ಮತ್ತೆ ಸ್ಯಾಟಲೈಟ್ ಫೋನ್ ರಿಂಗಣ : ರಾಜ್ಯದ ಗಡಿಭಾಗದ ಐದಾರು ಕಡೆ ಬಳಕೆ
Team Udayavani, Jul 5, 2021, 7:30 AM IST
ಬೆಂಗಳೂರು : ಕರಾವಳಿ ಸಹಿತ ಕರ್ನಾಟಕ – ಕೇರಳ ಗಡಿಭಾಗದ ಅರಣ್ಯ, ಗ್ರಾಮಾಂತರ ಪ್ರದೇಶಗಳಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಮತ್ತೆ ಸದ್ದು ಮಾಡುತ್ತಿವೆ.
ಉಗ್ರ ಮತ್ತು ನಕ್ಸಲ್ ಹಾಗೂ ಭೂಗತ ಚಟುವಟಿಕೆಗಳಿಗಾಗಿ ಇವನ್ನು ಬಳಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ರಾಜ್ಯ ಗುಪ್ತಚರ ಮತ್ತು ಆಂತರಿಕ ಭದ್ರತ ವಿಭಾಗ (ಐಎಸ್ ಡಿ) ತನಿಖೆಗೆ ಮುಂದಾಗಿದೆ.
ಕೊರೊನಾ ವಿಷಮ ಪರಿಸ್ಥಿತಿಯ ಲಾಭ ಪಡೆಯಲು ಕೆಲವು ಉಗ್ರ ಮತ್ತು ನಕ್ಸಲ್ ಸಂಘಟನೆಗಳ ಸದಸ್ಯರು ಸ್ಯಾಟಲೈಟ್ ಫೋನ್ ಗಳನ್ನು ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕೇಂದ್ರ ಗುಪ್ತಚರ ಇಲಾಖೆ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಆರೇಳು ತಿಂಗಳುಗಳಲ್ಲಿ ರಾಜ್ಯದ 8-10 ಕಡೆಗಳಿಂದ ಸ್ಯಾಟಲೈಟ್ ಫೋನ್ ಗಳ ಮೂಲಕ ನೆರೆ ರಾಜ್ಯ, ದೇಶಗಳಿಗೆ ಕರೆ ಹೋಗಿರುವುದು ಬೆಳಕಿಗೆ ಬಂದಿದೆ.
ಆರು ತಿಂಗಳುಗಳಿಂದ ಸಕ್ರಿಯ
ಜನವರಿಯಿಂದ ರಾಜ್ಯದಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಬಳಕೆ ಆರಂಭವಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದಟ್ಟಾರಣ್ಯ ಪ್ರದೇಶಗಳು, ಮೈಸೂರು, ಚಾಮರಾಜನಗರದ ಕೆಲವು ಪ್ರದೇಶಗಳಲ್ಲಿ ಲೋಕೇಶನ್ ಪತ್ತೆಯಾಗಿತ್ತು.
ಪ್ರಾಥಮಿಕ ತನಿಖೆಯಲ್ಲಿ ಮತ್ತೂಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದ್ದು, ಕೇರಳ ಮತ್ತು ಗಡಿ ಭಾಗದ ವ್ಯಕ್ತಿಗಳೇ ಸ್ಯಾಟಲೈಟ್ ಫೋನ್ ಬಳಸುತ್ತಿದ್ದಾರೆ.
ದುಬಾೖ, ಅರಬ್ ರಾಷ್ಟ್ರಗಳಿಗೆ ಕರೆ
ಬಹಳಷ್ಟು ಕರೆಗಳು ದುಬಾೖ, ಅರಬ್ ರಾಷ್ಟ್ರಗಳಿಗೆ ಹೋಗಿರುವುದು ಪತ್ತೆಯಾಗಿದೆ. ಸೌದಿ ರಾಷ್ಟ್ರಗಳಿಂದ ಬಂದವರೇ ಸ್ಯಾಟಲೈಟ್ ಫೋನ್ ಬಳಸುತ್ತಿದ್ದಾರೆ ಎಂದು ತನಿಖೆಯಲ್ಲಿ ಕಂಡು ಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಲೆಲ್ಲಿಂದ ಕರೆ?
ಗುಂಡ್ಲು ಪೇಟೆ, ಎಚ್.ಡಿ. ಕೋಟೆ, ಮೈಸೂರು ಗ್ರಾಮಾಂತರ, ಕೊಡಗು, ಮಡಿಕೇರಿ, ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿ, ಬೆಳ್ತಂಗಡಿ, ಬಂಟ್ವಾಳ ಮತ್ತು ಹನೂರು ತಾಲೂಕಿನ ಕಾವೇರಿ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಈ ಫೋನ್‌ಗಳು ಸಕ್ರಿಯವಾಗಿದ್ದು, ಐಎಸ್‌ಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ನಕ್ಸಲ್ ಪ್ರದೇಶಗಳಲ್ಲಿ ಸಕ್ರಿಯ
ಕೊರಿಯಾದ “ತುರಾಯ್’ ಬ್ರ್ಯಾಂಡ್‌ನ ಸ್ಯಾಟಲೈಟ್ ಫೋನ್ ಬಳಕೆಯಾಗಿದೆ. ತುರಾಯ್ ಬ್ರ್ಯಾಂಡ್‌ನ 3 ಮಾದರಿಯ ಸ್ಯಾಟಲೈಟ್ ಫೋನ್‌ಗಳಿದ್ದು, ಅವುಗಳ ಲೋಕೇಶನ್ ಪತ್ತೆ ತತ್‌ಕ್ಷಣ ಸಾಧ್ಯವಿಲ್ಲ. 24 ತಾಸುಗಳ ಬಳಿಕ ಲೋಕೇಶನ್ ಪತ್ತೆಯಾಗುತ್ತದೆ. ಆಗ ಸ್ಥಳ ಪರಿಶೀಲಿಸಿದಾಗ ಯಾರೂ ಇರುವುದಿಲ್ಲ. ಈ ಮಧ್ಯೆ ಕೇರಳ- ಕರ್ನಾಟಕ-ತಮಿಳುನಾಡು ಭಾಗದ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಧಿಕವಾಗಿದ್ದಾರೆ. ಅವರು ಸ್ಯಾಟಲೈಟ್ ಫೋನ್ ಗಳನ್ನು ಬಳಕೆ ಮಾಡಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Preperation: ಸ್ಥಳೀಯ ಸಂಸ್ಥೆ ಚುನಾವಣೆ: ಇಂದಿನಿಂದ ಬಿಜೆಪಿ ಸರಣಿ ಸಭೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.