ರೆಗಳಿದ್ದರೆ, ಒಂದು ವಾರ ಮುಂಚಿತವಾಗಿಯೇ ಸುತ್ತಲಿನ ಯುವತಿಯರ ಗುಂಪು ಹೇಗಾದರೂ ಮಾಡಿ ಪೋಷಕರನ್ನು ಪುಸಲಾಯಿಸಿ, ತಪ್ಪದೆ ಆ ಜಾತ್ರೆಯಲ್ಲಿ ಟೆಂಟ್‌ ಹಾಕುತ್ತಿತ್ತು. ಯಾಕೆಂದರೆ ಅಲ್ಲಿ ಬಣ್ಣದ “ಬಾಬಿ ರಿಬನ್‌’ ಸಿಗುತ್ತಿದ್ದವು. ಹೀಗೆ ತಂದ ಬಾಬಿ ರಿಬನ್‌ಗಳನ್ನು ಅಪರೂಪದ ಸಂದರ್ಭಗಳಲ್ಲಿ ಹೊರತೆಗೆದು, ತಾಮ್ರದ ಚೊಂಬಿನಲ್ಲಿ ಕೆಂಡ ಹಾಕಿ, ನೀಟಾಗಿ ಇಸ್ತ್ರಿ ಮಾಡಿ ಹಾಕಿಕೊಳ್ಳುತ್ತಿದ್ದರು. ಅದು ರಿಷಿ ಕಪೂರ್‌ ಅವರ ಮೊದಲ ಚಿತ್ರ “ಬಾಬಿ’ಯ ಪ್ರಭಾವ! ಅಷ್ಟೇ ಯಾಕೆ, ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಮಕ್ಕಳಿಗೆ “ರಿಷಿ’ ಎಂದು ಹೆಸರಿಟ್ಟಿದ್ದೂ ಇದೆ!

ಆ ಕಾಲಘಟ್ಟದಲ್ಲಿ ರೊಮ್ಯಾಂಟಿಕ್‌ ಹೀರೋ ರಿಷಿ ಕಪೂರ್‌, ಯುವತಿಯರಿಗೆ ಎಷ್ಟರ ಮಟ್ಟಿಗೆ ಮೋಡಿ ಮಾಡಿದ್ದರು ಎಂಬುದಕ್ಕೆ ಇವು ಒಂದೆರಡು ಸ್ಯಾಂಪಲ್‌ ಹಾಗೆ ನೋಡಿದರೆ, ರಿಷಿ ಕಪೂರ್‌ ಅವರು ಮುಖಕ್ಕೆ ಬಣ್ಣ ಹಚ್ಚುವ ಹೊತ್ತಿಗಾಗಲೇ ಬಾಲಿವುಡ್‌ ರೊಮ್ಯಾಂಟಿಸಂನಿಂದ ರೆಬೆಲ್‌ ಮತ್ತು ಆ್ಯಕ್ಷನ್‌ ಚಿತ್ರಗಳ ಕಡೆಗೆ ಮುಖಮಾಡಿತ್ತು. ಅಮಿತಾಭ್‌ ಬಚ್ಚನ್‌, ಧರ್ಮೇಂದ್ರ, ವಿನೋದ್‌ ಖನ್ನಾ ಅವರಂತಹ ಆ್ಯಂಗ್ರಿ ಯಂಗ್‌ ಲುಕ್‌ ಇರುವ ಮುಖಗಳು ಹೆಚ್ಚಾಗಿ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳಲು ಆರಂಭವಾಗಿತ್ತು. ಆಗ ತುರ್ತು ಪರಿಸ್ಥಿತಿಯ ಸಂದರ್ಭವಾಗಿದ್ದರಿಂದ ಚಿತ್ರರಂಗ ಹಾಗೆ ಮಗ್ಗಲು ಬದಲಿಸಿದ್ದು ಸಹಜವೂ ಆಗಿತ್ತು. ಆದರೆ, ಅಂತಹ ಸನ್ನಿವೇಶದಲ್ಲೂ ರೊಮ್ಯಾಂಟಿಕ್‌ ಚಿತ್ರಗಳ ಪರಂಪರೆ ಮುಂದುವರಿಸಿಕೊಂಡು ಹೋಗಿದ್ದಲ್ಲದೆ, ತಮ್ಮ ನಟನೆ ಮೂಲಕ ಪ್ರೇಮಕಥೆಗಳಿಗೆ ಹೊಸರೂಪ ನೀಡುವಲ್ಲಿ ಯಶಸ್ವಿಯಾದರು. ಇದಕ್ಕಾಗಿ ಅವರು ಆಯ್ಕೆ ಮಾಡಿಕೊಂಡ ಪ್ರೇಮಕಥೆಗಳು ಕೂಡ ವಿನೂತನವಾಗಿದ್ದವು. ಉದಾಹರಣೆಗೆ ಬಾಬಿ, ಚಾಂದನಿ, ಸಾಗರ್‌ ಇತ್ಯಾದಿ. ಒಂದು ಹಂತದಲ್ಲಿ ಪ್ರೇಕ್ಷಕರಿಗೆ ಈ “ಲವ್‌ ಸ್ಟೋರಿ’ಗಳು ಬೋರು ಎನಿಸಿದಾಗ, ಕರ್ಜ್‌, ನಗೀನಾ ಮೊದಲಾದ ಚಿತ್ರಗಳ ಮೂಲಕ ಜನರನ್ನು ಅಲೌಕಿಕ ಲೋಕಕ್ಕೆ ತೆಗದುಕೊಂಡು ಹೋದರು. ಇನ್ನು ಇವುಗಳ ಮಧ್ಯೆ ರಾಷ್ಟ್ರೀಯ ಮುಖ್ಯ ವಾಹಿನಿಯಲ್ಲಿ ಜಾತ್ಯತೀತೆಯನ್ನು ಬಲವಾಗಿ ಪ್ರತಿನಿಧಿಸುವ ಕಾಲಘಟ್ಟವದು. ಈ ಸಂದರ್ಭದಲ್ಲಿ ಮೂಡಿಬಂದ ಚಿತ್ರವೇ ಅಮರ್‌-ಅಕ್ಬರ್‌-ಅಂಥೋನಿ.

ರಾಜ್‌ ಕಪೂರ್‌ ಅವರು ಆಗಿನ ಸೋವಿಯತ್‌ ರಷ್ಯಾ, ಜೆಕೊಸ್ಲೋವಾಕಿಯಾ ಮತ್ತು ಯೂರೋಪ್‌ ರಾಷ್ಟ್ರಗಳಲ್ಲಿ ಕೂಡ ಖ್ಯಾತಿ ಗಳಿಸಿದ್ದರು. ಈಗಲೂ ಆ ರಾಷ್ಟ್ರಗಳಲ್ಲಿ ರಾಜ್‌ ಕಪೂರ್‌ ಹೆಸರಿನ ತಂಪು ಪಾನೀಯ, ಪರ್ಫ್ಯೂಮ್‌ ಸಿಗುತ್ತದೆ! ತಂದೆಯಂತೆ ಮಗ ರಿಷಿ ಕಪೂರ್‌ ಅವರಿಗೆ ಕೂಡ ಪಾಕಿಸ್ತಾನದಂತಹ ನೆರೆಯ ರಾಷ್ಟ್ರಗಳಲ್ಲಿ ಅಭಿಮಾನಿಗಳಿದ್ದಾರೆ. “ಹೆನ್ನಾ’ (Henna) ಚಿತ್ರಕ್ಕೆ ಪಾಕಿಸ್ತಾನದ ನಟಿ ಝೆಬಾ ಭಕ್ತಿಯಾರ್‌ರನ್ನು ಕರೆತಂದಿದ್ದನ್ನು ಸ್ಮರಿಸಬಹುದು.

ಅಭಿರುಚಿಗೆ ಒಗ್ಗುವ ಅನಿವಾರ್ಯ
ಪ್ರಯೋಗದ ವಿಚಾರಕ್ಕೆ ಬಂದರೆ ರಿಷಿ ಕಪೂರ್‌ ಅವರು ಕನ್ನಡದ ಹಿರಿಯ ನಟರಾದ ಡಾ. ವಿಷ್ಣುವರ್ಧನ್‌, ವಿ. ರವಿಚಂದ್ರನ್‌ರನ್ನು ಹೋಲುತ್ತಾರೆ. ಹೆಚ್ಚು ಶ್ರಮಹಾಕಿ ಮಾಡಿದ ವಿಭಿನ್ನ ಪ್ರಯೋಗಗಳಿಂದ ಮಾಡಿದ ದೂಸ್ರಾ ಆದ್ಮಿ, ಪ್ರೇಮ್‌ ರೋಗ್‌ನಂತಹ ಚಿತ್ರಗಳು ನೆಲಕಚ್ಚಿವೆ. ಬಣ್ಣದ ಸ್ವೆಟರ್‌, ಬಿಳಿ ಪ್ಯಾಂಟ್‌, ಬೆಟ್ಟ ಅಥವಾ ಸರೋವರದ ಬ್ಯಾಕ್‌ಗ್ರೌಂಡ್‌ ಇರುವ ಸಾಂಪ್ರದಾಯಿಕ ಶೈಲಿಯ ಚಿತ್ರಗಳು ಸೂಪರ್‌ ಹಿಟ್‌ ಆಗಿವೆ. ಹಾಗಾಗಿ, ಪ್ರೇಕ್ಷಕರ ಅಭಿರುಚಿಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಅವರಿಗಿತ್ತು. ಜಯಪ್ರದ, ಶ್ರೀದೇವಿ, ಮಾಧುರಿ, ದಿವ್ಯಾಭಾರತಿ ಸೇರಿದಂತೆ ಅತಿ ಹೆಚ್ಚು ನಟಿಯರೊಂದಿಗೆ ನಟಿಸಿದ ಹೆಗ್ಗಳಿಕೆ ಮಾತ್ರವಲ್ಲ; ಅಮಿತಾಭ್‌, ಶಾರೂಖ್‌ರಂತಹ ದಿಗ್ಗಜರು ಉಚ್ಛಾಯ ಸ್ಥಿತಿ ತಲುಪುವಲ್ಲಿಯೂ ರಿಷಿ ಕಪೂರ್‌ ಕೊಡುಗೆ ಇದೆ.

ಚಾಕೋಲೇಟ್‌ ಆಸೆಗೆ ನಟನೆ!
“ಪ್ಯಾರ್‌ ಹುವಾ ಇಕರಾರ್‌ ಹುವಾ…’ ಜನರ ಮನಸ್ಸಿನಲ್ಲಿ ಈಗಲೂ ಅಚ್ಚಹಸಿರಾಗಿರುವ ಈ ಹಾಡು ಶ್ರೀ 420 ಚಿತ್ರದ್ದು. ಹಾಡಿನಲ್ಲಿ ಮಳೆಯಲ್ಲಿ ರೈನ್‌ ಕೋಟ್‌ ಧರಿಸಿಕೊಂಡು ಮೂವರು ಹುಡುಗರು ನಡುವೆ ಹಾದುಹೋಗುತ್ತಾರೆ. ಅವರಲ್ಲಿ ಅತ್ಯಂತ ಚಿಕ್ಕ ಬಾಲಕ ರಿಷಿ ಕಪೂರ್‌. ಆಗ ರಿಷಿಗೆ ಐದು ವರ್ಷ. ಚಿತ್ರೀಕರಣದ ವೇಳೆ ನೀರು ಮುಖಕ್ಕೆ ಬೀಳುತ್ತಿದ್ದಂತೆ ಅಳಲು ಆರಂಭಿಸುತ್ತಿದ್ದರು. ಇದರಿಂದ ಹಲವು ರಿಟೇಕ್‌ ತೆಗೆದುಕೊಳ್ಳಬೇಕಾಯಿತು. ಆಗ ನಟಿ ನರ್ಗಿಸ್‌, ರಿಷಿ ಕಪೂರ್‌ ಬಳಿ ಬಂದು, ಅಳದೆ ಚೆನ್ನಾಗಿ ನಟಿಸಿದರೆ ಚಾಕೋಲೇಟ್‌ ಕೊಡುವುದಾಗಿ ಆಸೆ ತೋರಿಸಿದರು. ಚಾಕೋಲೇಟ್‌ ಆಸೆಗೆ ಮುಂದಿನ ಶಾಟ್‌ನಲ್ಲಿ ಅಳಲಿಲ್ಲ. ಶಾಟ್‌ ಕೂಡ ಓಕೆ ಆಯಿತು. ಇದನ್ನು ಸ್ವತಃ ರಿಷಿ ಕಪೂರ್‌ ಸಂದರ್ಶನ ವೊಂದರಲ್ಲಿ ಮೆಲುಕು ಹಾಕಿದ್ದರು.

ಕರ್ನಾಟಕದ ನಂಟು
ರಿಷಿ ಕಪೂರ್‌ ಅವರ ಎರಡನೇ ಚಿತ್ರ ಹಾಗೂ ಅವರ ನೀತು ಸಿಂಗ್‌ ಜತೆ(ಆಗ ಇನ್ನೂ ಮದುವೆ ಆಗಿರಲಿಲ್ಲ)ಗಿನ ಮೊದಲ ಚಿತ್ರ ಚಿತ್ರೀಕರಣ ಮಾಡಿದ್ದು ಪುಟ್ಟಣ್ಣ ಕಣಗಾಲ್‌ ಹಾಗೂ ಅದು ಚಿತ್ರೀಕರಣಗೊಂಡಿದ್ದು ಚಿತ್ರದುರ್ಗದಲ್ಲಿ. ಆ ಚಿತ್ರ ಕನ್ನಡದ ನಾಗರಹಾವು ರಿಮೇಕ್‌ “ಜೆಹರೀಲಾ ಇನ್ಸಾನ್‌’. ಅಂದಹಾಗೆ ಈ ಚಿತ್ರದಲ್ಲಿ ಜಲೀಲನ ಪಾತ್ರ ನಿರ್ವಹಿಸಿದವರೂ ರೆಬೆಲ್‌ ಸ್ಟಾರ್‌ ಅಂಬರೀಷ್‌ ಎನ್ನುವುದು ವಿಶೇಷ. ರಿಷಿ ಕಪೂರ್‌ ಅವರ ಮೊದಲ ಚಿತ್ರ ಬಾಬಿ ಸೂಪರ್‌ ಹಿಟ್‌ ಆಗಿತ್ತು. ಬೆನ್ನಲ್ಲೇ ಅವರು ಮತ್ತೂಂದು ಹಳೆಯ ಪ್ರೇಮಕತೆಯ ಹುಡುಕಾಟದಲ್ಲಿದ್ದರು. ಆಗ ಸಿಕ್ಕಿದ್ದು “ನಾಗರಹಾವು’.

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.