ಮಕ್ಕಳಾಯ್ತು, ಈಗ ಶಾಲೆಗೆ ಮರಳಿ ಬಾ ಶಿಕ್ಷಕ! ಶಿಕ್ಷಕರನ್ನು ಕರೆತರಲು ಶಿಕ್ಷಣ ಇಲಾಖೆ ಹೆಜ್ಜೆ
Team Udayavani, Dec 13, 2021, 3:59 PM IST
ದಾವಣಗೆರೆ: ಅನ್ಯ ಇಲಾಖೆಗೆ ನಿಯೋಜನೆಗೊಂಡು ಮರಳಿ ಮಾತೃ ಇಲಾಖೆಗೆ ಬರಲೊಪ್ಪದ ಶಿಕ್ಷಕರನ್ನು ಕಡ್ಡಾಯವಾಗಿ ಕರೆ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದ್ದು,
ಇದಕ್ಕಾಗಿ ಕಠಿಣ ಕ್ರಮ ಕ್ಕೂ ಮುಂದಾಗಿದೆ. ಇಷ್ಟು ದಿನ ಮಕ್ಕಳನ್ನು ಶಾಲೆಗೆ ಕರೆತರಲು “ಮರಳಿ ಬಾ ಶಾಲೆಗೆ’ ಎನ್ನುತ್ತಿದ್ದ ಇಲಾಖೆ, ಈಗ ಅನ್ಯ ಇಲಾಖೆಗೆ ಹೋದ ಶಿಕ್ಷಕರನ್ನು ಕರೆತರಲು ಶಾಲೆಗೆ ಮರಳಿ ಬಾ ಶಿಕ್ಷಕ’ ಎನ್ನಲು ಮುಂದಾಗಿದೆ.
ಅನ್ಯ ಇಲಾಖೆಗೆ ನಿಯೋಜನೆಗೊಂಡ ಎಲ್ಲ ಶಿಕ್ಷಕರನ್ನೂ ಪ್ರಸಕ್ತ ಮಾರ್ಚ್ ಅಂತ್ಯಕ್ಕೆ ಮರಳಿ ಮಾತೃ ಇಲಾಖೆಗೆ ಕರೆತರಲು ಇಲಾಖೆ ಪಣ ತೊಟ್ಟಿದ್ದು, ಈ ಹೊಣೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರ ಹೆಗಲಿಗೆ ಹೊರಿಸಿದೆ. ಈ ಜವಾಬ್ದಾರಿ ನಿರ್ವಹಿಸಲು ವಿಫಲರಾದರೆ ಉಪ ನಿರ್ದೇಶಕರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಸಮಸ್ಯೆ ನಡುವೆಯೂ ಶಿಕ್ಷಣ ಇಲಾಖೆಯಿಂದ ಬೇರೆ ಇಲಾಖೆಗಳಿಗೆ ನಿಯೋಜನೆಗೊಂಡ ಶಿಕ್ಷಕರು, ಮರಳಿ ಮಾತೃ ಇಲಾಖೆಗೆ ಬರಲು ಮನಸ್ಸು ಮಾಡದೆ ಇರುವುದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಹಲವು ವರ್ಷಗಳ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
ಇಲಾಖೆಗೆ ನೇಮಕ ಗೊಂಡ ಎಲ್ಲ ಶಿಕ್ಷಕರ ಸೇವೆಯನ್ನು ಮಕ್ಕಳ ಶಿಕ್ಷಣಕ್ಕಾಗಿಯೇ ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಉಪನಿರ್ದೇಶಕರ ಮೇಲೂ ಕ್ರಮ: ಶಿಕ್ಷಕರ ಅನ್ಯ ಇಲಾಖೆಯ ನಿಯೋಜನೆಯನ್ನು ಶಿಕ್ಷಣ ಇಲಾಖೆ ಈಗಾಗಲೇ ರದ್ದುಪಡಿಸಿದ್ದು ಈ ಕುರಿತು ಜಿಪಂ ಸಿಇಒಗಳಿಗೂ ಸೂಚಿಸಿದೆ. ಆದರೂ ಅನೇಕರು ಮರಳಿ ಶಿಕ್ಷಣ ಇಲಾಖೆಗೆ ಬರಲು ಹಿಂದೇಟು ಹಾಕು ತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಈಗ ಅವರನ್ನು ಕಡ್ಡಾಯವಾಗಿ ಕರೆತರುವ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ಉಪನಿರ್ದೇಶಕರಿಗೆ ವಹಿಸಿದೆ. ಉಪನಿರ್ದೇಶಕರು ಒಂದು ವೇಳೆ ನಿಯೋಜಿತ ಶಿಕ್ಷಕರನ್ನು ಮರಳಿ ಇಲಾಖೆಗೆ ಕರೆತರಲು ವಿಫಲರಾದರೆ ಕರ್ತವ್ಯ ನಿರ್ಲಕ್ಷ್ಯ ಎಂದು ಪರಿಗಣಿಸಿ
ಉಪನಿರ್ದೇಶಕರ ವಿರುದ್ಧವೇ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.
ಇದನ್ನೂ ಓದಿ : ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರವಾಗಲಿದೆ: ಬಿಎಸ್ ವೈ
ಉತ್ತರ ಕರ್ನಾಟಕದಲ್ಲೇ ಹೆಚ್ಚು: ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ನೇಮಕಗೊಂಡ ನೂರಾರು ಶಿಕ್ಷಕರು ಬೇರೆ ಬೇರೆ ಇಲಾಖೆಗಳಲ್ಲಿ ಅನೇಕ ವರ್ಷಗಳಿಂದ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂಲವೊಂದರ ಪ್ರಕಾರ ಶಿಕ್ಷಣ ಇಲಾಖೆ ಬಿಟ್ಟು ಬೇರೆ ಇಲಾಖೆಗೆ ನಿಯೋಜನೆ ಗೊಂಡ ಶಿಕ್ಷಕರ ಸಂಖ್ಯೆ ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯೇ ಅಧಿಕವಾಗಿದೆ. ಶಿಕ್ಷಕರನ್ನು ಅನ್ಯ ಇಲಾಖೆಗಳಿಗೆ ನಿಯೋಜನೆ ಮಾಡಿರುವುದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ, ಶೈಕ್ಷಣಿಕ ಬೆಳವಣಿಗೆಗೆ ಭಾರೀ ಹಿನ್ನಡೆಯಾಗಿದೆ.
ಎಲ್ಲೆಲ್ಲಿ ಹೋಗಿದ್ದಾರೆ?: ಅನ್ಯ ಇಲಾಖೆಗೆ ನಿಯೋಜನೆಗೊಂಡವರಲ್ಲಿ ಅನೇಕ ಶಿಕ್ಷಕರು ವಯಸ್ಕರ ಶಿಕ್ಷಣ ಇಲಾಖೆ, ಕ್ರೀಡಾ ಇಲಾಖೆ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ
ಇಲಾಖೆ, ಪ್ರವಾ ಸೋದ್ಯಮ ಇಲಾಖೆ ಹಾಗೂ ಸರ್ಕಾರದ ವಿವಿಧ ಇಲಾಖಾ ಕಾರ್ಯಕ್ರಮಗಳ ಅನುಷ್ಠಾನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಹಲವರು ಶಾಸಕರು, ಸಂಸದರ ಆಪ್ತ ಕಾರ್ಯದರ್ಶಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಅನೇಕರು ರಾಜ ಕೀಯ ಪ್ರಭಾವ ಬೀರಿಯೇ ನಿಯೋಜನೆ ಮಾಡಿಸಿ ಕೊಂಡಿದ್ದು ಈಗ ಮರಳಿ ಮಾತೃ ಇಲಾಖೆಗೆ ಹೋಗಲು ಮತ್ತೆ ರಾಜಕಾರಣಿಗಳಿಂದ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಮರಳಿ ಮಾತೃ ಇಲಾಖೆಗೆ ಕರೆತರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅನ್ಯ ಇಲಾಖೆಗೆ ನಿಯೋಜನೆಗೊಂಡ ಶಿಕ್ಷಕರನ್ನು ಮರಳಿ ಶಿಕ್ಷಣ ಇಲಾಖೆಗೆ ಕರೆತಂದರೆ ಶಿಕ್ಷಕರ ಕೊರತೆ ಸಮಸ್ಯೆಯನ್ನು ಒಂದಿಷ್ಟು ನೀಗಿಸಿ ಕೊಳ್ಳಲು ಸಾಧ್ಯವಿದೆ. ಆದರೆ ಶಿಕ್ಷಕರನ್ನು ಮಾತೃ ಇಲಾಖೆಗೆ ಕರೆತರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಯತ್ನ ಎಷ್ಟರಮಟ್ಟಿಗೆ ಫಲಪ್ರದವಾಗುತ್ತದೆ ಎಂಬುದು ಕಾದು ನೋಡಬೇಕಿದೆ.
ವೈಯಕ್ತಿಕ ಮಾಹಿತಿ ಸಂಗ್ರಹ
ಅನ್ಯ ಇಲಾಖೆಗೆ ನಿಯೋಜನೆಗೊಂಡ ಎಲ್ಲ ಶಿಕ್ಷಕರ ವೈಯಕ್ತಿಕ ಮಾಹಿತಿ ಸಂಗ್ರಹಿಸಲು ಸಹ ಇಲಾಖೆ ಮುಂದಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅನ್ಯ ಇಲಾಖೆಗೆ ನಿಯೋಜನೆಗೊಂಡ
ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಹೆಸರು, ಅವರ ಮೂಲ ಶಾಲೆಯ ವಿಳಾಸ, ಪ್ರಸ್ತುತ ಯಾವ ಇಲಾಖೆಗೆ ನಿಯೋಜನೆ ಮಾಡಲಾಗಿದೆ, ಅವರು ಇನ್ನೂ ಮುಂದುವರಿದಿದ್ದಾರೆಯೇ,
ಮಾತೃ ಇಲಾಖೆಗೆ ಯಾವಾಗ ಹಾಜರಾಗಿದ್ದಾರೆ, ನಿಯೋಜನೆ ರದ್ದುಪಡಿಸದೇ ಇದ್ದರೆ ಕಾರಣವೇನು ಎಂಬಿತ್ಯಾದಿ ಮಾಹಿತಿ ನೀಡುವಂತೆ ಎಲ್ಲ ಉಪನಿರ್ದೇಶಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
ಅನ್ಯ ಇಲಾಖೆಗೆ ನಿಯೋಜನೆಗೊಂಡ ಶಿಕ್ಷಕರನ್ನು ಮರಳಿ ಕಡ್ಡಾಯವಾಗಿ ಕರೆತರಲು ಕ್ರಮ ವಹಿಸುತ್ತಿರುವುದು ಸ್ವಾಗತಾರ್ಹ. ಇದರಿಂದ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುತ್ತದೆ. ರಾಜಕೀಯ ಪ್ರಭಾವ ಬೀರಿ ಮಾತೃ ಇಲಾಖೆಗೆ ಬರಲು ಹಿಂದೇಟು ಹಾಕುವ ಶಿಕ್ಷಕರ ಮೇಲೆ ಕಠಿಣ ಕ್ರಮ ಜಾರಿಯಾಗಬೇಕು. ಜತೆಗೆ ಶಿಕ್ಷಣ ಇಲಾಖೆಗೆ ನೇಮಕಗೊಂಡವರನ್ನು ಅನ್ಯ ಇಲಾಖೆಗೆ ಹಾಗೂ ಸರ್ಕಾರದ ಅನ್ಯ ಕಾರ್ಯಕ್ರಮಗಳಿಗೆ ಯಾವತ್ತೂ ನಿಯೋಜನೆ ಮಾಡದಂತೆ ನಿಯಮ ರೂಪಿಸಬೇಕು.
– ಹೆಸರು ಹೇಳಲಿಚ್ಛಿಸದ ಸರ್ಕಾರಿ ಶಾಲೆ ಶಿಕ್ಷಕ
ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ ಅನ್ಯ ಇಲಾಖೆಗೆ ನಿಯೋಜನೆಗೊಂಡ ಶಿಕ್ಷಕರಾರೂ ಇಲ್ಲ. ಅನ್ಯ ಇಲಾಖೆಗೆ ಹೋದ ಕೆಲವರನ್ನು ಮರಳಿ ಕರೆಸಿಕೊಂಡಿದ್ದೇವೆ. ಆದರೂ ಇನ್ನೊಮ್ಮೆ ಪರಿಶೀಲಿಸಿ ಅಂಥ ಶಿಕ್ಷಕರ ಮಾಹಿತಿ ನೀಡುವಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
– ಜಿ.ಆರ್. ತಿಪ್ಪೇಶ್, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ
– ಎಚ್.ಕೆ.ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.