Cardless Cash: ಎಸ್ ಬಿಐನ ಪರಿಷ್ಕೃತ “YONO App” ನಲ್ಲಿ ಏನೇನು ಬದಲಾವಣೆಯಾಗಿದೆ…
ಸುಲಲಿತವಾಗಿ ವ್ಯವಹರಿಸುವ ನಿಟ್ಟಿನಲ್ಲಿ YONO App ಅನ್ನು ಅಪ್ ಡೇಟ್ ಮಾಡಲಾಗಿದೆ
Team Udayavani, Jul 3, 2023, 4:57 PM IST
ನವದೆಹಲಿ: ದೇಶದ ಅತೀ ದೊಡ್ಡ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( SBI) ತನ್ನ ಡಿಜಿಟಲ್ ಬ್ಯಾಂಕಿಂಗ್ ಆಪ್ಲಿಕೇಶನ್ “YONO” ಅನ್ನು ಪರಿಷ್ಕರಿಸಿದ್ದು, ಇದರಿಂದಾಗಿ ಪ್ರತಿಯೊಬ್ಬ ಗ್ರಾಹಕರು ಕಾರ್ಡ್ ಲೆಸ್ ಕ್ಯಾಶ್ ಅನ್ನು ಪಡೆಯಲು ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ.
ಇದನ್ನೂ ಓದಿ:ಕೊಲ್ಲೂರಿನಲ್ಲಿ ಚಿನ್ನಾಭರಣ ಕಳವು; ಆರೋಪಿ ಶಿವಮೊಗ್ಗದಲ್ಲಿ ಬಂಧನ
ಇದೊಂದು ಕಾರ್ಡ್ ಲೆಸ್ ವ್ಯವಹಾರವಾಗಿದ್ದು, ಈ ಮೊದಲು ಎಸ್ ಬಿಐನ 16,500 ಎಟಿಎಂಗಳಲ್ಲಿ ಬಳಸಬಹುದಾಗಿತ್ತು. ಈ ರೀತಿಯ ಎಟಿಎಂಗಳನ್ನು ಯೋನೊ ಕ್ಯಾಶ್ ಪಾಯಿಂಟ್ ಎಂದು ಕರೆಯಲಾಗುತ್ತದೆ.
ಪರಿಷ್ಕೃತ YONO App ಕುರಿತು ಮಾಹಿತಿ ನೀಡಿರುವ ಎಸ್ ಬಿಐ ಅಧ್ಯಕ್ಷ ದಿನೇಶ್ ಖರಾ ಅವರು, ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಸ್ ಬಿಐ ಅಗ್ರಸ್ಥಾನದಲ್ಲಿದ್ದು, ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಲಲಿತವಾಗಿ ವ್ಯವಹರಿಸುವ ನಿಟ್ಟಿನಲ್ಲಿ YONO App ಅನ್ನು ಅಪ್ ಡೇಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪರಿಷ್ಕೃತ YONO Appನಿಂದ ಗ್ರಾಹಕರಿಗೆ ಲಾಭವೇನು?
Interoperable cardless Money withdrawal (ICCW) ಸೌಲಭ್ಯದ ಮೂಲಕ ಎಸ್ ಬಿಐ ಹಾಗೂ ವಿವಿಧ ಬ್ಯಾಂಕ್ ಗಳ ಗ್ರಾಹಕರು “ಕಾರ್ಡ್ ಲೆಸ್” ನಗದನ್ನು ಯಾವುದೇ ಬ್ಯಾಂಕ್ ಗಳ ಎಟಿಎಂನಿಂದ ಪಡೆಯಬಹುದಾಗಿದೆ.
ಪರಿಷ್ಕೃತ App ಸೌಲಭ್ಯದಲ್ಲಿ PIN ಅಥವಾ ಡೆಬಿಟ್ ಕಾರ್ಡ್ ಅಗತ್ಯವಿಲ್ಲ. ಅಷ್ಟೇ ಅಲ್ಲ ICCW ಸೌಲಭ್ಯದಲ್ಲಿ ಎಟಿಎಂನಲ್ಲಿ ನಡೆಯುವ Spying ಮತ್ತು ಕಾರ್ಡ್ ಮಾಹಿತಿಯನ್ನು ಸಂಗ್ರಹಿಸುವ ಅಪಾಯವನ್ನು ತಡೆಗಟ್ಟಲು ಸಹಾಯಕವಾಗಿದೆ. ಯಾವುದೇ ತಾಂತ್ರಿಕ ಅಡೆತಡೆ ಇಲ್ಲದೇ ಡೆಬಿಟ್ ಕಾರ್ಡ್ ಇಲ್ಲದೆಯೇ ನಗದು ಪಡೆಯಬಹುದಾಗಿದೆ.
ಗ್ರಾಹಕರು ಈ ಸೌಲಭ್ಯ ಪಡೆಯಲು YONO App ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಎಟಿಎಂ ಸ್ಕ್ರೀನ್ ನಲ್ಲಿ QR ಕೋಡ್ ಡಿಸ್ ಪ್ಲೇ ಆಗಲಿದ್ದು, ಈ ಮೂಲಕ ಗ್ರಾಹಕರು ತಮ್ಮ ಯುಪಿಐ ಆಪ್ಲಿಕೇಶನ್ ನಿಂದ ಸ್ಕ್ಯಾನ್ ಮಾಡಿ ನಗದನ್ನು ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.