ರಷ್ಯಾಕ್ಕೆ “ಅರ್ಥ’ ಪ್ರಹಾರ; ಕೆಲವು ಬ್ಯಾಂಕ್‌ಗಳಿಗೆ ಸ್ವಿಫ್ಟ್ ನಿಂದ ನಿಷೇಧ

Team Udayavani, Feb 28, 2022, 7:30 AM IST

ರಷ್ಯಾಕ್ಕೆ “ಅರ್ಥ’ ಪ್ರಹಾರ; ಕೆಲವು ಬ್ಯಾಂಕ್‌ಗಳಿಗೆ ಸ್ವಿಫ್ಟ್ ನಿಂದ ನಿಷೇಧ

ವಾಷಿಂಗ್ಟನ್‌: ಉಕ್ರೇನ್‌ ವಿರುದ್ಧ ಅಪ್ರಚೋದಿತ ಆಕ್ರಮಣ ಮಾಡಿರುವ ರಷ್ಯಾಗೆ ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಮತ್ತಷ್ಟು ಬಿಸಿ ಮುಟ್ಟಿಸಿವೆ.

ರಷ್ಯಾದ ಅರ್ಥವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಲೆಂದೇ ಜಾಗತಿಕ ಹಣಕಾಸು ವ್ಯವಸ್ಥೆಯಿಂದ (ಸ್ವಿಫ್ಟ್- ಸೊಸೈಟಿ ಫಾರ್‌ ವರ್ಲ್ಡ್ ವೈಡ್‌ ಇಂಟರ್‌ಬ್ಯಾಂಕ್‌ ಫಿನಾನ್ಶಿಯಲ್‌ ಟೆಲಿಕಮ್ಯುನಿಕೇಷನ್‌) ರಷ್ಯಾದ ಕೆಲವು ಬ್ಯಾಂಕ್‌ಗಳನ್ನು ಹೊರ ಹಾಕಿವೆ. ಇದರ ಜತೆಗೆ ರಷ್ಯಾ ಸರ್ಕಾರದ ಕೇಂದ್ರ ಬ್ಯಾಂಕ್‌ಗೆ ಕೂಡ ಅಂತಾರಾಷ್ಟ್ರೀಯವಾಗಿ ಕೆಲ ವ್ಯವಹಾರಗಳನ್ನು ನಡೆಸದಂತೆ ತಡೆಯೊಡ್ಡಲಾಗಿದೆ.

ಸ್ವಿಫ್ಟ್ ಒಕ್ಕೂಟದಲ್ಲಿ ಭಾರತ ಸೇರಿದಂತೆ ಜಗತ್ತಿನ 200 ದೇಶಗಳ 11 ಸಾವಿರ ಬ್ಯಾಂಕ್‌ಗಳು ಮತ್ತು ವಿತ್ತೀಯ ಸಂಸ್ಥೆಗಳು ಇವೆ. ಇದಲ್ಲದೇ, ಆ ದೇಶದ ಬ್ಯಾಂಕ್‌ಗಳು ಮತ್ತು ಶ್ರೀಮಂತರು ವಿದೇಶಗಳಲ್ಲಿ ಹೊಂದಿರುವ ಆಸ್ತಿಯನ್ನು ಮುಟ್ಟುಗೋಲು ಹಾಕುವ ನಿಟ್ಟಿನಲ್ಲಿಯೂ ಕೂಡ ಕ್ರಮಗಳನ್ನು ಕೈಗೊಳ್ಳಲು ಅಮೆರಿಕ, ಐರೋಪ್ಯ ಒಕ್ಕೂಟದ ಆಯೋಗ, ಫ್ರಾನ್ಸ್‌, ಜರ್ಮನಿ, ಇಟಲಿ, ಯು.ಕೆ ಮತ್ತು ಕೆನಡಾ ಈಗಾಗಲೇ ನಿರ್ಧರಿಸಿವೆ.

ಏನಿದು ಸ್ವಿಫ್ಟ್?
ಸ್ವಿಫ್ಟ್ (Society for Worldwide Interbank Financial Telecommunication) ಎಂದರೆ ಭಾರತ ಸೇರಿದಂತೆ ಜಗತ್ತಿನ 200ಕ್ಕಿಂತಲೂ ಅಧಿಕ ದೇಶಗಳ ಬ್ಯಾಂಕ್‌ಗಳು ಮತ್ತು ವಿತ್ತೀಯ ಸಂಸ್ಥೆಗಳ ಒಕ್ಕೂಟ. ಇದನ್ನು ಜಾಗತಿಕ ಪಾವತಿ ಗೇಟ್‌ವೇ ಎಂದೂ ಕರೆಯುತ್ತಾರೆ. ಇಲ್ಲಿ ಹಣಕಾಸಿನ ಚಲನೆ ಆಗುವುದಿಲ್ಲ. ಬದಲಿಗೆ 200 ದೇಶಗಳ 11 ಸಾವಿರ ಬ್ಯಾಂಕುಗಳಿಗೆ ಸುರಕ್ಷಿತ ಹಣಕಾಸು ಮೆಸೇಜಿಂಗ್‌ ಸೇವೆ ಒದಗಿಸುವ ಮೂಲಕ ವಹಿವಾಟುಗಳ ಮಾಹಿತಿಯನ್ನು ಒದಗಿಸುವ ಮಧ್ಯವರ್ತಿಯಾಗಿ ಸ್ವಿಫ್ಟ್ ಕಾರ್ಯನಿರ್ವಹಿಸುತ್ತದೆ. ಐರೋಪ್ಯ ಒಕ್ಕೂಟದ ಬೆಲ್ಜಿಯಂನಲ್ಲಿ ಅದರ ಪ್ರಧಾನ ಕಚೇರಿ ಇದೆ. ಜಗತ್ತಿನ ಪ್ರಮುಖ ಹನ್ನೊಂದು ಕೈಗಾರಿಕಾ ದೇಶಗಳಾದ ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ನೆದರ್ಲೆಂಡ್‌, ಸ್ವೀಡನ್‌, ಸ್ವಿಜರ್ಲೆಂಡ್‌, ಯುಕೆ, ಅಮೆರಿಕ, ಬೆಲ್ಜಿಯಂ ಈ ಒಕ್ಕೂಟದ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತವೆ.

ಇದನ್ನೂ ಓದಿ:ದ್ವಾದಶ ಜ್ಯೋತಿರ್ಲಿಂಗಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಬೊಮ್ಮಾಯಿ

ಯಾವಾಗ ಸ್ಥಾಪನೆ?
1970ರಲ್ಲಿ ಇದನ್ನು ಸ್ಥಾಪಿಸಲಾಗಿದೆ. 2020ರ ಮಾಹಿತಿಯ ಪ್ರಕಾರ ಅದು 362.30 ಕೋಟಿ ರೂ. ಲಾಭವನ್ನು ಇದು ಗಳಿಸಿದೆ.

ರಷ್ಯಾದ ಮೇಲೇನು ಪರಿಣಾಮ?
– ರಷ್ಯಾದ ಕಂಪನಿಗಳು, ಬ್ಯಾಂಕ್‌ಗಳಿಗೆ ಆಮದು ಮತ್ತು ರಫ್ತು ಕ್ಷೇತ್ರದಲ್ಲಿ ಪಾವತಿ ಮಾಡಲು ಕಷ್ಟವಾಗಲಿದೆ
– ಆ ದೇಶದ ನಾಗರಿಕರಿಗೂ ಅಂತಾರಾಷ್ಟ್ರೀಯ ವ್ಯವಹಾರ ಕಠಿಣವಾಗಲಿದೆ.
– ರಷ್ಯಾದ ಸೆಂಟ್ರಲ್‌ ಬ್ಯಾಂಕ್‌ನ ಆಸ್ತಿಪಾಸ್ತಿ ಸ್ತಂಭನಗೊಳ್ಳಲಿದೆ, ಸಾಗರೋತ್ತರ ಮೀಸಲು ನಿಧಿಯನ್ನು ಬಳಸಿಕೊಳ್ಳಲು ಅಸಾಧ್ಯವಾಗಲಿದೆ
– ರಷ್ಯಾದ ಬ್ಯಾಂಕ್‌ಗಳಿಗೆ ಫೋನ್‌, ಮೆಸೇಜಿಂಗ್‌ ಆ್ಯಪ್‌ ಅಥವಾ ಇ-ಮೇಲ್‌ಗ‌ಳ ಮೂಲಕ ಹಣಕಾಸು ವಿಚಾರಗಳನ್ನು ಪ್ರಸ್ತಾಪಿಸುವ ಅನಿವಾರ್ಯ ಉಂಟಾಗಬಹುದು.
– ರಷ್ಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಏಕಾಂಗಿಯಾಗುತ್ತದೆ.
– ನಿಷೇಧ ಅನ್ವಯ ಆಗದೇ ಇರುವ ರಾಷ್ಟ್ರಗಳಲ್ಲಿ ಅಂತಾರಾಷ್ಟ್ರೀಯ ಮಾನ್ಯತೆಯ ಪಾವತಿ ವ್ಯವಸ್ಥೆ ಬಳಕೆ ಮಾಡಬಹುದು. ಬದಲಿ ವ್ಯವಸ್ಥೆಯ ಮೂಲಕ ನಡೆಸುವ ಪಾವತಿ ವ್ಯವಸ್ಥೆ ಹೆಚ್ಚು ವೆಚ್ಚದಾಯಕವಾಗಬಹುದು. ಇದರಿಂದಾಗಿ ವಹಿವಾಟಿನ ಪ್ರಮಾಣ ಕಡಿಮೆಯಾಗಬಹುದು.

ಸ್ವಿಫ್ಟ್ ನಿಂದ ರಷ್ಯಾವನ್ನು ಹೊರ ಹಾಕಿದ್ದರ ಎಫೆಕ್ಟ್ ಸೋಮವಾರ ಸ್ಪಷ್ಟವಾಗಿ ಗೋಚರವಾಗಲಿದೆ. ದೇಶದ ಕರೆನ್ಸಿ ಮಾರುಕಟ್ಟೆ ಪತನಗೊಳ್ಳುವುದು ನಿಶ್ಚಿತ.
– ಸರ್ಗಿ ಅಲೆಸ್ಕಾಶೆನ್ಕೋ, ರಷ್ಯಾ ಸೆಂಟ್ರಲ್‌ ಬ್ಯಾಂಕ್‌ ನಿವೃತ್ತ ಉಪಾಧ್ಯಕ್ಷ

ಟಾಪ್ ನ್ಯೂಸ್

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Ambedkar row: Amit Shah gone mad, he should leave politics says Lalu Prasad Yadav

Ambedkar row: ಅಮಿತ್‌ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.