Saudi Arabia; ಮರುಭೂಮಿಯಲ್ಲಿ ದಿಕ್ಕು ಕಾಣದೇ ಭಾರತದ ವ್ಯಕ್ತಿ ಮೃತ
Team Udayavani, Aug 26, 2024, 6:58 AM IST
ರಿಯಾದ್: ಸೌದಿ ಅರೇಬಿಯಾದ ರಬ್ ಅಲ್ ಖಲಿ ಮರುಭೂಮಿಯಲ್ಲಿ ಜಿಪಿಎಸ್ ಸಿಗ್ನಲ್ ಸಿಗದೆ, ಅಲೆದು ಸುಸ್ತಾಗಿ ನಿರ್ಜಲೀಕರಣ ದಿಂದಾಗಿ ತೆಲಂಗಾಣ ವ್ಯಕ್ತಿ ಹಾಗೂ ಆತನ ಸೂಡಾನ್‌ನ ಸಹಚರ ಮೃತಪಟ್ಟ ಘಟನೆ ನಡೆದಿದೆ.
ಮೃತ ವ್ಯಕ್ತಿ 27 ವರ್ಷದ ಮೊಹಮ್ಮದ್ ಶೆಹಜಾದ ತೆಲಂಗಾಣದ ಕರೀಮ್‌ನಗರದವರು. 3 ವರ್ಷಗಳಿಂದ ಸೌದಿ ಅರೇಬಿಯಾದ ಟೆಲಿಕಮ್ಯುನಿ ಕೇಶನ್ ಕಂಪೆನಿಯಲ್ಲಿ ಕೆಲಸ ಮಾಡು ತ್ತಿದ್ದರು. ತನ್ನ ಸೂಡಾನ್ ಸಹೋದ್ಯೋಗಿ ಜತೆ ಶೆಹಜಾದ ಮರುಭೂಮಿಯಲ್ಲಿ ಹಾದು ಬರುವಾಗ ಜಿಪಿಎಸ್ ಸಿಗ್ನಲ್ ಕಡಿತವಾಗಿದೆ. ಜತೆಗೆ ಅವರ ಫೋನ್ ಬ್ಯಾಟರಿ ಖಾಲಿಯಾಗಿದೆ. ಹಾಗಾಗಿ ಯಾರಿಂದಲೂ ಸಹಾಯ ಪಡೆಯಲು ಅವರಿಗೆ ಸಾಧ್ಯವಾಗಿಲ್ಲ ಅವರ ವಾಹನದ ಇಂಧನ ಖಾಲಿಯಾಗಿದ್ದು ಮಾತ್ರವಲ್ಲದೇ, ಆಹಾರ ಹಾಗೂ ನೀರು ಕೂಡ ಇಲ್ಲದೇ ಬಳಲಿದ್ದಾರೆ. ಕೊನೆಗೆ ಯಾವ ಕಡೆಗೆ ಹೋಗಬೇಕು ಎಂಬುದೂ ಕೂಡ ಗೊತ್ತಾಗದೇ ಅಲೆದಾ ಡಿದ್ದಾರೆ. ಅಂತಿಮವಾಗಿ ಕುಡಿಯಲು ನೀರಿಲ್ಲದೇ ನಿರ್ಜಲೀಕರಣದಿಂದ ಮೃತಪಟ್ಟಿದ್ದಾರೆ.
650 ಕಿ.ಮೀ. ವಿಸ್ತಾರದ ಬೃಹತ್ ಮರುಭೂಮಿ: ಸೌದಿ ಅರೇಬಿಯಾ ದಕ್ಷಿಣ ಭಾಗದಲ್ಲಿ ಹರಡಿರುವ ರಬ್ ಅಲ್ ಖಲಿ ಮರುಭೂಮಿಯು ಸುಮಾರು 650 ಕಿ.ಮೀ. ವಿಸ್ತಾರ ವಾಗಿದೆ. ಇಲ್ಲಿನ ಕೆಟ್ಟ ಹವಾಮಾನ ಪರಿಸ್ಥಿತಿಯಿಂದಾಗಿ ಅಗತ್ಯ ವ್ಯವಸ್ಥೆಗಳು ಇಲ್ಲದಿದ್ದರೆ ಬದುಕುಳಿಯುವುದು ಕಷ್ಟ ಎನ್ನಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Mother: ಅಮ್ಮನ ಜೀವನವೇ ಆದರ್ಶ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.