ತರಕಾರಿ ಖರೀದಿ-ಮಾರಾಟಕ್ಕೆ ಸಹಕಾರಿ ಸೇತು : ಐವರ್ನಾಡು ಸೊಸೈಟಿ ಉಪಕ್ರಮ
Team Udayavani, May 26, 2021, 7:20 AM IST
ಪುತ್ತೂರು: ಲಾಕ್‌ಡೌನ್ ಕಾರಣ ಊರ ಬೆಳೆಗಾರ ರಿಂದ ತರಕಾರಿ ಖರೀದಿಸಿ, ಹೆಚ್ಚುವರಿಯಾಗಿ ಬಯಲು ಸೀಮೆ ಯಿಂದ ತರಿಸಿ ಸ್ಥಳೀಯವಾಗಿ ಮಾರಾಟ ಮಾಡುವ ಪರಿಕಲ್ಪನೆ ಯನ್ನು ಸುಳ್ಯದ ಐವರ್ನಾಡು ಸಹಕಾರ ಸಂಘ ಜಾರಿಗೆ ತಂದಿದೆ.
ಗ್ರಾಮಕ್ಕೆ ಕೃಷಿ ಪತ್ತಿನ ಸಹಕಾರ ಸಂಘ ಕೊಡು-ಕೊಳ್ಳುವಿಕೆ ಕೇಂದ್ರವಾಗಿದ್ದು ಜನರ ಸಂಚಾರ ಸಮಸ್ಯೆಗೆ ಪರಿಹಾರ ಕಲ್ಪಿಸಿದೆ.
ಏನಿದು ಯೋಜನೆ?
ಕಳೆದ ವರ್ಷ ಲಾಕ್‌ಡೌನ್ ಸಂದರ್ಭ ಐವರ್ನಾಡು ಸಹಕಾರ ಸಂಘವು ಪ್ರಾರಂಭಿಸಿದ ಪ್ರಯತ್ನ ವಿದು. ಊರಿ ನಲ್ಲಿ ಬೆಳೆದ ತರಕಾರಿ ಮಾರಾಟ ಅಥವಾ ಖರೀದಿಗೆ ಗ್ರಾಮಸ್ಥರು ಬೆಳ್ಳಾರೆ ಅಥವಾ ಸುಳ್ಯ ಪೇಟೆಯನ್ನು ನಂಬಿ ದ್ದರು. ಲಾಕ್‌ಡೌನ್ ಎದುರಾದಾಗ ಸಹಕಾರ ಸಂಘವು ಊರಿನಲ್ಲಿ ಬೆಳೆದ ತರಕಾರಿಯನ್ನು ಖರೀದಿಸಲು ಮುಂದಾಯಿತು. ಜತೆಗೆ ಬಯಲು ಸೀಮೆ ಯಿಂದ ತರಕಾರಿ ತಂದು ಮಾರಾಟ ಮಾಡಲು ಪ್ರಾರಂಭಿಸಿತು. ಸಹಕಾರ ಸಂಘದ ವಠಾರವೇ ಇದಕ್ಕೆ ಕೇಂದ್ರ. ಈ ಬಾರಿಯೂ ಇದು ಯಶಸ್ವಿಯಾಗಿ ಸಾಗಿದೆ.
ಮನೆ-ಮನೆಗೆ ಪೂರೈಕೆ
ಜನರು ಮನೆಯಿಂದ ಹೊರಬರುವ ಸಂಕಷ್ಟವನ್ನು ತಪ್ಪಿಸು ವುದ ಕ್ಕಾಗಿ ಪ್ರಾರಂಭದಲ್ಲಿ ಪಿಕಪ್‌ನಲ್ಲಿ ಮನೆಮನೆಗೆ ತೆರಳಿ ತರಕಾರಿ ಮಾರಾಟ ಮಾಡಲಾಗುತ್ತಿತ್ತು. ಈಗ ಬೆಳ್ಳಂಬೆಳಗ್ಗೆಯೇ ಜನರು ಸೊಸೈಟಿ ವಠಾರಕ್ಕೆ ಬಂದು ವ್ಯವಹರಿಸಿ ತೆರಳುತ್ತಿದ್ದಾರೆ.
ಕಳೆದ ವರ್ಷ ಲೌಕ್‌ಡೌನ್ ಮುಕ್ತಾಯದ ಬಳಿಕವೂ ಈ ವ್ಯವಹಾರ ಮುಂದುವರಿದಿತ್ತು. ಪ್ರಸ್ತುತ ದಿನಂಪ್ರತಿ ಇಲ್ಲಿ 5 ಸಾವಿರ ರೂ.ಗೂ ಅಧಿಕ ವ್ಯಾಪಾರ ನಡೆಯು ತ್ತದೆ. ಕಡಿಮೆ ದರದಲ್ಲಿ ಉತ್ತಮ ತರಕಾರಿ ದೊರೆಯು ತ್ತಿದೆ. ಮಾರಾಟ, ಖರೀದಿಗಾಗಿ ಓರ್ವ ಸಿಬಂದಿ ನಿಯೋಜಿಸಲಾಗಿದೆ ಎನ್ನುತ್ತಾರೆ ಸೊಸೈಟಿ ಕಾರ್ಯ ನಿರ್ವಹಣಾಧಿಕಾರಿ ರವಿಪ್ರಸಾದ್ ಚೆಮೂ°ರು.
ಲಾಕ್‌ಡೌನ್‌ನಿಂದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ತರಕಾರಿ ಬೆಳೆದವರಿಗೆ ನಷ್ಟ ಉಂಟಾಗುತ್ತಿರುವುದನ್ನು ಹಾಗೂ ತರಕಾರಿಗೆ ಗ್ರಾಮಸ್ಥರು ಪೇಟೆಗೆ ಹೋಗಬೇಕಾದ ಅನಿ ವಾರ್ಯ ವನ್ನು ಮನಗಂಡು ಸ್ವತಃ ಸಹಕಾರ ಸಂಘವೇ ಖರೀದಿ- ಮಾರಾಟ ಪ್ರಾರಂಭಿಸಿತು. ತಾಲೂಕಿನಲ್ಲಿ ಮೊದಲ ಬಾರಿಗೆ ಈ ಪರಿಕಲ್ಪನೆಯ ಅನುಷ್ಠಾನವಾಗಿದ್ದು, ಯಶಸ್ವಿಯಾಗಿದೆ.
– ಎಸ್.ಎನ್. ಮನ್ಮಥ, ಐವರ್ನಾಡು ಸಹಕಾರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.