“ಬಡತನ ದೂರ ಮಾಡುವೆ…’ತಾಯಿಗೆ ಭರವಸೆ ಕೊಟ್ಟಿದ್ದ ರೋವ್ಮನ್ ಪೊವೆಲ್
Team Udayavani, Apr 30, 2022, 7:30 AM IST
ಮುಂಬಯಿ: ವೆಸ್ಟ್‌ಇಂಡೀಸ್‌ನ ಮಾಜಿ ವೇಗಿ ಇಯಾನ್ ಬಿಷಪ್ ಅವರು ತನ್ನದೇ ದೇಶದ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಆಲ್‌ರೌಂಡರ್ ರೋವ್ಮನ್ ಪೊವೆಲ್ ಅವರ ಬಗೆಗಿನ ಹೃದಯ ತಟ್ಟುವ ಕತೆಯೊಂದನ್ನು ಮೆಲುಕು ಹಾಕಿದ್ದಾರೆ. ಪೊವೆಲ್ ಸೆಕೆಂಡರಿ ಸ್ಕೂಲ್‌ನಲ್ಲಿ ಓದುತ್ತಿದ್ದ ಸಮಯದಲ್ಲಿ ತನ್ನ ಕುಟುಂಬವನ್ನು ಬಡತನದಿಂದ ದೂರ ಮಾಡುವೆ ಎಂದು ತಾಯಿಗೆ ಭರವಸೆ ಕೊಟ್ಟಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.
28 ವರ್ಷದ ಪೊವೆಲ್ ಗುರುವಾರದ ಪಂದ್ಯದಲ್ಲಿ ಡೆಲ್ಲಿ ಪರ ಅಮೋಘ ಪ್ರದರ್ಶನ ನೀಡಿದ್ದರು. ಕೇವಲ 16 ಎಸೆತಗಳಲ್ಲಿ ಅಜೇಯ 33 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದರು. ಈ ಗೆಲುವಿನಿಂದ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದೆ.
ವೀಡಿಯೋ ವೀಕ್ಷಿಸಿ…
ಮಾಧ್ಯಮದ ಜತೆ ಮಾತನಾಡಿದ ಬಿಷಪ್, “ಯಾರಿಗಾದರೂ 10 ನಿಮಿಷಗಳ ಸಮಯದ ಅವಕಾಶವಿದ್ದರೆ ಯೂ ಟ್ಯೂಬ್‌ನಲ್ಲಿ ರೋವ್ಮನ್ ಪೊವೆಲ್ ಅವರ ಜೀವನಕತೆಯ ವೀಡಿಯೋವೊಂದನ್ನು ನೋಡಿ. ನನ್ನನ್ನೂ ಸೇರಿದಂತೆ ಹಲವಾರು ಮಂದಿ ಪೊವೆಲ್ ಹೇಗೆ, ಯಾಕೆ ಐಪಿಎಲ್‌ಗೆ ಸೇರಿಕೊಂಡರು ಎಂಬ ವಿವರಣೆ ಕೇಳಿ ಸಂತೋಪ ಪಟ್ಟಿದ್ದೇವೆ’ ಎಂದರು.
ಕುಟುಂಬವನ್ನು ಬಡತನದಿಂದ ಹೋಗಲಾಡಿಸಲು ಅವರು ತಾಯಿಗೆ ಭರವಸೆ ಕೊಟ್ಟಿದ್ದರು. ಅದು ಕೂಡ ಅವರು ಸೆಕೆಂಡರಿ ಸ್ಕೂಲ್‌ನಲ್ಲಿದ್ದಾಗ. ಅವರೀಗ ಆ ಕನಸನ್ನು ನನಸು ಮಾಡಲು ಜೀವಿಸುತ್ತಿದ್ದಾರೆ. ಇದೊಂದು ಗ್ರೇಟ್ ಸ್ಟೋರಿ ಎಂದಿದ್ದಾರೆ ಬಿಷಪ್.
ಪೊವೆಲ್ ಅವರ ಆಟದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಸ್ಫೋಟಕವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಅವರಲ್ಲಿದೆ. ಕಳೆದ ಫೆಬ್ರವರಿಯಿಂದ ಭಾರತದಲ್ಲಿ ಅವರು ಸ್ಪಿನ್ನರ್‌ಗಳ ದಾಳಿಯೆದುರು ಉತ್ತಮ ಸರಾಸರಿಯ ಆಟ ಪ್ರದರ್ಶಿಸಿದ್ದಾರೆ ಎಂದು ಬಿಷಪ್ ವಿವರಿಸಿದರು.
ಸಿಪಿಎಲ್‌ನಲ್ಲೂ ಯಶಸ್ಸು
1993ರ ಜುಲೈ 23ರಂದು ಜನಿಸಿದ ಪೊವೆಲ್ ತಾಯಿ ಮತ್ತು ಕಿರಿಯ ಸಹೋದರಿ ಜತೆ ವಾಸಿಸುತ್ತಿದ್ದಾರೆ. ಬಹಳಷ್ಟು ಕಷ್ಟದ ದಿನಗಳನ್ನು ಕಂಡಿದ್ದಾರೆ. “ಕೆರಿಬಿಯನ್ ಪ್ರೀಮಿಯರ್ ಲೀಗ್’ನಲ್ಲಿ ತೋರ್ಪಡಿಸಿದ ಬ್ಯಾಟಿಂಗ್ ವೈಭವದಿಂದಾಗಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದರು. 2022ರ ಮೆಗಾ ಹರಾಜಿನಲ್ಲಿ ಡೆಲ್ಲಿ ತಂಡ ಖರೀದಿಸಿತ್ತು.
ಟಿ20ಯಲ್ಲಿ ಪೊವೆಲ್ ಇಷ್ಟರವರೆಗೆ 39 ಪಂದ್ಯಗಳನ್ನು ಆಡಿದ್ದು, 24.76 ಸರಾಸರಿಯಂತೆ 619 ರನ್ ಗಳಿಸಿದ್ದಾರೆ. ಒಂದು ಶತಕ, 3 ಅರ್ಧಶತಕ ಸಿಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.