![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Mar 6, 2022, 6:35 AM IST
ರಷ್ಯಾ-ಉಕ್ರೇನ್ ಕಾಳಗ ನಡೆಯುತ್ತಿರು ವಂತೆಯೇ ಸೈಬರ್ ಯುದ್ಧ ತೀವ್ರ ಗೊಂಡಿದೆ. ಉಕ್ರೇನ್‌ನ ಡಿಜಿಟಲ್ ಸೇನೆಯು ಸೈಬಲ್, ಇಂಟೆಲ್ ಮತ್ತು ಇನ್ಫೋ ವಾರ್ ಮೂಲಕ ರಷ್ಯಾದ ನಿದ್ದೆಗೆಡಿಸಿದೆ. ಉಕ್ರೇನ್‌ನ ಹ್ಯಾಕರ್‌ಗಳ ಗುಂಪು ಸ್ವಯಂ ಪ್ರೇರಿತವಾಗಿ, ರಷ್ಯಾಗೆ ಇಂಟರ್‌ನೆಟ್ ಪೂರೈಕೆ ಮಾಡುವ ವ್ಯವಸ್ಥೆಯನ್ನೇ ಹ್ಯಾಕ್ ಮಾಡಿದೆ.
ಇದರಿಂದಾಗಿ ಒಟ್ಟಾರೆಯಾಗಿ ಇಡೀ ಐರೋಪ್ಯ ಒಕ್ಕೂಟದಲ್ಲಿ ಬಳಕೆದಾರರಿಗೆ ಇಂಟರ್‌ನೆಟ್ ಸಮಸ್ಯೆ ಉಂಟಾಗಿದೆ. ಫ್ರಾನ್ಸ್‌ನಲ್ಲಿ ನಾರ್ಡ್‌ನೆಟ್ ಎಂಬ ಸಂಸ್ಥೆ ನೀಡುವ ಉಪಗ್ರಹ ಇಂಟರ್‌ನೆಟ್ ವ್ಯವಸ್ಥೆಯನ್ನು ಬಳಕೆ ಮಾಡುವ 9 ಸಾವಿರ ಮಂದಿಗೆ ತೊಂದರೆಯಾಗಿದೆ. ಬಿಗ್ ಬ್ಲೂ ಎಂಬ ಸ್ಯಾಟಲೈಟ್ ಇಂಟರ್‌ನೆಟ್ ಕಂಪನಿಯು ಜರ್ಮನಿ, ಫ್ರಾನ್ಸ್, ಹಂಗೇರಿ, ಗ್ರೀಸ್, ಇಟೆಲಿ, ಪೋಲೆಂಡ್‌ಗಳಲ್ಲಿ 40 ಸಾವಿರ ಮಂದಿ ಗ್ರಾಹಕರಿಗೆ ತೊಂದರೆಯಾಗಿದೆ ಎಂದು ತಿಳಿಸಿದೆ.
ವಿಮಾನ ಉಡೀಸ್; ಪೈಲಟ್ ವಶಕ್ಕೆ: ಚೆರ್ನಿಹಿವ್ ಹೊರವಲಯದಲ್ಲಿ ಶನಿವಾರ ಉಕ್ರೇನ್ ಸೇನೆಯು ರಷ್ಯಾದ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿದೆ. ಜತೆಗೆ, ವಿಮಾನದ ಪೈಲಟ್ ಮೇಜರ್ ಕೃವೋ ಲಪೋವ್‌ರನ್ನು ವಶಕ್ಕೆ ಪಡೆ ದಿದೆ. ಇದೇ ವೇಳೆ, ನಗರದಲ್ಲಿ ಶನಿ ವಾರ ಸ್ಫೋಟದ ಸದ್ದು ಕೇಳಿಸಿದೆ. 2 ಶಾಲೆಗಳು, ಕಟ್ಟಡದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಅವಶೇಷಗಳಡಿಯಿಂದ 22 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಮುಂದಿನ ವಾರ ಪೋಲೆಂಡ್‌ಗೆ ಕಮಲಾ
ಯುದ್ಧ ಮುಂದುವರಿದಿರು ವಂತೆಯೇ ಉಕ್ರೇನ್‌ನ ನೆರೆರಾಷ್ಟ್ರಗ ಳಾದ ಪೋಲೆಂಡ್ ಮತ್ತು ರೊಮ್ಯಾನಿಯಾಗೆ ಮುಂದಿನ ವಾರ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿ ನೀಡಲಿದ್ದಾರೆ. ಶತ್ರುರಾಷ್ಟ್ರ ರಷ್ಯಾದ ವಿರುದ್ಧ ತನ್ನ ಐರೋಪ್ಯ ಮಿತ್ರ ರಾಷ್ಟ್ರಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಅವರು ಅಲ್ಲಿಗೆ ಪ್ರಯಾಣಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.