ಎಂಪಿಎಲ್‌ನಿಂದ ಭಾರತದ ಪ್ರಥಮ ದೇಶೀಯ ಶೂಟರ್ ಗೇಮ್ ರೋಗ್ ಹೀಸ್ಟ್ ಬಿಡುಗಡೆ
Team Udayavani, Jun 5, 2020, 9:00 AM IST
ಈಗ ದೇಶದಲ್ಲಿ ಸ್ವದೇಶಿ ಬಳಕೆಯ ಆಂದೋಲನ ನಡೆಯುತ್ತಿದೆ. ಆನ್‌ಲೈನ್ ಮೊಬೈಲ್ ಗೇಮಿಂಗ್ ವಲಯದಲ್ಲೂ ಸಹ ಈಗ ಸ್ವದೇಶಿ ಮಂತ್ರ ಕೇಳಿ ಬರುತ್ತಿದೆ.
ಭಾರತದ ಅತ್ಯಂತ ದೊಡ್ಡ ಮೊಬೈಲ್ ಗೇಮಿಂಗ್ ಪ್ಲಾಟ್‌ಫಾರಂ ಮೊಬೈಲ್ ಪ್ರೀಮಿಯರ್ ಲೀಗ್(ಎಂಪಿಎಲ್) ಮುಂಬೈ ಮೂಲದ ಗೇಮ್ ಡೆವಲಪರ್ ಲೈಫ್‌ಲೈಕ್ ಸ್ಟುಡಿಯೋಸ್ ಜೊತೆ ಸಹಯೋಗ ಹೊಂದಿದ್ದು ಭಾರತದ ಪ್ರಥಮ ದೇಶಿ ಮಲ್ಟಿ-ಪ್ಲೇಯರ್ ಆನ್‌ಲೈನ್ ಶೂಟರ್ ಗೇಮ್ ರೋಗ್ ಹೀಸ್ಟ್, ಅನ್ನು ಎಂಪಿಎಲ್ ಆ್ಯಪ್‌ನಲ್ಲಿ ಇತರೆ ಪ್ಲಾಟ್‌ಫಾರಂಗಿಂತಲೂ ಮುಂಚೆ ವಿಶೇಷವಾಗಿ ಬಿಡುಗಡೆ ಮಾಡಿದೆ.
ರೋಗ್ ಹೀಸ್ಟ್ ಅನ್ನು ಲೈಫ್‌ಲೈಕ್ ಸ್ಟುಡಿಯೋಸ್ ಅಭಿವೃದ್ಧಿಪಡಿಸಿದೆ
ರೋಗ್ ಹೀಸ್ಟ್, ಎಂಪಿಎಲ್ ಪ್ಲಾಟ್‌ಫಾರಂನಲ್ಲಿ ಮೊದಲ ಮಲ್ಟಿ-ಪ್ಲೇಯರ್ ಇ ಸ್ಪೋರ್ಟ್ಸ್ ನಲ್ಲಿ ಒಂದಾಗಿದ್ದು, ಬಳಕೆದಾರರು ಪರಸ್ಪರ ಮುಖಾಮುಖಿಯಾಗುವುದು ಕಾಣುತ್ತದೆ, ಪ್ರತಿ ಯುದ್ಧ ಹಾಗೂ ಟೂರ್ನಮೆಂಟ್‌ನಲ್ಲಿ ಬಹುಮಾನ ಗೆಲ್ಲುವ ಅವಕಾಶ ನೀಡುತ್ತದೆ. ಎಂಪಿಎಲ್ ಪ್ರಸ್ತುತ ತನ್ನ ಪ್ಲಾಟ್‌ಫಾರಂನಲ್ಲಿ 40ಕ್ಕೂ ಹೆಚ್ಚು ಗೇಮ್ ಗಳನ್ನು ಹೊಂದಿದೆ.
ರೋಗ್ ಹೀಸ್ಟ್ ಸ್ಪರ್ಧಾತ್ಮಕ ರಿಯಲ್-ಟೈಮ್ ಮಲ್ಟಿ-ಪ್ಲೇಯರ್ ಪರಿಸರದಲ್ಲಿದೆ.
ಪ್ರತಿ ಗೇಮ್ ಕೂಡಾ ಕೇವಲ 7 ನಿಮಿಷಗಳಿದ್ದು ಅದರಲ್ಲಿ 10 ಆಟಗಾರರು ಪರಸ್ಪರ ಮುಖಾಮುಖಿಯಾಗುತ್ತಾರೆ. ಅವರ ವೈಯಕ್ತಿಕ ಸಾಧನೆ ಆಧರಿಸಿ ಹೆಚ್ಚಿನ ಗಳಿಕೆ ಪಡೆಯುತ್ತಾರೆ.
ಈ ಬಿಡುಗಡೆ ಕುರಿತು ಮೊಬೈಲ್ ಪ್ರೀಮಿಯರ್ ಲೀಗ್‌ನ ಸಹ-ಸಂಸ್ಥಾಪಕ ಶುಭ್ ಮಲ್ಹೋತ್ರಾ, ರೋಗ್ ಹೀಸ್ಟ್, ಅತ್ಯಂತ ಉತ್ಸಾಹಕರ ಮತ್ತು ಸಕ್ರಿಯ ಆಟವಾಗಿದೆ ಮತ್ತು ವಿಶೇಷವಾಗಿ ಇದನ್ನು ಎಂಪಿಎಲ್‌ನಲ್ಲಿ ಗೂಗಲ್ ಪ್ಲೇಸ್ಟೋರ್‌ಗಿಂತಲೂ ಮುಂಚೆ ಬಿಡುಗಡೆ ಮಾಡುತ್ತಿದ್ದೇವೆ. ಗ್ರಾಫಿಕ್ಸ್, ಗೇಮ್‌ಪ್ಲೇ ಮತ್ತು ಒಟ್ಟಾರೆ ಅನುಭವ ಉನ್ನತ ಮಟ್ಟದ್ದಾಗಿದೆ ಎಂದು ತಿಳಿಸಿದ್ದಾರೆ.
ಅತ್ಯಂತ ದೊಡ್ಡ ಸವಾಲೆಂದರೆ ಗೇಮ್ ಗಾತ್ರವನ್ನು ಎಂಪಿಎಲ್ ಬಳಕೆದಾರರಿಗೆ 1.5 ಜಿಬಿಯಿಂದ 450ಎಂಬಿಗೆ ಕಡಿಮೆ ಮಾಡುವುದಲ್ಲದೆ ಅವರು ರೋಗ್ ಹೀಸ್ಟ್, ಅನುಭವವನ್ನು ಪಡೆಯಲು ಶಕ್ತವಾಗುವಂತೆ ಮಾಡುವುದಾಗಿತ್ತು. ಇದು ಲೈವ್ ಗೇಮ್ ಆಗಿರುವುದರಿಂದ ನಾವು ಎಂಪಿಎಲ್ ಬಳಕೆದಾರರು ಸಕ್ರಿಯವಾಗಿರುವಂತೆ ಸತತ ಅಪ್‌ಡೇಟ್‌ಗಳನ್ನು ಪೂರೈಸುತ್ತಿರುತ್ತೇವೆ ಎಂದು ಲೈಫ್‌ಲೈಕ್ ಸ್ಟುಡಿಯೋಸ್‌ನ ಸಿಇಒ ಆಶಿಶ್ ಬ್ಯೂರಿಯಾ ಹೇಳಿದ್ದಾರೆ.
‘‘ರೋಗ್ ಹೀಸ್ಟ್ ಭಾರತದಲ್ಲಿ ನಿರ್ಮಾಣವಾಗಿದ್ದು ಗೇಮ್ ಚೇಂಜರ್ ಆಗಿದೆ. ನಮ್ಮ ತಂಡವು ರೋಗ್ ಹೀಸ್ಟ್, ಇ-ಸ್ಪೋರ್ಟ್ ಆವೃತ್ತಿಯನ್ನು ಎಂಪಿಎಲ್‌ನಲ್ಲಿ ಬಿಡುಗಡೆ ಮಾಡಲು ಸಂತೋಷವಾಗಿದೆ. ಅತ್ಯಂತ ಕುತೂಹಲಕರ ಶೂಟಿಂಗ್ ಗೇಮ್ ಅನುಭವವನ್ನು ಎಂಪಿಎಲ್ ಆಟಗಾರರಿಗೆ ನೀಡುತ್ತದೆ’’ ಎಂದು ಬಾಲಿವುಡ್ ನಟ ಮತ್ತು ನಿರ್ಮಾಪಕ ಅರ್ಬಾಜ್ ಖಾನ್ ಹೇಳಿದ್ದಾರೆ.
ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.