ನಿಗಮ ಘೋಷಣೆ ಸಾಲದು, ಅನುದಾನ ಒದಗಿಸಿ: ಸತ್ಯಜಿತ್
Team Udayavani, Feb 22, 2023, 6:55 AM IST
ಮಂಗಳೂರು: ಚುನಾವಣೆ ನೀತಿ ಸಂಹಿತೆ ಘೋಷಣೆಯಾಗುವ ಮೊದಲು ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರಕಾರ ಕನಿಷ್ಠ 500 ಕೋ.ರೂ. ಅನುದಾನ ಒದಗಿಸಿ, ಪ್ರಾಥಮಿಕ ಕೆಲಸಗಳಿಗೆ ಚಾಲನೆ ನೀಡಬೇಕು. ಇಲ್ಲದಿದ್ದರೆ ಮುಂದಿನ ಸರಕಾರ ಅಸ್ತಿತ್ವಕ್ಕೆ ಬರುವ ವರೆಗೆ ನಿಗಮದಿಂದ ಯಾವುದೇ ಪ್ರಯೋಜನವಾಗದು ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ನಿಗಮ ಘೋಷಣೆಯ ಮೂಲಕ ಒಂದು ಹಂತದ ಜಯ ಸಿಕ್ಕಿದೆ. ಇದು ಬಿಲ್ಲವ ಸಮುದಾಯದ ಸಂಘಟಿತ ಹೋರಾಟಕ್ಕೆ ಸಂದ ಗೆಲವು. ಆದರೆ ಅನುದಾನ ಘೋಷಣೆಯಾಗಿ ನಿಗಮದ ಕಾರ್ಯಾಚರಣೆ ಆರಂಭವಾಗುವವರೆಗೆ ಹೋರಾಟದಿಂದ ವಿರಮಿಸುವುದಿಲ್ಲ. ಸರಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಬಜೆಟ್ ನಲ್ಲೇ ನಿಗಮ ಘೋಷಣೆ ಮಾಡಬೇಕಿತ್ತು ಎಂದರು.
ಸಂಭ್ರಮಿಸುವ ದಿನ ಬಂದಿಲ್ಲ
ನಿಗಮ ಘೋಷಣೆಯಾದ ಕಾರಣ ಬಿಲ್ಲವರು ಇನ್ನು ದೇವರಾಜ ಅರಸು ನಿಗಮದಿಂದ ಯಾವುದೇ ಸಹಕಾರ ಪಡೆಯುವಂತಿಲ್ಲ. ಬಜೆಟ್ ಎಪ್ರಿಲ್‌ನಿಂದ ಜಾರಿಗೆ ಬರಲಿದ್ದು, ಮಾರ್ಚ್ ಅಂತ್ಯಕ್ಕೆ ನೀತಿ ಸಂಹಿತೆ ಜಾರಿ ಸಾಧ್ಯತೆಯಿರುವುದರಿಂದ, ಇನ್ನೇನಿದ್ದರೂ ಬಹುತೇಕ ಹೊಸ ಸರಕಾರ ಬಂದ ಬಳಿಕವೇ ನಿಗಮ ಅನುಷ್ಠಾನಕ್ಕೆ ಬರಲಿದೆ. ಆದುದರಿಂದ ಸಮಾಜ ಈಗಲೇ ಸಂಭ್ರಮಿಸುವ ಅಗತ್ಯವಿಲ್ಲ ಎಂದರು.
ಶ್ರೀ ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್. ಮಾತನಾಡಿ, ನಿಗಮ ಘೋಷಣೆ ಮಾಡಿದರೂ ಈಗಿನ ಸರಕಾರದಿಂದ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ನಿಗಮದ ನೋಂದಣಿ, ಬೈಲಾ ರಚನೆ, ಪ್ರತ್ಯೇಕ ಖಾತೆ ಮೊದಲಾದವುಗಳು ಕಾನೂನು ಪ್ರಕಾರ ನಡೆಯಬೇಕಿದ್ದು, ಅದಕ್ಕೆ ಕನಿಷ್ಠ 3 ತಿಂಗಳು ಬೇಕಾಗುತ್ತದೆ. ಆದ್ದರಿಂದ ಈಗ ವಿಜಯೋತ್ಸವ ಆಚರಿಸುವ ಸ್ಥಿತಿಯಲ್ಲಿ ನಾವು ಇಲ್ಲ. ಬಿಲ್ಲವರು ಸಂಘಟಿತರಾದ ಪರಿಣಾಮ ನಿಗಮ ರಚನೆಯಾಗಿದ್ದು, ಇದು ಇತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿಯೂ ಮುಂದೆ ರಚನೆಯಾಗುವ ಸರಕಾರಕ್ಕೂ ಎಚ್ಚರಿಕೆ ಗಂಟೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.