ಸೇನೆಗೆ ಬಂತು ಎಸ್‌-400 ಬಲ : ರಷ್ಯಾದಿಂದ ಮೊದಲ ಕಂತಿನ ಕ್ಷಿಪಣಿ ರವಾನೆ ಶುರು

ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಮೊದಲು ನಿಯೋಜನೆ

Team Udayavani, Nov 15, 2021, 7:40 AM IST

ಸೇನೆಗೆ ಬಂತು ಎಸ್‌-400 ಬಲ : ರಷ್ಯಾದಿಂದ ಮೊದಲ ಕಂತಿನ ಕ್ಷಿಪಣಿ ರವಾನೆ ಶುರು

ದುಬೈ: ರಷ್ಯಾದಿಂದ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಎಸ್‌-400 ಟ್ರೈಂಫ್ನ ಪೂರೈಕೆ ಭಾರತಕ್ಕೆ ಶುರುವಾಗಿದೆ. ಮುಂದಿನ ತಿಂಗಳ ಅಂತ್ಯಕ್ಕೆ ಕ್ಷಿಪಣಿಯ ಮೊದಲ ಸ್ಕ್ವಾಡ್ರನ್‌ ಪೂರೈಕೆ ಮುಕ್ತಾಯವಾಗಲಿದೆ ಎಂದು ರಷ್ಯಾದ ಮಿಲಿಟರಿ ತಾಂತ್ರಿಕ ಸಹಕಾರ ಸಂಸ್ಥೆ (ಎಫ್ಎಸ್‌ಎಂಟಿಸಿ) ನಿರ್ದೇಶಕ ಡಿಮಿó ಶುಗೇವ್‌ ಖಚಿತಪಡಿಸಿದ್ದಾರೆ. ದೇಶದ ಎರಡು ನೆರೆ”ಹೊರೆ’ಗಳಾಗಿರುವ ಪಾಕಿಸ್ತಾನ ಮತ್ತು ಚೀನಾ ಪದೇ ಪದೆ ತಂಟೆಕೋರತನ ಪ್ರದರ್ಶಿಸುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ಚೀನಾ ದಾಳಿಯ ಬಳಿಕ 2 ದೇಶಗಳ ನಡುವೆ ಸೌಹಾರ್ದ ಬಾಂಧವ್ಯ ಉಳಿದಿಲ್ಲ.

ಈಗಾಗಲೇ ಫ್ರಾನ್ಸ್‌ನಿಂದ ಖರೀದಿಸಲಾಗಿರುವ ರಫೇಲ್‌ ಯುದ್ಧ ವಿಮಾನಗಳನ್ನು ಚೀನಾ ಗಡಿಗುಂಟ ನಿಯೋಜಿಸಲಾಗಿದೆ. ಇದೀಗ ಎಸ್‌-400 ಕ್ಷಿಪಣಿ ರಕ್ಷಣೆ ವ್ಯವಸ್ಥೆ ಲಭ್ಯವಾಗುತ್ತಿರುವುದರಿಂದ ಭಾರತೀಯ ವಾಯುಪಡೆ (ಐಎಎಫ್)ಗೆ ಮತ್ತಷ್ಟು ಬಲಬರಲಿದೆ. ಚೀನಾ ವಿಚಾರಕ್ಕೆ ಬರುವುದಾದರೆ, ಆ ದೇಶವೂ ಕೂಡ ಇದೇ ಮಾದರಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹೊಂದಿದೆ. ಆ ಪೈಕಿ ಎರಡನ್ನು ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಟಿಬೆಟ್‌ನ ನಗ್ರಿ ಗರ್‌ ಗುನ್ಸಾ ಮತ್ತು ನಿಂಗಿc ವಾಯುನೆಲೆಯಲ್ಲಿ ನಿಯೋಜಿಸಿದೆ.

ಮೊದಲು ಪಶ್ಚಿಮದಲ್ಲಿ:
ರಷ್ಯಾ ಜತೆಗೆ 35 ಸಾವಿರ ಕೋಟಿ ರೂ. ವೆಚ್ಚದಲ್ಲಿ ಒಪ್ಪಂದ ಮಾಡಿಕೊಂಡು ಖರೀದಿಸಲಾಗುತ್ತಿರುವ ಎಸ್‌-400 ಎಸ್‌-400 ಟ್ರೈಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ದೇಶದ ಪಶ್ಚಿಮ ಭಾಗದಲ್ಲಿ ನಿಯೋಜಿಸಲಾಗುತ್ತದೆ. ಅಲ್ಲಿ ನಿಯೋಜಿಸಿದರೆ, ಚೀನಾ ಮತ್ತು ಪಾಕಿಸ್ತಾನಗಳಿಂದ ಉಂಟಾಗಬಹುದಾದ ಸಂಭಾವ್ಯ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿದೆ. ಒಟ್ಟು ಐದು ಸ್ಕ್ವಾಡ್ರನ್‌ಗಳಷ್ಟು ಕ್ಷಿಪಣಿಗಳು ದೇಶಕ್ಕೆ ಸಿಗಲಿವೆ.

ಪುಟಿನ್‌ ಭೇಟಿ:
ಮುಂದಿನ ತಿಂಗಳ ಎರಡನೇ ವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನವದೆಹಲಿಗೆ ಆಗಮಿಸಲಿರುವಂತೆಯೇ ಕ್ಷಿಪಣಿ ದೇಶಕ್ಕೆ ಆಗಮಿಸಲಾರಂಭಿಸಿದೆ. ಪ್ರವಾಸದ ವೇಳೆ ಪುಟಿನ್‌ ಎಸ್‌-400 ಎಸ್‌-400 ಟ್ರೈಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಧಿಕೃತವಾಗಿ ಹಸ್ತಾಂತರಿಸಲಿದ್ದಾರೆ. ಅವರ ಪ್ರವಾಸದಲ್ಲಿಯೇ ಭಾರತ ಮತ್ತು ರಷ್ಯಾ ನಡುವೆ ಜನವರಿಯಲ್ಲಿ ನಡೆಯಲಿರುವ 2 ದೇಶಗಳ ಮೊದಲ 2+2 ಮಾತುಕತೆಗೂ ವೇದಿಕೆ ನಿರ್ಮಾಣವಾಗಲಿದೆ.

ಇದನ್ನೂ ಓದಿ : ಪಾಕ್‌ ಜೈಲಿನಿಂದ 20 ಭಾರತೀಯ ಮೀನುಗಾರರ ಬಿಡುಗಡೆ : ಸೋಮವಾರ ಭಾರತಕ್ಕೆ ಹಸ್ತಾಂತರ

ಏನಿದು ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ?
– ನಾಲ್ಕು ವಿವಿಧ ರೀತಿಯ ಕ್ಷಿಪಣಿಗಳನ್ನು ಹೊಂದಿರುತ್ತವೆ.
– ಶತ್ರುವಿನ ಯುದ್ಧ ವಿಮಾನ (400 ಕಿಮೀ), ಖಂಡಾಂತರ ಕ್ಷಿಪಣಿ (250 ಕಿಮೀ), ಏರ್‌ಬಾರ್ನ್ ವಾರ್ನಿಂಗ್‌ ಆ್ಯಂಡ್‌ ಕಂಟ್ರೋಲ್‌ ಸಿಸ್ಟಮ್‌- ಎಡಬ್ಲೂéಎಸಿಎಸ್‌ (120 ಕಿಮೀ), ಸಣ್ಣ ಕ್ಷಿಪಣಿ (40 ಕಿಮೀ) ವ್ಯಾಪ್ತಿ ಚಲಿಸಬಲ್ಲದು.
36 ಗುರಿ- ಒಂದೇ ಬಾರಿಗೆ ಛೇದನ ಸಾಮರ್ಥ್ಯ
– 400 ಕಿಮೀ ದೂರದಲ್ಲಿ , 30 ಕಿಮೀ ಎತ್ತರದಲ್ಲಿ ಹಾರಾಡುತ್ತಿರುವ ಯುದ್ಧ ವಿಮಾನ, ಡ್ರೋನ್‌ಗಳು, ಖಂಡಾಂತರ ಮತ್ತು ಕ್ರೂéಸ್‌ ಮಿಸೈಲ್‌ಗ‌ಳನ್ನು ಛೇದನ ಸಾಮರ್ಥ್ಯ

ಅಭಿವೃದ್ಧಿಪಡಿಸಿದ್ದು ಯಾರು?
1990ರಲ್ಲಿ ಅಲ್ಮಾಜ್‌ ಸೆಂಟ್ರಲ್‌ ಡಿಸೈನ್‌ ಬ್ಯೂರೋ ಅಭಿವೃದ್ಧಿಪಡಿಸಿದೆ. ನ್ಯಾಟೋ ಪಡೆಗಳು ಈ ಕ್ಷಿಪಣಿ ವ್ಯವಸ್ಥೆ ಹೊಂದಿವೆ. 2007ರಲ್ಲಿ ರಷ್ಯಾ ಸೇನೆಗೆ ಸೇರ್ಪಡೆಯಾಗಿತ್ತು.

35 ಸಾವಿರ ಕೋಟಿ ರೂ.- ಭಾರತ-ರಷ್ಯಾ ನಡುವಿನ ಒಪ್ಪಂದದ ಮೊತ್ತ
05- ಇಷ್ಟು ವರ್ಷಗಳಲ್ಲಿ ಪೂರೈಕೆ ಮುಕ್ತಾಯ
05 – ಸ್ವಾಡ್ರನ್‌ಗಳು. ಒಂದು ಸ್ಕ್ವಾಡ್ರನ್‌ನಲ್ಲಿ 12-24 ಯುದ್ಧ ವಿಮಾನಗಳು ಅಥವಾ ಕ್ಷಿಪಣಿಗಳು ಇರುತ್ತವೆ

ಟಾಪ್ ನ್ಯೂಸ್

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.