ದ್ವಿತೀಯ ಪಿಯು “ಸ್ಕ್ಯಾನ್ ಕಾಪಿ’ ಅಪ್‌ಲೋಡ್‌ನಲ್ಲಿ ಹತ್ತಾರು ದೋಷ!
ಉತ್ತರ ಪತ್ರಿಕೆ ಕಂಡು ವಿದ್ಯಾರ್ಥಿಗಳಿಗೆ ಗಾಬರಿ
Team Udayavani, May 2, 2023, 6:32 AM IST
ಮಂಗಳೂರು: ದ್ವಿತೀಯ ಪದವಿಪೂರ್ವ ತರಗತಿ ಪರೀಕ್ಷೆಗಳ ಉತ್ತರ ಪತ್ರಿಕೆಯ “ಸ್ಕ್ಯಾನ್ ಕಾಪಿ’ಯಲ್ಲಿ ಬಹು ವಿಧದ ದೋಷಗಳು ಎದುರಾಗಿದ್ದು, ಕೆಲವು ವಿದ್ಯಾರ್ಥಿಗಳು ಉತ್ತರ ಪತ್ರಿಕೆ ಕಂಡು ಗಾಬರಿಯಾಗಿದ್ದಾರೆ. ಸ್ಕ್ಯಾನ್ ಪ್ರತಿಯಲ್ಲಿ ಬಂದ ಉತ್ತರಪತ್ರಿಕೆ ಅಪ್‌ಲೋಡ್‌ನ ತಪ್ಪುಗಳಿಂದಾಗಿ ಇದೀಗ ವಿದ್ಯಾರ್ಥಿಗಳು ಗೊಂದಲ ಎದುರಿಸುತ್ತಿದ್ದಾರೆ.
ದ್ವಿತೀಯ ಪಿಯುವಿನಲ್ಲಿ ನಿರೀಕ್ಷಿತ ಅಂಕ ಸಿಗದಿದ್ದಾಗ/ಅಸಮಾಧಾನವಿದ್ದಲ್ಲಿ ಉತ್ತರಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆಯಲು ವಿದ್ಯಾರ್ಥಿಗೆ ಅವಕಾಶವಿದೆ. ಕೆಲವೇ ದಿನದಲ್ಲಿ ಮರು ಮೌಲ್ಯಮಾಪನ ಪ್ರಕ್ರಿಯೆ ಕೂಡ ನಡೆಯುವುದರಿಂದ ಅದಕ್ಕೂ ಮುನ್ನ ಸ್ಕ್ಯಾನ್ ಪ್ರತಿ ಪರಿಶೀಲಿಸು ವುದು ಸಾಮಾನ್ಯ. ಉತ್ತರ ಪತ್ರಿಕೆಗೆ ನಿಗದಿ ಮಾಡಿದ ಹಣ ಪಾವತಿಸಿ ಪ್ರತಿ ಪಡೆಯಬಹುದು. ಆದರೆ ಸ್ಕ್ಯಾನ್ ಕಾಪಿಯಲ್ಲೇ ತಪ್ಪುಗಳಿದ್ದ ಕಾರಣದಿಂದ ಈಗ ವಿದ್ಯಾರ್ಥಿಗಳು ಸಂಕಟ ಎದುರಿಸುವಂತಾಗಿದೆ.
ಟಾಪರ್ ವಿದ್ಯಾರ್ಥಿ; ಉತ್ತರ ಪತ್ರಿಕೆ ಬೇರೆ!
ದ್ವಿತೀಯ ಪಿಯುವಿನಲ್ಲಿ ಟಾಪರ್ ಆಗಿರುವ ಮಂಗಳೂರಿನ ವಿದ್ಯಾರ್ಥಿನಿ 4 ಉತ್ತರ ಪತ್ರಿಕೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರು. ಅದರಂತೆ 4 ಉತ್ತರ ಪತ್ರಿಕೆ ಬರಬೇಕಿತ್ತು. 3 ಸರಿಯಾಗಿಯೇ ಇತ್ತು. ಆದರೆ ಒಂದು ಉತ್ತರ ಪತ್ರಿಕೆ ಮಾತ್ರ ಬೇರೆ ವಿದ್ಯಾರ್ಥಿಯದ್ದು ಅಪ್‌ಲೋಡ್ ಆಗಿದೆ; ಟಾಪರ್ ವಿದ್ಯಾರ್ಥಿಗೆ ಬಂದಿದ್ದು 40 ಅಂಕ ಪಡೆದಿದ್ದ ವಿದ್ಯಾರ್ಥಿಯ ಸ್ಕಾ Âನ್
ಉತ್ತರ ಪತ್ರಿಕೆ!
“ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಮತ್ತೂಬ್ಬರು ನೋಡುವುದು ತಪ್ಪು. ಆದರೆ ದ್ವಿತೀಯ ಪಿಯು ಇಲಾಖೆಯ ಎಡವಟ್ಟಿನಿಂದ ಬೇರೆಯವರ ಉತ್ತರ ಪತ್ರಿಕೆಯನ್ನು ನಾವು ನೋಡುವಂತಾಗಿದೆ’ ಎನ್ನುತ್ತಾರೆ ಆ ವಿದ್ಯಾರ್ಥಿನಿಯ ಪೋಷಕರು.
2-3 ಪುಟಗಳೇ ಕಾಣೆ!
ಮತ್ತೂಬ್ಬ ವಿದ್ಯಾರ್ಥಿ ಎರಡು ಉತ್ತರ ಪತ್ರಿಕೆಗೆ ಅರ್ಜಿ ಹಾಕಿದ್ದರು. ಆದರೆ ಅವರಿಗೆ ಒಂದು ಪತ್ರಿಕೆ ಮಾತ್ರ ಬಂದಿದೆ. ಮತ್ತೂಂದು ಬಂದಿಲ್ಲ. ಯಾಕೆ ಎಂಬುದು ಯಾರಿಗೂ ಗೊತ್ತಿಲ್ಲ. ಈ ಮಧ್ಯೆ ಮಂಗಳೂರಿನ ಇನ್ನೊಬ್ಬ ವಿದ್ಯಾರ್ಥಿ ಉತ್ತರ ಪತ್ರಿಕೆಗೆ ಅರ್ಜಿ ಹಾಕಿದ್ದರು. ಅದರಂತೆ ಸ್ಕ್ಯಾನ್ ಕಾಪಿ ಬಂದಿದೆ. ಆದರೆ ಆ ಉತ್ತರ ಪತ್ರಿಕೆಯ ಮಧ್ಯೆ 2-3 ಪುಟಗಳೇ ಇಲ್ಲ!
“ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆಯಲು ಅವಕಾಶ ನೀಡಿದ್ದರೂ ಯಾವುದೇ ಲಾಭವಿಲ್ಲದಂತಾಗಿದೆ. ಅಂಕದ ನಿರೀಕ್ಷೆಯಲ್ಲಿದ್ದ ಮಕ್ಕಳಿಗೆ ಈ ಪ್ರತಿ ನೋಡಿ ತಲೆಬಿಸಿ ಆಗುವಂತಾಗಿದೆ. ಇಲಾಖಾ ಅಧಿಕಾರಿಗಳ ಕಾರ್ಯದಿಂದಾಗಿ ಮಕ್ಕಳು ಸಂಕಷ್ಟ ಎದುರಿಸುವಂತಾಗಿದೆ ಎನ್ನುತ್ತಾರೆ ವಿದ್ಯಾರ್ಥಿಯೊಬ್ಬರ ಪೋಷಕರು.
ಸಹಾಯಕ್ಕೆ ಬಾರದ ಹೆಲ್ಪ್ ಲೈನ್!
ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿ ಪಡೆಯುವಲ್ಲಿ ಸಮಸ್ಯೆ ಆದವರು ವೆಬ್‌ಸೈಟ್‌ನಲ್ಲಿ ಗೊತ್ತುಪಡಿಸಿರುವ ಇಲಾಖೆಯ “ಹೆಲ್ಪ್ ಲೈನ್’ ಸಂಪರ್ಕಿಸಬಹುದು ಎಂದು ಪಿಯು ಇಲಾಖೆ ತಿಳಿಸಿತ್ತು. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಹೀಗಾಗಿ ಮಕ್ಕಳು ಸಮಸ್ಯೆ ಎದುರಿಸುವ ಪರಿಸ್ಥಿತಿಯಿದೆ. ಅಂತೂ ಇಲಾಖೆಯ ಸ್ಕ್ಯಾನ್ ಕಾಪಿ ನೋಡಿ ವಿದ್ಯಾರ್ಥಿಗಳು ಗಾಬರಿಯಾಗಿದ್ದಾರೆ.
ಕಳೆದೆರಡು ದಿನಗಳಿಂದ ರಜೆ ಇದ್ದ ಕಾರಣ ಹೆಲ್ಪ್ ಲೈನ್ ಸಹಾಯ ಸಿಗದೆ ಇದ್ದಿರಬಹುದು. ಇಂದಿನಿಂದ ಆ ಸಮಸ್ಯೆ ಎದುರಾಗದು. ಆದ್ದರಿಂದ ಸ್ಕ್ಯಾನ್ ಪ್ರತಿಯಲ್ಲಿ ಸಮಸ್ಯೆ ಇದ್ದವರು ಇಲಾಖೆಯನ್ನು ಸಂಪರ್ಕಿಸಬಹುದು. ವೆಬ್‌ಸೈಟ್‌ನಲ್ಲಿರುವ ಇಲಾಖೆಯ ಹೆಲ್ಪ್ ಲೈನ್ ಮೂಲಕ ದೂರು ನೀಡಬಹುದು. ಈ ಕುರಿತ ದೂರುಗಳಿದ್ದರೆ ಪರಿಶೀಲನೆಗೆ ಸೂಚಿಸಲಾಗುವುದು.
– ಗೋಪಾಲಕೃಷ್ಣ , ನಿರ್ದೇಶಕರು, ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.