ರಾಸ್ ಟೇಲರ್‌ಗೆ ಗೆಲುವಿನ ವಿದಾಯ
Team Udayavani, Jan 12, 2022, 5:00 AM IST
ಕ್ರೈಸ್ಟ್‌ಚರ್ಚ್: ನ್ಯೂಜಿಲ್ಯಾಂಡಿನ ಖ್ಯಾತ ಬ್ಯಾಟ್ಸ್‌ಮನ್ ರಾಸ್ ಟೇಲರ್ ಅವರು ತಮ್ಮ ಟೆಸ್ಟ್ ಬದುಕನ್ನು ಸ್ಮರಣೀಯ ರೀತಿಯಲ್ಲಿ ಮುಗಿಸಿದರು. ಅವರಿಗೆ ಇನ್ನಿಂಗ್ಸ್ ಗೆಲುವಿನ ಉಡುಗೊರೆ ಲಭಿಸಿತು. ಅಂತಿಮ ಎಸೆತದಲ್ಲಿ ವಿಕೆಟ್ ಉಡಾಯಿಸಿ ಸ್ವತಃ ಟೇಲರ್ ಅವರೇ ಈ ಜಯವನ್ನು ಸಾರಿದ್ದು ಇನ್ನೂ ವಿಶೇಷವಾಗಿತ್ತು.
ಪ್ರವಾಸಿ ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯವನ್ನು ನ್ಯೂಜಿಲ್ಯಾಂಡ್ ಇನ್ನಿಂಗ್ಸ್ ಹಾಗೂ 117 ರನ್ನುಗಳ ಭಾರೀ ಅಂತರದಿಂದ ಗೆದ್ದಿತು. ಜತೆಗೆ ಸರಣಿಯನ್ನು 1-1 ಸಮಬಲದಲ್ಲಿ ಮುಗಿಸಿತು.
395 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಾಂಗ್ಲಾಕ್ಕೆ 3ನೇ ದಿನದಾಟದಲ್ಲಿ ಫಾಲೋಆನ್ ಹೇರಲಾಯಿತು. ಲಿಟನ್ ದಾಸ್ ಅವರ ಶತಕದ ಹೋರಾಟದಿಂದ ತನ್ನ ದ್ವಿತೀಯ ಸರದಿಯನ್ನು 278ರ ತನಕ ಬೆಳೆಸಿ ಶರಣಾಯಿತು. ದಾಸ್ 114 ಎಸೆತ ನಿಭಾಯಿಸಿ 102 ರನ್ ಹೊಡೆದರು (14 ಬೌಂಡರಿ, 1 ಸಿಕ್ಸರ್). ಕಳೆದ ಪಂದ್ಯದ ಬೌಲಿಂಗ್ ಹೀರೋ ಇಬಾದತ್ ಹೊಸೇನ್ ಅವರನ್ನು ನಾಯಕ ಲ್ಯಾಥಂಗೆ ಕ್ಯಾಚ್ ಕೊಡಿಸುವ ಮೂಲಕ ಟೇಲರ್ ತಮ್ಮ ಟೆಸ್ಟ್ ಬದುಕಿನ 3ನೇ ವಿಕೆಟ್ ಉರುಳಿಸಿದರು.
ಇದನ್ನೂ ಓದಿ:ಪ್ರೊ ಕಬಡ್ಡಿ 8ನೇ ಆವೃತ್ತಿ: ಅಗ್ರಸ್ಥಾನಕ್ಕೇರಿದ ಪಾಟ್ನಾ ಪೈರೇಟ್ಸ್
ಟೇಲರ್ ನ್ಯೂಜಿಲ್ಯಾಂಡ್ ಪರ ಸರ್ವಾಧಿಕ 112 ಟೆಸ್ಟ್ ಆಡಿದ ಡೇನಿಯಲ್ ವೆಟರಿ ದಾಖಲೆಯನ್ನು ಸರಿದೂಗಿಸಿದರು. “ವಿನ್ ಆ್ಯಂಡ್ ವಿಕೆಟ್‌ನಿಂದಾಗಿ ನನ್ನ ಟೆಸ್ಟ್ ಬದುಕು ಅಮೋಘ ರೀತಿಯಲ್ಲಿ ಕೊನೆಗೊಂಡಿದೆ’ ಎಂಬುದಾಗಿ ಟೇಲರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.