ಶನಿವಾರದ ರಾಶಿ ಫಲ: ನಿರೀಕ್ಷೆಗೂ ಮೀರಿದ ಧನಾರ್ಜನೆ, ಆಸ್ತಿ ವ್ಯವಹಾರಗಳಲ್ಲಿ ಎಚ್ಚರವಿರಲಿ
Team Udayavani, Nov 19, 2022, 7:31 AM IST
ಮೇಷ: ಅಧ್ಯಯನ ನಿರತರಿಗೆ ಅನುಕೂಲಕರ ದಿನ. ಸರ್ವ ವಿಧದ ಸೌಕರ್ಯ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಗೃಹದಲ್ಲಿ ಸಂತಸದ ವಾತಾವರಣ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದ ಮನಃ ತೃಪ್ತಿ.
ವೃಷಭ: ಗಣ್ಯ ವ್ಯಕ್ತಿಗಳ ಸಂಪರ್ಕ. ಗೌರವ ಪ್ರತಿಷ್ಠೆ ವೃದ್ಧಿ. ವಿನಯತೆಯಿಂದ ಕೂಡಿದ ಕಾರ್ಯವೈಖರಿ. ಜನಮನ್ನಣೆ. ಧಾರ್ಮಿಕ ಕಾರ್ಯಗಳಿಗಾಗಿ ಧನವ್ಯಯ. ಮಾನಸಿಕ ಪ್ರಪುಲ್ಲತೆ. ಗೃಹೋಪಕರಣ ವಸ್ತು ಸಂಗ್ರಹ.
ಮಿಥುನ: ಅತಿಯಾದ ಶ್ರಮ ಜವಾಬ್ದಾರಿಯಿಂದ ದೇಹಾಯಾಸ ತೋರೀತು. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಪಾಲುದಾರರಿಂದ ಉತ್ತಮ ಪ್ರೋತ್ಸಾಹ ಲಭಿಸೀತು. ವಿವೇಕದಿಂದ ಕೂಡಿದ ಕಾರ್ಯವೈಖರಿಯಿಂದ ಪ್ರಗತಿ.
ಕರ್ಕ: ಮಕ್ಕಳಿಂದ ಸಂತೋಷ ವೃದ್ಧಿ. ದೇಹಾರೋಗ್ಯ ಉತ್ತಮ. ಆಸ್ತಿ ವಿಚಾರದಲ್ಲಿ ಮುನ್ನಡೆ. ಪಾಲುದಾರಿಕಾ ವ್ಯವಹಾರದಲ್ಲಿ ತಾಳ್ಮೆ ಸಹನೆ ಅಗತ್ಯ. ಉತ್ತಮ ಧನಾರ್ಜನೆ. ಮನೆಯಲ್ಲಿ ಸಂತಸದ ವಾತಾವರಣ.
ಸಿಂಹ: ದೇವತಾ ಕಾರ್ಯಗಳಲ್ಲಿ ತಲ್ಲೀನತೆ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ. ಸರಕಾರಿ ಕೆಲಸಗಳಲ್ಲಿ ಪ್ರಗತಿ. ಆರ್ಥಿಕ ವಿಚಾರಗಳಲ್ಲಿ ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಮಾತಿನಲ್ಲಿ ಸ್ಪಷ್ಟತೆ ಇರಲಿ.
ಕನ್ಯಾ: ನಿರೀಕ್ಷೆಗೂ ಮೀರಿದ ಧನಾರ್ಜನೆ. ಮಾನಸಿಕ ಸಂತುಷ್ಟತೆ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಗೃಹದಲ್ಲಿ ಸಂತಸದ ವಾತಾವರಣ. ಆರೋಗ್ಯ ವೃದ್ಧಿ. ದಾಂಪತ್ಯ ಸುಖ ತೃಪ್ತಿದಾಯಕ.
ತುಲಾ: ದೀರ್ಘ ಪ್ರಯಾಣ. ನೂತನ ಉದ್ಯೋಗ, ವ್ಯವಹಾರ ಲಭ್ಯ. ಪರರ ಧನ ಸಂಪತ್ತಿನ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ನಿರೀಕ್ಷಿತ ಸ್ಥಾನ ಪ್ರಾಪ್ತಿಗೆ ಧನವ್ಯಯ. ದಾಂಪತ್ಯದಲ್ಲಿ ಕಲಹಕ್ಕೆ ಅವಕಾಶ ನೀಡದಿರಿ. ಆರೋಗ್ಯದಲ್ಲಿ ಸುಧಾರಣೆ.
ವೃಶ್ಚಿಕ: ದೂರ ಪ್ರಯಾಣ. ನೂತನ ಮಿತ್ರರ ಸಮಾಗಮ. ಸಂತೋಷ. ಪಾರದರ್ಶಕತೆ ವ್ಯವಹಾರದಿಂದ ಜನಮನ್ನಣೆ. ಬಾಂದವ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣದಿಂದ ನೆಮ್ಮದಿ. ನಿರೀಕ್ಷಿತ ಫಲಿತಾಂಶ ಪ್ರಾಪ್ತಿ.
ಧನು: ಗೃಹ ವಾಹನ ಆಸ್ತಿ ವಿಚಾರದಲ್ಲಿ ಅಭಿವೃದ್ಧಿ. ಗೃಹೋಪಕರಣ ವಸ್ತುಗಳ ಸಂಗ್ರಹ. ಸ್ಥಾನಮಾನ ವಿಚಾರದಲ್ಲಿ ತಾಳ್ಮೆ ಸಹನೆಯಿಂದ ವರ್ತಿಸಿ. ಗುರುಹಿರಿಯರ ಉತ್ತಮ ಮಾರ್ಗದರ್ಶನ ಲಭ್ಯ. ದಂಪತಿಗಳು ಪರಸ್ಪರ ಸಹಕಾರ ಪ್ರವೃತ್ತರಾಗಿ.
ಮಕರ: ಆರೋಗ್ಯ ವೃದ್ಧಿ. ಸಮಾಜದಲ್ಲಿ ಗೌರವ ವೃದ್ಧಿ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾದ ಸಂತೋಷ. ದಂಪತಿಗಳಲ್ಲಿ ಅನುರಾಗ ವೃದ್ಧಿ. ದೂರದ ವ್ಯವಹಾರಗಳಲ್ಲಿ ತಲ್ಲೀನತೆ. ಗೃಹದಲ್ಲಿ ಸಂತಸದ ವಾತಾವರಣ.
ಕುಂಭ: ದೂರ ಪ್ರಯಾಣದಲ್ಲಿ ಸಫಲತೆ. ನಿರೀಕ್ಷಿತ ಧನ ಸ್ಥಾನ ಮಾನ ಪ್ರಾಪ್ತಿ. ಭೂಮ್ಯಾದಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಮಕ್ಕಳೊಂದಿಗೆ ಚರ್ಚೆ. ಗುರುಹಿರಿಯರ ಆರೋಗ್ಯ ಗಮನಿಸಿ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮನಃ ತೃಪ್ತಿ.
ಮೀನ: ಆರೋಗ್ಯ ವೃದ್ಧಿ. ನಿರೀಕ್ಷಿತ ಸ್ಥಾನ ಸುಖ ಲಭ್ಯ. ದೇವತಾ ಕಾರ್ಯಗಳಲ್ಲಿ ತಲ್ಲೀನತೆ. ನೂತನ ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ಪರರ ಸಹಾಯದಿಂದ ಪ್ರಗತಿ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಶ್ರಮ. ದಂಪತಿಗಳು ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ. ಅನಿರೀಕ್ಷಿತ ಧನಾಗಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ
Chamarajpete: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಮುಚ್ಚಿ ಹಾಕಲು ಯತ್ನ: ಬಿಜೆಪಿ
Hosanagar; ಚಕ್ರಾನಗರ ಬಿಳಗಿನ ಮನೆಯಲ್ಲಿ ನಿಧಿ ಶೋಧ: ಬೃಹತ್ ನಿಲುವುಗಲ್ಲು ಧ್ವಂಸ!
Viral Video: ವೇದಿಕೆಯಲ್ಲಿ ಕುಳಿತಿದ್ದ ಡಿಸಿಯನ್ನೇ ಗದರಿಸಿ ಕಳುಹಿಸಿದ ಸಿಎಂ ಸಿದ್ದರಾಮಯ್ಯ!
Vijayapura: ನಾಲ್ಕು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ; ಮಹಿಳೆ ಬಚಾವ್, 2 ಮಕ್ಕಳು ಸಾವು
MUST WATCH
ಹೊಸ ಸೇರ್ಪಡೆ
Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ
ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್
Kota ಸರಣಿ ಸುಸೈ*ಡ್ ಬೆನ್ನಲ್ಲೇ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.