ಪಂಚ ರಾಜ್ಯಗಳ ಮಾರ್ಗ ನಿರ್ಬಂಧ; ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಈ ಕ್ರಮ
Team Udayavani, May 29, 2020, 6:00 AM IST
ಬೆಂಗಳೂರು: ಅಂತಾರಾಜ್ಯ ಓಡಾಟಕ್ಕೆ ಅವ ಕಾಶ ನೀಡಿದ ಬಳಿಕ ರಾಜ್ಯದಲ್ಲಿ ಕೋವಿಡ್-19 ಹೆಚ್ಚುತ್ತಿರುವು ದನ್ನು ಮನಗಂಡಿರುವ ರಾಜ್ಯ ಸರಕಾರವು ಈಗ ಐದು ರಾಜ್ಯಗಳ ಮಾರ್ಗಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿದೆ.
ಹದಿನೈದು ದಿನಗಳ ಹಿಂದೆ ಅಂತಾ ರಾಜ್ಯ ಓಡಾಟಕ್ಕೆ ಅವ ಕಾಶ ನೀಡಿದ ಅನಂತರ ರಾಜ್ಯ ದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾ ಗಿರುವು ದನ್ನು ಕೊನೆಗೂ ಮನಗಂಡಿರುವ ರಾಜ್ಯ ಸರಕಾರವು ಈಗ ಐದು ರಾಜ್ಯಗಳ ಮಾರ್ಗಗಳಿಗೆ ನಿರ್ಬಂಧ ಹೇರಿದೆ.
ಅಂತಾರಾಜ್ಯ ಪ್ರಯಾಣಿಕರು, ಪ್ರವಾಸಿಗರು, ಯಾತ್ರಾರ್ಥಿಗಳು, ವಲಸೆ ಕಾರ್ಮಿಕರಿಗೆ ಕರ್ನಾಟಕ ಪ್ರವೇಶಕ್ಕೆ ಅವಕಾಶ ಕೊಟ್ಟ ಬಳಿಕ ರಾಜ್ಯದಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಹೀಗಾಗಿ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ರಾಜ್ಯಗಳ ರಹದಾರಿಯನ್ನು ಬಂದ್ ಮಾಡಲು ಮತ್ತು ಮಹಾರಾಷ್ಟ್ರ, ತ.ನಾಡು, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶದಿಂದ ವಿಮಾನ ಯಾನವನ್ನು ನಿರ್ಬಂಧಿಸಲು ತೀರ್ಮಾನಿಸಿದೆ.
ಐದು ರಾಜ್ಯಗಳಿಂದ ವಿಮಾನ ಪ್ರಯಾಣವನ್ನು ಸಂಪೂರ್ಣ ಬಂದ್ ಮಾಡಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸಂಜೆ ಮಾಧ್ಯಮಕ್ಕೆ ತಿಳಿಸಿದ್ದರು. ಆದರೆ ರಾತ್ರಿ ಹೊತ್ತಿಗೆ ಸ್ಪಷ್ಟನೆ ನೀಡಿ, ಇದು ಪ್ರವೇಶ ಬಂದ್ ಅಲ್ಲ, ತಾತ್ಕಾಲಿಕ ನಿರ್ಬಂಧ. ಐದು ರಾಜ್ಯಗಳಿಂದ ವಿಮಾನ ಯಾನ ಸೇವೆ ಕಡಿಮೆಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.
ಅನ್ಯ ರಾಜ್ಯಗಳಿಂದ ಬರಲು ಅನುಮತಿ ನೀಡಿದ ಅನಂತರ ರಾಜ್ಯದಲ್ಲಿ ಸೋಂಕು ಪರಿಸ್ಥಿತಿ ಕೈಮೀರುತ್ತಿರುವ ಬಗ್ಗೆ ಸಂಪುಟ ಸಭೆಯಲ್ಲಿ ಆತಂಕ ವ್ಯಕ್ತವಾಗಿದೆ. ಜತೆಗೆ ಲಾಕ್‌ಡೌನ್ ಸಡಿಲಿಕೆಯ ಅನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಮತ್ತು ಇತರ ನಿಯಮ ಉಲ್ಲಂಘನೆಗಳಿಂದ ಅಪಾಯ ಎದುರಾಗುತ್ತಿರುವ ಬಗೆಗೂ ಚರ್ಚೆಯಾಯಿತು ಎಂದು ಮೂಲಗಳು ತಿಳಿಸಿವೆ.
ಮುಂದಿನ 10-15 ದಿನ ಈ ವ್ಯವಸ್ಥೆ ಜಾರಿಯಲ್ಲಿರ ಬಹುದು. ಜತೆಗೆ ಗಡಿ ಭಾಗಗಳಲ್ಲಿ ಕಾಲ್ನಡಿಗೆ ಮೂಲಕ ಸಾವಿರಾರು ಜನರು ಗಡಿ ದಾಟುತ್ತಿದ್ದು, ಅವರ ಮೇಲೂ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಕೇಂದ್ರದ ನಿರ್ಧಾರಕ್ಕೆ ಬದ್ಧ
ಮೇ 31ರ ಬಳಿಕದ ಲಾಕ್‌ಡೌನ್ ಕುರಿತು ಕೇಂದ್ರದ ಮಾರ್ಗಸೂಚಿ ಗಮನಿಸಿ ಮುಂದುವರಿಯಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಜೂ. 1ರಿಂದ ಹಲವು ಷರತ್ತುಗಳೊಂದಿಗೆ ದೇವಾಲಯ, ಮಸೀದಿ, ಚರ್ಚ್ ತೆರೆಯಲು ಅವಕಾಶ ಕೊಡಬಹುದು. ಆದರೆ ಹೊಟೇಲ್, ಮಾಲ್, ಸಿನೆಮಾ ಮಂದಿರ ಆರಂಭಕ್ಕೆ ಕೇಂದ್ರದ ಅನುಮತಿ ಬೇಕಿದೆ. ಆಯಾ ವಲಯದಿಂದ ಒತ್ತಡ ಇದೆಯಾದರೂ ಕೇಂದ್ರದ ನಿರ್ಧಾರವೇ ಆ ವಿಚಾರದಲ್ಲಿ ಅಂತಿಮ ಎಂದು ಸಿಎಂ ಯಡಿಯೂರಪ್ಪ ಸಂಪುಟ ಸಭೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಕಾರ್ಮಿಕರ ವೆಚ್ಚ ಸರಕಾರಗಳೇ ಭರಿಸಲಿ
ಹೊಸದಿಲ್ಲಿ: ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡು ತಮ್ಮೂರುಗಳಿಗೆ ವಾಪಸಾಗುತ್ತಿರುವ ವಲಸೆ ಕಾರ್ಮಿಕರ ಬಸ್ ಅಥವಾ ರೈಲು ಪ್ರಯಾಣದ ವೆಚ್ಚವನ್ನು ರಾಜ್ಯ ಸರಕಾರಗಳೇ ಹಂಚಿಕೊಂಡು ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
12 ಇಂಡಿಗೋ ಯಾನಿಗಳಿಗೆ ಸೋಂಕು
ಹೊಸದಿಲ್ಲಿ: ಬೆಂಗಳೂರಿನಿಂದ ಕೊಯಮತ್ತೂರಿಗೆ ತೆರಳಿದ್ದ ಆರು ಮಂದಿ, ಬೆಂಗಳೂರಿನಿಂದ ಮಧುರೈಗೆ ಹೋಗಿದ್ದ ಒಬ್ಬರ ಸಹಿತ ನಾಲ್ಕು ಇಂಡಿಗೋ ವಿಮಾನಗಳಲ್ಲಿ ಸಂಚರಿ ಸಿದ್ದ 12 ಪ್ರಯಾಣಿಕರಿಗೆ ಕೋವಿಡ್-19 ದೃಢಪಟ್ಟಿದೆ.
ಎಲ್ಲಿಂದ ಬರುವಂತಿಲ್ಲ?
ಮಹಾರಾಷ್ಟ್ರ , ತಮಿಳುನಾಡು, ಗುಜರಾತ್, ರಾಜಸ್ಥಾನ, ಮಧ್ಯ ಪ್ರದೇಶ
ಎಷ್ಟು ದಿನ ನಿರ್ಬಂಧ?
10 ರಿಂದ 15 ದಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.