Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
ಚಲಿಸುತ್ತಿದ್ದ ರೈಲಿಗೆ ಹತ್ತುವ ಭರದಲ್ಲಿ ಓಡಿ ಬಂದು ಬಿದ್ದ ವ್ಯಕ್ತಿ
Team Udayavani, Nov 15, 2024, 7:05 PM IST
ದಾವಣಗೆರೆ: ರೈಲು ಹತ್ತುವ ಭರದಲ್ಲಿ ಕೆಳಕ್ಕೆ ಬಿದ್ದ ವ್ಯಕ್ತಿಯೊಬ್ಬರನ್ನು ಹೋಂಗಾರ್ಡ್ (ಗೃಹರಕ್ಷಕ ದಳ ಸಿಬ್ಬಂದಿ) ರಕ್ಷಿಸಿದ ಘಟನೆ ಶುಕ್ರವಾರ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಜನಶತಾಬ್ದಿ ರೈಲಿನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ರಾಧಾಕೃಷ್ಣ ಎಂಬವರು ದಾವಣಗೆರೆ ರೈಲ್ವೆ ನಿಲ್ದಾಣ ಬಂದಾಗ ಬಿಸ್ಕತ್ ತೆಗೆದುಕೊಳ್ಳಲೆಂದು ಇಳಿದಿದ್ದಾರೆ. ಬಿಸ್ಕತ್ ತೆಗೆದುಕೊಂಡು ಬರುವ ಹೊತ್ತಿಗೆ ರೈಲು ಚಲಿಸಲಾರಂಭಿಸಿದೆ. ರಾಧಾಕೃಷ್ಣ ಓಡಿ ಬಂದು ಚಲಿಸುವ ರೈಲು ಹತ್ತುವ ಭರದಲ್ಲಿ ಕೆಳಗೆ ಬಿದ್ದು ರೈಲಿನಡಿ ಜಾರುತ್ತಿರುವುದು ಕಂಡ ಹೋಂ ಗಾರ್ಡ್ ಎನ್. ಲಕ್ಷ್ಮಣ್ ನಾಯ್ಕ್ ಕೂಡಲೇ ರಾಧಾಕೃಷ್ಣರನ್ನು ಎಳೆಯುವ ಮೂಲಕ ಜೀವ ರಕ್ಷಣೆ ಮಾಡಿದ್ದಾರೆ.
ಅಷ್ಟರಲ್ಲಿ ಆರ್ಪಿಎಫ್ ಮುಖ್ಯ ಪೇದೆ ಅಶೋಕ್ ಸಹಕಾರ ಮಾಡಿದ್ದಾರೆ. ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ಪರಿಣಾಮ ರಾಧಾಕೃಷ್ಣ ಅವರ ಗಲ್ಲದ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಇನ್ನೊಂದು ರೈಲಿನ ಮೂಲಕ ಹುಬ್ಬಳ್ಳಿಗೆ ಕಳುಹಿಸಿದ್ದಾರೆ. ಈ ಎಲ್ಲ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೀವದ ಹಂಗು ತೊರೆದು ರಾಧಾಕೃಷ್ಣರನ್ನ ರಕ್ಷಿಸಿದ ಹೋಂಗಾರ್ಡ್ ಎನ್. ಲಕ್ಷ್ಮಣ್ ನಾಯ್ಕ್, ಆರ್ಪಿಎಫ್ ಮುಖ್ಯ ಪೇದೆ ಅಶೋಕ್ ಅವರಿಗೆ ಸಾರ್ವಜನಿಕರು, ರೈಲ್ವೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ವಿಜಯೇಂದ್ರ ವಿರುದ್ಧ ಲಂಚ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ
Siruguppa: ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆಯ ಶವ ಪತ್ತೆ
Darshan: ಜಾಮೀನು ಹಿನ್ನೆಲೆ: ಮತ್ತೆ ಕೋರ್ಟ್ಗೆ ಹಾಜರಾದ ದರ್ಶನ್
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Shimoga; ನಮ್ಮ ನಾಯಕರು ಗಮನ ಹರಿಸಲಿ: ಕುಮಾರ್ ಬಂಗಾರಪ್ಪ ಹೇಳಿಕೆಗೆ ರಾಘವೇಂದ್ರ ತಿರುಗೇಟು
MUST WATCH
ಹೊಸ ಸೇರ್ಪಡೆ
Waqf; ವಿಜಯೇಂದ್ರ ವಿರುದ್ಧ ಲಂಚ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ
Sri Lanka; ಭಾರತದ ವಿರುದ್ದ ನಮ್ಮ ಭೂಮಿಯನ್ನು ಬಳಸಲು ಬಿಡೆವು: ಲಂಕಾ ಅಧ್ಯಕ್ಷ ಡಿಸಾನಾಯಕೆ
Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?
Kiccha Sudeep: ಬಿಗ್ ಬಾಸ್ಗೆ ಗುಡ್ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ
ಮದುವೆಯ ಮೊದಲ ರಾತ್ರಿಯೇ ಪತಿಗೆ ಹಾಲಿನಲ್ಲಿ ಮತ್ತು ಬರುವ ಔಷಧಿ ಹಾಕಿ ನಗನಗದು ದೋಚಿದ ಪತ್ನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.