Fake Currency: 500 ರೂ. ನಕಲಿ ನೋಟುಗಳಲ್ಲಿ ಗಾಂಧಿ ಬದಲು ಅನುಪಮ್ ಖೇರ್ ಫೋಟೊ!
ಸುಮಾರು 1.60 ಕೋಟಿ ರೂಪಾಯಿ ಮೌಲ್ಯದ ನಕಲಿ ಕರೆನ್ಸಿ ವಶ
Team Udayavani, Sep 30, 2024, 12:44 PM IST
ಅಹಮದಾಬಾದ್: ನೂತನ 500 ರೂ. ಮುಖಬೆಲೆಯ(500 Rs notes) ನೋಟು ಚಲಾವಣೆಗೆ ಬಂದು ಎಂಟು ವರ್ಷಗಳಾಗುತ್ತ ಬಂದಿದೆ. ಹೊಸ ನೋಟುಗಳು ಚಲಾವಣೆಗೆ ಬರುತ್ತಿದ್ದಂತೆಯೇ ನಕಲಿ ನೋಟುಗಳ(Fake Currency) ಹಾವಳಿಗೆ ಕಡಿವಾಣ ಬಿದ್ದಿತ್ತು. ಆದರೆ ಇದೀಗ ಭಾರತದಲ್ಲಿ ಮತ್ತೊಮ್ಮೆ ನಕಲಿ ನೋಟುಗಳ ಸುದ್ದಿ ಸದ್ದು ಮಾಡಿದೆ.
ಗುಜರಾತ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 1.60 ಕೋಟಿ ರೂಪಾಯಿ ಮೌಲ್ಯದ ನಕಲಿ ಕರೆನ್ಸಿಯನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಪೊಲೀಸರು ವಶಪಡಿಸಿಕೊಂಡ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳಲ್ಲಿ ಮಹಾತ್ಮಗಾಂಧಿಯ ಬದಲು ನಟ ಅನುಪಮ್ ಖೇರ್ ಅವರ ಚಿತ್ರವನ್ನು ಬಳಸಿರುವುದು ಪತ್ತೆಯಾಗಿದೆ.
ನಕಲಿ ನೋಟುಗಳಲ್ಲಿ ನಟ ಅನುಪಮ್ ಖೇರ್ ಫೋಟೊ ಬಳಸಿದ್ದು, ಅದರ ಜೊತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ( Reserve Bank Of India) ಬದಲು ರಿಸೋಲ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿಸಲಾಗಿದೆ ಎಂಬುದಾಗಿ ಪೊಲೀಸ್ ಕಮಿಷನರ್ ರಾಜ್ ದೀಪ್ ನುಕುಂ ತಿಳಿಸಿದ್ದಾರೆ.
ನಕಲಿ ನೋಟುಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಕೆಲವರು ಆಘಾತ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಹಾಸ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಮೊದಲು ನಕಲಿ ನೋಟುಗಳನ್ನು ತಯಾರಿಸುತ್ತಿದ್ದ ಗುಜರಾತ್ ನ ಸೂರತ್ ನ ಆನ್ ಲೈನ್ ಗಾರ್ಮೆಂಟ್ ಸ್ಟೋರ್ ನ ಕಚೇರಿ ಮೇಲೆ ದಾಳಿ ನಡೆಸಿದ್ದ ಪೊಲೀಸರು ನಾಲ್ವರನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone; ಸ್ತ್ರೀ ಸಶಕ್ತೀಕರಣಕ್ಕೆ ನಮೋ ಡ್ರೋನ್ ದೀದಿಗೆ ಕೇಂದ್ರ ಸರಕಾರ ಚಾಲನೆ
Election Commission ವಿರುದ್ಧ ಕಾಂಗ್ರೆಸ್ ಸಮರ
High Court;ಅತ್ಯಾಚಾರದಿಂದ ಗರ್ಭ ಧರಿಸಿದ್ದ 11ರ ಬಾಲಕಿಯ ಗರ್ಭಪಾತಕ್ಕೆ ಅನುಮತಿ
Maharashtra; ಶಿಂಧೆ ಶಿವಸೇನೆ ನಾಯಕಿ ಸೈನಾ ‘ಇಂಪೋರ್ಟೆಡ್ ಮಾಲ್’: ಸಂಸದ ವಿವಾದ
ISRO;ಲೇಹ್‌ನಲ್ಲಿ’ಅನಲಾಗ್ ಸ್ಪೇಸ್ ಮಿಷನ್’: ಭವಿಷ್ಯದ ಯೋಜನೆಗಳಿಗೆ ಸಹಕಾರಿ
MUST WATCH
ಹೊಸ ಸೇರ್ಪಡೆ
Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.