ರಷ್ಯಾ ಸೇನಾ ದಾಳಿ ಹಿನ್ನೆಲೆ: ಕದನ‌ ಕಣದಿಂದ ನಮ್ಮವರ ಕೂಗು


Team Udayavani, Feb 26, 2022, 7:55 AM IST

ರಷ್ಯಾ ಸೇನಾ ದಾಳಿ ಹಿನ್ನೆಲೆ: ಕದನ‌ ಕಣದಿಂದ ನಮ್ಮವರ ಕೂಗು

ಕೀವ್‌ನಲ್ಲಿರುವ ಭಾರತ ರಾಯಭಾರ ಕಚೇರಿ ಮುಂದೆ ಸ್ವದೇಶಕ್ಕೆ ಆಗಮಿಸಲು ನಿಂತಿರುವ ವಿದ್ಯಾರ್ಥಿಗಳು.

ಉಕ್ರೇನ್‌ ಮೇಲೆ ರಷ್ಯಾ ಸೇನಾ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿರುವ ಜನಜೀವನ ಅಸ್ತವ್ಯಸ್ತವಾಗಿದೆ. ಭಾರತೀಯ ವಿದ್ಯಾರ್ಥಿಗಳ ಪರಿಸ್ಥಿತಿಯೂ ಅತಂತ್ರವಾಗಿದೆ. ಅನೇಕ ವಿದ್ಯಾರ್ಥಿಗಳು ಮೆಟ್ರೋ ನಿಲ್ದಾಣಗಳು, ತಮ್ಮ ಹಾಸ್ಟೆಲ್‌ಗ‌ಳ ಕಟ್ಟಡಗಳ ಕೆಳಗೆ ಇರುವ ಬಂಕರ್‌ಗಳಲ್ಲಿ ಅಡಗಿಕೊಂಡಿದ್ದಾರೆ. ಇನ್ನೂ ಕೆಲವರು ತಾವಿರುವ ಅಪಾರ್ಟ್‌ಮೆಂಟ್‌ಗಳಲ್ಲೇ ಆತಂಕದಲ್ಲಿ ದಿನದೂಡುತ್ತಿದ್ದಾರೆ. ಕೆಲವರಿಗೆ ಭಾರತಕ್ಕೆ ಬರುವ ಅವಕಾಶ ಕೊಂಚದರಲ್ಲೇ ತಪ್ಪಿ ಹೋಗಿದೆ. ತಮ್ಮ ಪರಿಸ್ಥಿತಿಯನ್ನು ಅವರೇ ಬಣ್ಣಿಸಿದ್ದಾರೆ…

ಅಂಗಡಿಗಳ ಮುಂದೆ ಸಾಲು ಸಾಲು
ನಾನು ಉಕ್ರೇನ್‌ನ ಇವ್ವಾನೊ ಫ್ರಾಂಕಿವಿಸ್ಕ್ ನ್ಯಾಶನಲ್‌ ಮೆಡಿಕಲ್‌ ವಿಶ್ವವಿದ್ಯಾನಿಲಯದಲ್ಲಿ ನಾಲ್ಕನೇ ವರ್ಷ ವ್ಯಾಸಂಗ ಮಾಡುತ್ತಿದ್ದೇನೆ. ಬುಧವಾರದವರೆಗೆ ಯುದ್ಧ ಆಗುವುದಿಲ್ಲ ಎಂದು ಎಲ್ಲರೂ ಹೇಳುತ್ತಿ ದ್ದರು. ಆದರೆ ಗುರುವಾರ ರಷ್ಯಾ ಏಕಾಏಕಿ ದಾಳಿ ನಡೆಸಿರುವುದು ನಮ್ಮನ್ನು ಧೃತಿಗೆಡಿಸಿತು. ಖರ್ಚಿಗೆ ದುಡೂx ಖಾಲಿಯಾಗುತ್ತಿದೆ. ಎಟಿಎಂಗಳು ಬೇಕಾದಷ್ಟಿವೆ. ಆದರೆ ಅನೇಕ ಎಟಿಎಂಗಳಲ್ಲಿ ದುಡ್ಡಿಲ್ಲ ಎಂದು ಹೇಳಲಾಗುತ್ತಿದೆ. ಉಕ್ರೇನ್‌ನಲ್ಲಿ ಬೇರೆ ದೇಶಗಳಿಂದ ವ್ಯಾಸಂಗ ಮಾಡಲು ಬಂದಿರುವವರು ತುಂಬಾ ತೊಂದರೆಗೀಡಾಗಿದ್ದಾರೆ. ಭಾರತೀಯ ವಿದ್ಯಾರ್ಥಿಗಳು ಇದರಿಂದ ಹೊರತೇನಲ್ಲ. ದಿನಸಿ ಅಂಗಡಿಗಳ ಮಂದೆ ಭಾರತೀಯ ವಿದ್ಯಾರ್ಥಿಗಳು ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯಗಳು ಮಾಮೂಲಿ ಎನಿಸಿವೆ.
-ಸಮೀರ್‌ ಚೌಧರಿ, ಎಂಬಿಬಿಎಸ್‌ ವಿದ್ಯಾರ್ಥಿ

ಉಕ್ರೇನ್‌ ಪರವಾಗಿರಬೇಕಂತೆ!
ಯುದ್ಧದ ಭೀತಿ ಆವರಿಸಿದ್ದಾಗಲೇ ನಾವು ಉಕ್ರೇನನ್ನು ತೊರೆದು ಭಾರತಕ್ಕೆ ಹೋಗಲು ನಿರ್ಧರಿಸಿದ್ದೆವು. ಆದರೆ ಇಲ್ಲಿನ ಕಾಲೇಜು ಆಡಳಿತ ಮಂಡಳಿಗಳು ಪರೀಕ್ಷೆ ಬರೆಯಲು ಶೇ. 100ರಷ್ಟು ಹಾಜರಾತಿ ಕಡ್ಡಾಯ ಎಂದು ಹೇಳಿದ್ದರಿಂದ ನಾವು ಅನಿವಾರ್ಯವಾಗಿ ಉಳಿಯ ಬೇಕಾಯಿತು. ಈಗ ಯುದ್ಧ ಶುರುವಾಗಿದ್ದರೂ ಕಾಲೇಜಿನ ಆಡಳಿತ ಮಂಡಳಿಗಳು, ಸ್ಥಳೀಯ ಸರಕಾರಗಳು, “ಯಾರಿಗೂ ಹಾನಿಯಾಗು ವುದಿಲ್ಲ. ಉಕ್ರೇನ್‌ನ ಬೆಂಬಲಕ್ಕೆ ನಿಲ್ಲಬೇಕು’ ಎಂದು ಎಲ್ಲ ವಿದ್ಯಾರ್ಥಿಗಳಿಗೆ ಕರೆ ನೀಡುತ್ತಿವೆ. ಆದರೆ ನಮಗೆ ಭಯವಾಗುತ್ತಿದೆ. ಆದಷ್ಟೂ ಬೇಗನೇ ನಮ್ಮ ಮನೆಗಳಿಗೆ ಹೋಗಲು ತವಕಿಸುತ್ತಿದ್ದೇವೆ.
-ಹೆಸರು ಹೇಳಲಿಚ್ಛಿಸದ ಭಾರತೀಯ ವಿದ್ಯಾರ್ಥಿ, ಕೀವ್‌.

ಹಾಸ್ಟೆಲ್‌ನಲ್ಲೇ ಜೀವನ
ನಾವೆಲ್ಲರೂ ಇಲ್ಲೊಂದು ಹಾಸ್ಟೆಲ್‌ನಲ್ಲಿ ಭೀತಿಯಿಂದ ಅಡಗಿಕೊಂಡಿದ್ದೇವೆ. ಯುದ್ಧದ ಭೀತಿ ಇರುವು ದರಿಂದ ಹತ್ತಿರದ ಬಾಂಬ್‌ ಬಂಕರ್‌ಗಳಿಗೆ ಹೋಗಿ ಆಶ್ರಯ ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ. ಬೇರೆ ಬೇರೆ ಕಟ್ಟಡಗಳಲ್ಲಿ ಆಶ್ರಯ ಪಡೆದಿರುವ ನಾವು ಮೊಬೈಲ್‌ಗ‌ಳ ಮೂಲಕ ಸ್ಫೂರ್ತಿದಾಯಕ ಸಂದೇಶಗಳನ್ನು ರವಾನಿಸಿಕೊಂಡು, ಅವುಗಳನ್ನು ಓದಿಕೊಂಡು ಪರಸ್ಪರ ಧೈರ್ಯದಿಂದ ಇರಲು ಪ್ರಯತ್ನಿಸುತ್ತಿದ್ದೇವೆ. ಇನ್ನು, ಹೊಟ್ಟೆ ತುಂಬಿಸಿಕೊಳ್ಳಲು ನಮ್ಮ ಕಿಚನ್‌ನಲ್ಲಿ ಲಭ್ಯವಿರುವ ತರಕಾರಿ, ದಿನಸಿಗಳನ್ನೇ ಬಳಸಿಕೊಂಡು ಅಡುಗೆ ಮಾಡಿಕೊಂಡು ಸೇವಿಸುತ್ತಿದ್ದೇವೆ.
-ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿ, ಕೀವ್‌

ಲಕ್ಷ ರೂ. ದಾಟಿದ ವಿಮಾನ ಟಿಕೆಟ್‌ ದರ!
ಗುರುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಯುದ್ಧ ಶುರುವಾದಾಗ ನಾನು ಎಟಿಎಂನಿಂದ ಹಣ ಪಡೆಯಲು ಆಚೆ ಹೋಗಿದ್ದೆ. ಸ್ಫೋಟದ ಸದ್ದುಗಳು ಕೇಳಿದ ಜನರ ಚೆಲ್ಲಾಪಿಲ್ಲಿಯಾಗಿ ಓಡಿಹೋಗ ತೊಡಗಿದರು. ಆದರೆ ಅಷ್ಟರಲ್ಲಾಗಲೇ ಎಟಿಎಂ ವ್ಯವಹಾರಗಳನ್ನು ರದ್ದುಗೊಳಿಸಲಾಗಿತ್ತು. ಹಾಗಾಗಿ ಖಾಲಿ ಕೈಯಲ್ಲಿ ನಾನಿದ್ದ ಅಪಾರ್ಟ್‌ ಮೆಂಟ್‌ಗೆ ಹಿಂದಿರುಗಬೇಕಾಯಿತು. ದಿನಸಿ ಅಂಗಡಿಗಳಲ್ಲಿ ದಿನಸಿಗಾಗಿ ಗುದ್ದಾಟಗಳು ನಡೆದಿವೆ. ಅಮೆರಿಕ, ಯುಕೆ ಸರಕಾರಗಳು ಅವರ ವಿದ್ಯಾರ್ಥಿಗಳನ್ನು ಬೇಗನೇ ಇಲ್ಲಿಂದ ಖಾಲಿ ಮಾಡಿಸಿವೆ. ನಮ್ಮ ತೆರವು ಕೊಂಚ ತಡವಾಯಿತು. ಈಗ ವಿಮಾನ ಟಿಕೆಟ್‌ ದರ 1ರಿಂದ 1.5 ಲಕ್ಷ ರೂ.ಗಳಿಗೆ ಏರಿದೆ. ಭಾರತಕ್ಕೆ ಹೋಗಲು
ಏನು ಮಾಡಬೇಕೋ ತಿಳಿಯುತ್ತಿಲ್ಲ.
-ಸಯಾನ್‌ ಚೌಧರಿ, ಕೋಲ್ಕತಾ

ಬದುಕಿದೆಯಾ ಬಡಜೀವವೇ ಎಂಬಂತೆ ಬಂದೆ…
ಯುದ್ಧ ಶುರುವಾಗುವಷ್ಟರಲ್ಲಿ ನಾನಾಗಲೇ ಭಾರತಕ್ಕೆ ಹೊರಡಲು ಸಜ್ಜಾಗಿದ್ದೆ. ಯುದ್ಧ ಭೀತಿ ಹಿನ್ನೆಲೆಯಲ್ಲಿ ಮೊದಲೇ ಟಿಕೆಟ್‌ ಬುಕ್‌ ಮಾಡಿಸಿಕೊಂಡಿದ್ದ ನಾನು ಕೀವ್‌ ವಿಮಾನ ನಿಲ್ದಾಣದಲ್ಲಿದ್ದೆ. ಇಮಿಗ್ರೇಶನ್‌ ಕೌಂಟರ್‌ನಲ್ಲಿದ್ದಾಗಲೇ ನನಗೆ ನಾಲ್ಕು ಸ್ಫೋಟದ ಸದ್ದು ಕೇಳಿಸಿತು. ಕೆಲವೇ ಸೆಕೆಂಡ್‌ಗಳಲ್ಲಿ ವಿಮಾನದಲ್ಲಿದ್ದವರೆಲ್ಲರೂ ವೇಗವಾಗಿ ಓಡಾಡಲಾರಂಭಿಸಿದರು. ಚೆಕಿಂಗ್‌ಗಾಗಿ ಕೊಟ್ಟಿದ್ದ ನನ್ನ ಲಗೇಜ್‌ ಬ್ಯಾಗ್‌ಗಳು ಎಲ್ಲಿ ಹೋದವು ಎಂಬುದು ಗೊತ್ತಾಗಲಿಲ್ಲ. ಜನಗಳ ದೊಂಬಿಯ ನಡುವೆಯೂ ನಾನು ವಿಮಾನ ನಿಲ್ದಾಣದ ಒಬ್ಬ ಮಹಿಳಾ ಅಧಿಕಾರಿ ಬಳಿ ಸಾಗಿ ಹೋಗಿ “ಮೇಡಂ, ನನ್ನ ಬ್ಯಾಗ್‌ಗಳನ್ನು ನಾನು ಎಲ್ಲಿ ಪಡೆಯಬಹುದು’ ಎಂದು ಕೇಳಿದೆ. ಅದಕ್ಕವರು, “ಆರ್‌ ಯೂ ಮ್ಯಾಡ್‌, ಮೊದಲು ಹೋಗಿ ಫ್ಲೈಟ್‌ ಹತ್ತಿ ಬಚಾವಾಗೋದು ನೋಡಿ’ ಎಂದರು. ಅನಂತರ ನಿಲ್ದಾಣದ ಎಲ್ಲ ಪ್ರಕ್ರಿಯೆಗಳನ್ನು ಅವಸರದಲ್ಲಿ ಮುಗಿಸಲಾಯಿತು. ನಾನು ಬದುಕಿದೆಯಾ ಬಡಜೀವವೇ ಎಂಬಂತೆ ಭಾರತಕ್ಕೆ ಬಂದು ಸೇರಿಕೊಂಡೆ.
-ಅನಿಮೇಶ್‌ ಕುಮಾರ್‌, ಝಾರ್ಖಂಡ್‌

ಪಾವತಿಸಿದ್ದ ಹಣದ ವ್ಯವಹಾರ ರದ್ದಾಗಿದೆ!
ಗುರುವಾರ ಬೆಳಗಿನ ಜಾವ ಸುಮಾರು 5 ಗಂಟೆ ಸಮಯ. ಒಳ್ಳೆಯ ನಿದ್ರೆಯಲ್ಲಿದ್ದ ನನಗೆ ದಿಢೀರನೆ ಸಿಡಿದ ಬಾಂಬ್‌ ಸ್ಫೋಟದ ಸದ್ದು ಕೇಳಿ ಎಚ್ಚರವಾಯಿತು. ಎದೆ ಡವಡವ ಎಂದು ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಗುರುವಾರವೇ ನಾನು ಭಾರತಕ್ಕೆ ಹೊರಡಬೇಕಿತ್ತು. ಆದರೆ ವಿಮಾನ ನಿಲ್ದಾಣಕ್ಕೆ ತೆರಳುವುದು ಹೇಗೆ ಎಂಬುದೇ ತಿಳಿಯಲಿಲ್ಲ. ಅಷ್ಟರಲ್ಲಿ ಮೊಬೈಲಿಗೆ ಬಂದ ಬ್ಯಾಂಕ್‌ ಮೆಸೇಜ್‌ನಲ್ಲಿ, ನಾನು ಭಾರತಕ್ಕೆ ಹೊರಡುವ ವಿಮಾನ ಟಿಕೆಟ್‌ ಬುಕಿಂಗ್‌ಗಾಗಿ ಆನ್‌ಲೈನ್‌ನಲ್ಲಿ ಪಾವತಿಸಿದ್ದ 60 ಸಾವಿರ ರೂ. ವ್ಯವಹಾರವೂ ರದ್ದಾಗಿದೆ ಎಂದು ಮೆಸೇಜ್‌ ಬಂದಿತ್ತು. ಇದರಿಂದ ನಾನು ಭಾರತಕ್ಕೆ ಬರಲಾಗಿಲ್ಲ. ಯಾರಾದರೂ ನಾನು ಭಾರತಕ್ಕೆ ಹೋಗಲು ಸಹಾಯ ಮಾಡುತ್ತಾರೆಯೇ ಎಂದು ಕಾಯುತ್ತಿದ್ದೇನೆ.
-ಶಿಲ್ಪಾ ಗುಪ್ತಾ

ಸಹಾಯದ ನಿರೀಕ್ಷೆಯಲ್ಲಿದ್ದೇನೆ
ನಾನು ಇವಾನೊ ಫ್ರಾಕಿವ್ಸ್‌ ನ್ಯಾಶನಲ್‌ ಮೆಡಿಕಲ್‌ ವಿವಿಯಲ್ಲಿ 2ನೇ ವರ್ಷದ ವೈದ್ಯಕೀಯವ ವಿದ್ಯಾರ್ಥಿಯಾಗಿದ್ದೇನೆ. ಒಂದು ಅವಕಾಶ ಸಿಕ್ಕರೆ ಸಾಕು, ನಾನು ಇಲ್ಲಿಂದ ಭಾರತಕ್ಕೆ ಹೋಗಲು ಕಾತರಳಾಗಿದ್ದೇನೆ. ಕೆಲವರು ಉಕ್ರೇನ್‌ನ ನೆರೆಯ ರಾಷ್ಟ್ರಗಳ ಗಡಿ ಬಳಿಗೆ ಹೋಗಿ ಅಲ್ಲಿನ ರಾಯಭಾರ ಕಚೇರಿಗಳನ್ನು ಸಂಪರ್ಕಿಸಿದರೆ ಅವರು ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆಂದು ಕೇಳಿದ್ದೇನೆ. ಆದರೆ ಇಲ್ಲಿಂದ ಗಡಿಯ ಬಳಿಗೆ ಹೋಗುವುದು ಹೇಗೆ ಎಂಬುದೇ ಗೊತ್ತಾಗುತ್ತಿಲ್ಲ. ನಮಗೆ ಸಮೀಪವಾಗಿರುವುದು ಪೋಲೆಂಡ್‌. ಅಲ್ಲಿನ ಸರಕಾರ ಸಹಾಯ ಮಾಡುವುದೇ ಎಂದು ಆಲೋಚಿಸುತ್ತಿದ್ದೇನೆ.
-ಪ್ರೀತಿ ಸಾಹು, ಅಲಹಾಬಾದ್‌

ಸಿಕ್ಕಿದ್ದು ಈರುಳ್ಳಿ, ಗೋಧಿ ಹಿಟ್ಟು!
ನಾನು ಉಜೊØರೊಡ್‌ನ‌ಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಗುರುವಾರ ಸಂಜೆಯವರೆಗೆ ದಿನಸಿ ಅಂಗಡಿಗಳಲ್ಲಿ ಸಾಮಗ್ರಿ ಸಿಗುತ್ತಿತ್ತು. ಆದರೆ ಶುಕ್ರವಾರ ಅಂಗಡಿಗಳಲ್ಲೂ ದಿನಸಿ ಖಾಲಿಯಾಗಿ ಅಲೆದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗ್ಗೆ ಒಂದು ತುಂಡು ಬ್ರೆಡ್‌ ತಿಂದಿದ್ದ ನಾನು, ಗಂಟೆಗಳವರೆಗೆ ಅಲೆದಾಡಿದರೂ ಒಂದೇ ಒಂದು ಈರುಳ್ಳಿ ಮತ್ತು ಒಂದು ಕೆಜಿ ಗೋಧಿಯಷ್ಟೇ ಸಿಕ್ಕಿತು! ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರಿದಂತೆಲ್ಲ ಇಲ್ಲಿ ಜನರ ಜೀವನ ಹೆಚ್ಚೆಚ್ಚು ಸಂಕಷ್ಟಕ್ಕೀಡಾಗುತ್ತಿದೆ. ಈಗ ಮನೆಗಳಿಗೆ ನೀರು ಸರಬರಾಜು ನಿಂತಿದೆ. ಸದ್ಯದಲ್ಲೇ ವಿದ್ಯುತ್‌ ನಿಲುಗಡೆಯಾಗುವುದೆಂದು ಎಚ್ಚರಿಸಲಾಗಿದೆ. ದಿನಸಿ, ನೀರು ಇಲ್ಲದೆ, ವಿದ್ಯುತ್‌ ಇಲ್ಲದೆ ನಾವು ಬದುಕುವುದಾದರೂ ಹೇಗೆ ಎಂಬ ಚಿಂತೆ ಆವರಿಸಿದೆ.
-ಆಸಿಫ್ ಖಾನ್‌, ರಾಜಸ್ಥಾನ

ಆಹಾರ, ನೀರಿನ ಅಭಾವ
ನಾವು ಅಸಹಾಯಕ ಪರಿಸ್ಥಿತಿಯಲ್ಲಿದ್ದೇವೆ. ಭಾರತೀಯ ರಾಯಭಾರಿ ಕಚೇರಿಯಿಂದ ಯಾವುದೇ ಸಹಾಯ ಈವರೆಗೆ ಸಿಕ್ಕಿಲ್ಲ. ನಮಗೆ ಆಹಾರ, ನೀರಿನ ಅಭಾವ ಉಂಟಾಗಿದೆ. ನಮ್ಮ ಹತ್ತಿರದ ಪ್ರಾಂತ್ಯದಲ್ಲಿ ಕೆಲವು ಬಾಂಬ್‌ಗಳು ಸ್ಫೋಟವಾದ ಸದ್ದು ಕೇಳಿದವು. ನನಗೆ ಭಯವಾಗುತ್ತಿದೆ. ಕೂಡಲೇ ನಮ್ಮ ಕಾಲೇಜು ಆಡಳಿತ ಮಂಡಳಿಗಳ ಅಧಿಕಾರಿಯೊಬ್ಬರು ಫೋನಾಯಿಸಿ, ಒಲೆಸ್ಕಿವಿಸ್ಕಾದಲ್ಲಿರುವ ಕಾಲೇಜು ಹಾಸ್ಟೆಲ್‌ನ ಕೆಳಗಿರುವ ಬಂಕರ್‌ಗಳಲ್ಲಿ ಅವಿತುಕೊಳ್ಳಲು ಹೇಳಿದ್ದಾರೆ. ನನಗೆ ಹೊರಹೋಗುವುದೇ ಭಯವಾಗುತ್ತಿದೆ.
-ಶ್ರೀಜಾ ರೆಡ್ಡಿ, ವಿಜಯವಾಡ ಮೂಲದ ವಿದ್ಯಾರ್ಥಿನಿ

ಮಿಸ್‌ ಆದ ಚಾನ್ಸ್‌
ನಾನು ಭಾರತಕ್ಕೆ ಹೋಗುವ ಅವಕಾಶ ಸ್ವಲ್ಪದರಲ್ಲೇ ಮಿಸ್‌ ಆಯಿತು. ಗುರುವಾರ ಮಧ್ಯಾಹ್ನ ಕೀವ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಬೇಕಿದ್ದ ವಿಮಾನದಲ್ಲಿ ನಾನು ಭಾರತಕ್ಕೆ ಪಯಣಿಸಬೇಕಿತ್ತು. ಖಾರ್ಕಿವ್‌ನಿಂದ ಕೀವ್‌ವರೆಗೆ ಆರು ಗಂಟೆಗಳ ಕಾಲ ಬಸ್‌ ಪ್ರಯಾಣ ಮಾಡಿ, ವಿಮಾನ ನಿಲ್ದಾಣ ತಲುಪುವಷ್ಟರಲ್ಲಿ ವಿಮಾನ ನಿಲ್ದಾಣವನ್ನು ಬಂದ್‌ ಮಾಡಲಾಗಿತ್ತು. ಕೀವ್‌ ನಗರದಿಂದ 10 ಕಿ.ಮೀ. ದೂರವಿರುವ ವಿಮಾನ ನಿಲ್ದಾಣದ ಮುಂದೆ ನನ್ನನ್ನು ಇಳಿಸಿದ್ದ ಬಸ್‌ ಕೂಡ ನಗರದ ಕಡೆಗೆ ಪ್ರಯಾಣಿಸಿತ್ತು. ನಾನು ಅತ್ತಲೂ ಹೋಗದೆ ಇತ್ತಲೂ ಹೋಗದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡೆ.
-ಅನುರಾಗ್‌ ಪೂನಿಯಾ

ಟಾಪ್ ನ್ಯೂಸ್

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

1-ramama

China; ಬೌದ್ಧ ಪಠ್ಯಗಳಿಂದ ರಾಮಾಯಣ ನೆಲೆ: ಸಂಶೋಧನೆ

US Election 2024: ಟ್ರಂಪ್‌, ಕಮಲಾ ಭವಿಷ್ಯ ಇಂದು ನಿರ್ಧಾರ

US Election 2024: ಟ್ರಂಪ್‌, ಕಮಲಾ ಭವಿಷ್ಯ ಇಂದು ನಿರ್ಧಾರ

1-sarco

Switzerland; ಅಕ್ರಮವಾಗಿ ಆತ್ಮಹ*ತ್ಯಾ ಕೋಶ ಬಳಕೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Yathnal-eshwarappa

Waqf: ಕಾಂಗ್ರೆಸ್‌ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಕಬಳಿಕೆ: ಯತ್ನಾಳ್‌

10-rabakavi

Rabkavi Banhatti: ಹೊಸೂರಿನ ಸ್ಮಶಾನ ವಕ್ಫ್ ಆಸ್ತಿ

Jharkhand contest between pro-people and pro-prime government: Congress

Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್‌

1

Puttur: ತಮ್ಮನ ಹ*ತ್ಯೆ ಆರೋಪಿಗೆ ಜಾಮೀನು

9-mudhol

Mudhol: ನನ್ನ ಮೇಲಿನ ಆರೋಪ‌ ನಿರಾಧಾರ: ತಿಮ್ಮಾಪುರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.