ದೇಶಿ ಕ್ರಿಕೆಟ್ ಕೂಟ ರದ್ದಾಗದು: ಗಂಗೂಲಿ ಭರವಸೆ
Team Udayavani, Jan 6, 2022, 11:15 PM IST
ಮುಂಬಯಿ : ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ದೇಶಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವುದಾಗಿ ಎಲ್ಲ ರಾಜ್ಯ ಕ್ರಿಕೆಟ್ ಮಂಡಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪತ್ರ ಬರೆದಿದ್ದಾರೆ. ಮಂಡಳಿಗಳು ಎಲ್ಲ ರೀತಿಯಲ್ಲೂ ಸಹಕರಿಸಲಿವೆ ಎಂಬ ಭರವಸೆ ಅವರದು.
“ದೇಶಿ ಕ್ರಿಕೆಟ್ ಋತುವನ್ನು ಪುನರಾರಂಭಿಸಲು ಮಂಡಳಿ ಯೋಚಿಸಿದೆ. ಆಟಗಾರರು, ಸಿಬಂದಿ ಸೇರಿದಂತೆ ಎಲ್ಲರ ಆರೋಗ್ಯವನ್ನು ಗಮನದಲ್ಲಿರಿಸಿ ಸದ್ಯದ ಮಟ್ಟಿಗೆ ರಣಜಿ ಕೂಟವನ್ನು ಮುಂದೂಡಲಾಗಿದೆಯೇ ಹೊರತು ಕಳೆದ ಬಾರಿಯಂತೆ ಕೂಟವನ್ನು ರದ್ದುಗೊಳಿಸುವ ಉದ್ದೇಶ ಬಿಸಿಸಿಐ ಮುಂದಿಲ್ಲ. ದೇಶದಲ್ಲಿ ಕೋವಿಡ್ ಹತೋಟಿಗೆ ಬಂದ ಬಳಿಕ ಕೂಟವನ್ನು ಖಂಡಿತವಾಗಿಯೂ ನಡೆಸುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಸೌರವ್ ಗಂಗೂಲಿ ಭರವಸೆ ನೀಡಿದ್ದಾರೆ.
ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಜತಗೆ ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಕೂಡ ಇದೇ ತಿಂಗಳಲ್ಲಿ ಆರಂಭವಾಗಬೇಕಿತ್ತು.
ಇದನ್ನೂ ಓದಿ : ಮೋದಿಗಾಗಿ ಬಿಜೆಪಿ ಕಾರ್ಯಕರ್ತರಿಂದ ದೇಶಾದ್ಯಂತ ಯಾಗ : ಸಚಿವ ಅನುರಾಗ್ ಠಾಕೂರ್ ಮಾಹಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.