ರಷ್ಯಾ ನೂರಾರು ಸಾವುಗಳ ಲೆಕ್ಕವೇ ಇಲ್ಲ
Team Udayavani, May 13, 2020, 10:18 AM IST
ಮಾಸ್ಕೊ: ರಷ್ಯಾದಲ್ಲಿ ಕೋವಿಡ್ ವೈರಸ್ ಹಾವಳಿ ಪ್ರಾರಂಭವಾದದ್ದು ತಡವಾಗಿಯಾದರೂ ಅದು ಹರಡುತ್ತಿರುವ ವೇಗ ಕಳವಳಕಾರಿಯಾಗಿದೆ. ವೈರಸ್ ಪ್ರಸರಣ ಸುರುವಾದ ಕೆಲವೇ ದಿನಗಳಲ್ಲಿ ರಷ್ಯಾ ಅತಿ ಹೆಚ್ಚು ಸೋಂಕಿತರು ಇರುವ ದೇಶಗಳ ಪೈಕಿ ಮೂರನೇ ಸ್ಥಾನಕ್ಕೇರಿದೆ. ಅದಾಗ್ಯೂ ರಷ್ಯಾ ತನ್ನಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ವಾಸ್ತವ ಮಾತ್ರ ರಷ್ಯಾದ ಈ ಬಡಾಯಿಯನ್ನು ಅಣಕಿಸುತ್ತಿದೆ.
ರಷ್ಯಾದಲ್ಲಿ ಪ್ರತಿ 10 ಲಕ್ಷ ಜನರಿಗೆ ಬರೀ 13 ಮಂದಿ ಮಾತ್ರ ಕೋವಿಡ್ ಗೆ ಬಲಿಯಾಗಿದ್ದರು. ಜಾಗತಿಕವಾಗಿ ಇದು 36 ಇದ್ದು, ರಷ್ಯಾದ ಈ ತೀರಾ ಕಡಿಮೆ ಸಂಖ್ಯೆ ಸಂಶೋಧಕರಿಗೊಂದು ಜಟಿಲ ಪ್ರಶ್ನೆಯಾಗಿಯೇ ಉಳಿದಿತ್ತು. ಆದರೆ ಎಪ್ರಿಲ್‌ನಿಂದೀಚೆಗೆ ದತ್ತಾಂಶಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದಾಗ ರಷ್ಯಾದ ಹೇಳಿಕೆ ಸುಳ್ಳು ಎನ್ನುವುದು ಸಾಬೀತಾಗುತ್ತಿದೆ.
ಮಾಸ್ಕೊದ ಸರಕಾರಿ ಆಸ್ಪತ್ರೆ ಒದಗಿಸಿರುವ ಅಂಕಿಅಂಶದ ಪ್ರಕಾರ ಈ ಆಸ್ಪತ್ರೆಯಲ್ಲಿ ಎಪ್ರಿಲ್‌ನಲ್ಲಿ ಸಂಭವಿಸಿರುವ ಸಾವುಗಳು ಐದು ವರ್ಷದ ಎಪ್ರಿಲ್ ತಿಂಗಳ ಸರಾಸರಿ ಸಾವುಗಳಿಗಿಂತ ಐದು ಪಟ್ಟು ಹೆಚ್ಚು ಇದೆ. ಅಂದರೆ ಎಪ್ರಿಲ್ ತಿಂಗಳೊಂದರಲ್ಲೇ ಈ ಆಸ್ಪತ್ರೆಯಲ್ಲಿ 1,700ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆಯಂತೆ. ಆದರೆ ರಷ್ಯಾ ಕೋವಿಡ್ ನ ಅಂಕಿಅಂಶ ಬಿಡುಗಡೆ ಮಾಡುವಾಗ ಈ ಸಾವುಗಳನ್ನು ಲೆಕ್ಕಕ್ಕೆ ಹಿಡಿದಿರಲಿಲ್ಲ. ರಷ್ಯಾ ಒಟ್ಟಾರೆಯಾಗಿ ತನ್ನಲ್ಲಿ 642 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ ಎಂದು ಹೇಳಿಕೊಂಡಿತ್ತು.
ರಷ್ಯಾ ಮಾತ್ರವಲ್ಲದೆ ಇನ್ನೂ ಹಲವು ದೇಶಗಳು ಹೀಗೆ ಉದ್ದೇಶಪೂರ್ವಕವಾಗಿ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸಿವೆ.
ಒಂದು ವಿಚಾರ ಈಗ ಸ್ಪಷ್ಟವಾಗುತ್ತಿದೆ. ಕೋವಿಡ್ ಬಲಿ ಸಂಖ್ಯೆ ಸರಕಾರ ಹೇಳಿರುವುದಕ್ಕಿಂತ ಕನಿಷ್ಠ ಮೂರು ಪಟ್ಟು ಹೆಚ್ಚು ಇದೆ. ನಿಜವಾದ ಸಾವಿನ ಸಂಖ್ಯೆಯನ್ನು ತಿಳಿಯಲು ವಿಶೇಷವಾದ ಅಧ್ಯಯನ ನಡೆಸುವ ಅಗತ್ಯವಿದೆ ಎನ್ನುತ್ತಾರೆ ಮಾಸ್ಕೊದ ಪ್ರಸಿಡೆನ್ಶಿಯಲ್ ಅಕಾಡೆಮಿ ಆ್ಯಂಡ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್‌ನ ಹಿರಿಯ ಸಂಶೋಧಕಿ ಟಟಿಯಾನ ಎನ್.ಮಿಖಾಯಿಲೋವ.
ಸರಕಾರದ ಬಡಾಯಿ
ನಮ್ಮ ದೇಶ ಜಗತ್ತಿನಲ್ಲೇ ಅತಿ ಕಡಿಮೆ ಕೋವಿಡ್ ಸಾವುಗಳನ್ನು ಕಂಡಿದೆ ಎಂದು ಕೆಲ ದಿನಗಳ ಹಿಂದೆಯಷ್ಟೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೊಂಡಿದ್ದರು. ಸರಕಾರಿ ಟಿವಿ ವಾಹಿನಿಗಳಂತೂ ಕೋವಿಡ್ ವಿರುದ್ಧ ಸರಕಾರ ನಡೆಸುತ್ತಿರುವ ಸಶಕ್ತ ಹೋರಾಟದ ಬಗ್ಗೆ ಪುಂಖಾನುಪುಂಖವಾಗಿ ಸುದ್ದಿಗಳನ್ನು ಮತ್ತು ಜಾಹೀರಾತುಗಳನ್ನು ಬಿತ್ತರಿಸುತ್ತಿದ್ದವು.
ಕೋವಿಡ್ ವ್ಯಾಪಿಸುವಿಕೆ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸೋಮವಾರ ಪುಟಿನ್ ದೇಶವ್ಯಾಪಿ ಜಾರಿಯಲ್ಲಿದ್ದ ಕೆಲಸ “ರಹಿತ ಅವಧಿಯನ್ನು’ ವಜಾಗೊಳಿಸಿರುವುದಾಗಿ ಘೋಷಿಸಿದ್ದರು. ಇದರ ಬೆನ್ನಿಗೆ ರಷ್ಯಾದಲ್ಲಿ ಕೋವಿಡ್ ಗೆ ಬಲಿಯಾದವರ ಕುರಿತು ಅನುಮಾನಗಳು ವ್ಯಕ್ತವಾಗಿವೆ. ಮಾಸ್ಕೊದಲ್ಲಿ ಶೇ.70 ಮತ್ತು ಒಟ್ಟಾರೆ ದೇಶದಲ್ಲಿ ಶೇ.80 ಸಾವುಗಳನ್ನು ಅಧಿಕೃತವಾಗಿ ವರದಿಯೇ ಮಾಡಿಲ್ಲ. ಇದನ್ನು ಸೇರಿಸಿದರೆ ರಷ್ಯಾದ ಸಾವಿನ ಪ್ರಮಾಣ ಅಪಾರವಾಗಲಿದೆ ಎನ್ನುತ್ತಿದೆ ಒಂದು ಮೂಲ. ಹೆಚ್ಚಿನ ಸಾವುಗಳಿಗೆ ಅಂಗಾಂಗ ವೈಫಲ್ಯ, ಹೃದಯಾಘಾತ ಈ ಮುಂತಾದ ಕಾರಣಗಳನ್ನು ತೋರಿಸಲಾಗಿದೆ. ಇದು ರಷ್ಯಾದಲ್ಲಿ ಆರೋಗ್ಯ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿರುವ ವ್ಯವಸ್ಥೆ ಎನ್ನುತ್ತಾರೆ ಮಿಖಾಯಿಲೋವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.