ಸಸಿಹಿತ್ಲು ಬೀಚ್‌ನಲ್ಲಿ ನೀರಿಗಿಳಿದ 7 ಮಂದಿ ರಕ್ಷಣೆ: ಓರ್ವ ಸಾವು, ಮತ್ತೋರ್ವ ನೀರು ಪಾಲು
Team Udayavani, Jan 10, 2021, 7:16 PM IST
ಸಸಿಹಿತ್ಲು : ಸಸಿಹಿತ್ಲು ಮುಂಡ ಬೀಚ್ ಗೆ ಬಂದ 9 ಮಂದಿ ಯುವಕರ ತಂಡ ಸಮುದ್ರಕ್ಕೆ ಇಳಿದ ಪರಿಣಾಮ ನೀರಿನ ಸೆಳೆತಕ್ಕೆ ಸಿಲುಕಿದ ಪರಿಣಾಮ ಏಳು ಮಂದಿಯನ್ನು ರಕ್ಷಣೆ ಮಾಡಲಾಗಿದ್ದು ಓರ್ವ ಸಾನ್ನಪ್ಪಿದ್ದು, ಇನ್ನೋರ್ವ ನೀರು ಪಾಲಾದ ಘಟನೆ ರವಿವಾರ ಸಂಜೆ ಸಂಭವಿಸಿದೆ.
ಮೃತಪಟ್ಟವರನ್ನು ಸಾಣೂರಿನ ಸುಂದರ್ (45) ಎಂದು ಗುರುತಿಸಲಾಗಿದೆ.
ತೋಕೂರು ಬಳಿಯ ಮೂಡುಮನೆಯೊಂದರಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಶುಕ್ರವಾರ ಆಗಮಿಸಿದ್ದವರು ತಿರುಗಾಡಲೆಂದು ಸಸಿಹಿತ್ಲು ಬೀಚ್‌ಗೆ ತೆರಳಿದ್ದರು ಎನ್ನಲಾಗಿದೆ. ಒಟ್ಟು 11 ಮಂದಿ ಬೀಚ್‌ಗೆ ತೆರಳಿದ್ದರು ಎನ್ನಲಾಗಿದ್ದು ಅದರಲ್ಲಿ 9 ಮಂದಿ ನೀರಿಗೆ ಇಳಿದಿದ್ದಾರೆ ಈ ವೇಳೆ ನೀರಿನ ಸೆಳೆತ ಜೋರಾಗಿದ್ದ ಪರಿಣಾಮ 9 ಮಂದಿ ನಿರುಪಾಲಾಗಿದ್ದಾರೆ ಆದರೆ ಕೂಡಲೇ ಸ್ಥಳೀಯ ಮೀನುಗಾರರು ಏಳು ಮಂದಿಯನ್ನು ರಕ್ಷಣೆ ಮಾಡಿದ್ದು ಓರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ, ಇನ್ನೋರ್ವ ನೀರು ಪಾಲಾಗಿದ್ದು ಹುಡುಕಾಟ ನಡೆಯುತ್ತಿದೆ.
ಸದ್ಯ ರಕ್ಷಣೆಗೊಳಗಾದ ಎಲ್ಲರನ್ನು ಸ್ಥಳೀಯರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.