Search Operation: ರಕ್ಷಣೆಗೆ 10,000 ಕೇಳಿದ ಮುಳುಗು ತಜ್ಞರು: ಅಧಿಕಾರಿ ನೀರುಪಾಲು!
ಆನ್ಲೈನ್ನಲ್ಲಿ ಹಣ ಪಾವತಿಸುವಷ್ಟರಲ್ಲಿ ಸಾವು: ಸ್ನೇಹಿತನ ಆರೋಪ, 2 ದಿನಗಳ ಹಿಂದೆ ನದಿಯಲ್ಲಿ ಮುಳುಗಿದ್ದ ಅಧಿಕಾರಿ
Team Udayavani, Sep 3, 2024, 1:45 AM IST
ಹೊಸದಿಲ್ಲಿ: ಗಂಗಾ ನದಿಯಲ್ಲಿ 2 ದಿನಗಳ ಹಿಂದೆ ಮುಳುಗಿ ನಾಪತ್ತೆಯಾಗಿರುವ ಉತ್ತರ ಪ್ರದೇಶದ ಸರಕಾರಿ ಅಧಿಕಾರಿ ವರ್ಧನ್ ಸಿಂಗ್ಗಾಗಿ ಸೋಮವಾರವೂ ಶೋಧ ಮುಂದುವರಿದಿದೆ.
ಈ ನಡುವೆ ಅಧಿಕಾರಿಯನ್ನು ರಕ್ಷಿಸಲು ಅವಕಾಶವಿದ್ದರೂ ಮುಳುಗುತಜ್ಞರು 10,000 ರೂ. ಗೆ ಬೇಡಿಕೆಯಿಟ್ಟಿದ್ದರು. ಪಾವತಿ ಮಾಡುವುದರೊಳಗೆ ಅಧಿಕಾರಿ ಕೊಚ್ಚಿ ಹೋಗಿದ್ದಾರೆ ಎಂದು ಸ್ನೇಹಿತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ವಾರಾಣಸಿಯಲ್ಲಿ ನಿಯೋಜನೆಗೊಂಡಿರುವ ಲಕ್ನೋ ಮೂಲದ ಅಧಿಕಾರಿಯೊಬ್ಬರು ಈ ಬಗ್ಗೆ ಪೋಸ್ಟ್ ಮಾಡಿ ದ್ದು, ವರ್ಧನ್ ಸಿಂಗ್ ನೀರಿ ನಲ್ಲಿ ಮುಳುಗುತ್ತಿದ್ದಾಗ ಅಲ್ಲಿಯೇ ಬೋಟ್ನಲ್ಲಿದ್ದ ಮುಳುಗು ತಜ್ಞ ರನ್ನು ಕೇಳಿ ಕೊಂಡೆವು. ಆದರೆ ಅವರು ರಕ್ಷ ಣೆಗೂ ಮೊದಲು 10 ಸಾವಿರ ರೂ.ಗೆ ಬೇಡಿಕೆ ಇಟ್ಟರು.
ನಮ್ಮ ಬಳಿ ನಗದು ಇಲ್ಲ ಎಂದಾ, ಆನ್ಲೈನ್ ಪಾವತಿಗೆ ಪಟ್ಟು ಹಿಡಿದರು. ಕೊನೆಗೆ ಆನ್ ಲೈನ್ ಪಾವತಿ ಮಾಡುವುದರೊಳಗೆ ಸ್ನೇಹಿತ ನಾಪತ್ತೆಯಾಗಿದ್ದಾನೆ ಎಂದಿದ್ದಾರೆ. ಆದರೆ ಈ ಬಗ್ಗೆ ಬಿಲಾ ಹೌರ್ ಎಸಿಪಿ ಅಜಯ್ ಕುಮಾರ್ ತ್ರಿವೇದಿ ಪ್ರತಿಕ್ರಿಯಿಸಿ, ಮುಳುಗುತಜ್ಞರು ತಮ್ಮ ಸ್ಟೀಮರ್ಗೆ ಇಂಧನ ಹಾಕಿಸಿಕೊಳ್ಳಲು ಹಣ ಕೇಳಿದ್ದಾರೆಂದು ತಿಳಿ ದು ಬಂದಿದೆ. ಒಂದು ವೇಳೆ ಈ ಆರೋಪ ನಿಜ ವಾ ದರೆ ಅವರ ಮೇಲೆ ಕಾನೂನು ಕ್ರಮ ವನ್ನು ತೆಗೆದುಕೊಳ್ಳಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
Ambedkar; ಅವಮಾನ ಖಂಡಿಸಿ ಕಾಂಗ್ರೆಸ್ ಆಂದೋಲನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.