ದ್ವಿತೀಯ ಏಕದಿನ ಪಂದ್ಯ : ಶ್ರೀಲಂಕಾ ವಿರುದ್ಧ ಭಾರತ ಸರಣಿ ಜಯಭೇರಿ
Team Udayavani, Jul 20, 2021, 11:37 PM IST
ಕೊಲಂಬೊ : ದೀಪಕ್ ಚಹರ್ ಅವರ ದಿಟ್ಟ ಬ್ಯಾಟಿಂಗ್ ಹೋರಾಟದ ಫಲದಿಂದ ಶ್ರೀಲಂಕಾ ಎದುರಿನ ದ್ವಿತೀಯ ಏಕದಿನ ಪಂದ್ಯವನ್ನು 3 ವಿಕೆಟ್‌ಗಳಿಂದ ರೋಚಕವಾಗಿ ಗೆದ್ದ ಭಾರತ ಸರಣಿ ಜಯಭೇರಿ ಮೊಳಗಿಸಿದೆ.
ಶ್ರೀಲಂಕಾ 9 ವಿಕೆಟಿಗೆ 275 ರನ್ ಪೇರಿಸಿದರೆ, ಭಾರತ 49.1 ಓವರ್‌ಗಳಲ್ಲಿ 7 ವಿಕೆಟಿಗೆ 277 ರನ್ ಬಾರಿಸಿ ಅಮೋಘ ಗೆಲುವು ಸಾಧಿಸಿತು. ಆಗ ದೀಪಕ್ ಚಹರ್ 82 ಎಸೆತಗಳಿಂದ 69 ರನ್ (7 ಫೋರ್, 1 ಸಿಕ್ಸರ್) ಬಾರಿಸಿ ಅಜೇಯರಾಗಿದ್ದರು. ಉತ್ತಮ ಬೆಂಬಲ ನೀಡಿದ ಭುವನೇಶ್ವರ್ 19 ರನ್ ಕೊಡುಗೆ ಸಲ್ಲಿಸಿದರು. 36ನೇ ಓವರ್ ವೇಳೆ 7ಕ್ಕೆ 193 ರನ್ ಗಳಿಸಿ ಸೋಲಿನಂಚಿನಲ್ಲಿದ್ದ ಭಾರತವನ್ನು ಚಹರ್-ಭುವನೇಶ್ವರ್ ಸೇರಿಕೊಂಡು ಮೇಲೆತ್ತಿದ ರೀತಿ ಅಸಾಮಾನ್ಯ ಸಾಹಸಕ್ಕೊಂದು ನಿದರ್ಶನವೆನಿಸಿತು. ಇವರಿಬ್ಬರಿಂದ ಮುರಿಯದ 8ನೇ ವಿಕೆಟಿಗೆ 84 ರನ್ ಹರಿದು ಬಂತು.
ಸೂರ್ಯಕುಮಾರ್ ಯಾದವ್ ಕೂಡ ಅರ್ಧ ಶತಕ ಬಾರಿಸಿ (53) ಆಸರೆಯಾದರು. ಮನೀಷ್ ಪಾಂಡೆ 37 ರನ್ ಮಾಡಿದರು. ಕಪ್ತಾನ ಧವನ್ ಗಳಿಕೆ 29 ರನ್. ಆದರೆ ಪೃಥ್ವಿ ಶಾ (13), ಇಶಾನ್ ಕಿಶನ್ (1), ಹಾರ್ದಿಕ್ ಪಾಂಡ್ಯ (0) ವಿಫಲರಾದರು.
ಶ್ರೀಲಂಕಾ ಪರ ಓಪನರ್ ಆವಿಷ್ಕ ಫೆರ್ನಾಂಡೊ (50), ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್ ಚರಿತ ಅಸಲಂಕ (65) ಅರ್ಧ ಶತಕ ಬಾರಿಸಿದರು. ರವಿವಾರ ಕಡೆಯ ಹಂತದಲ್ಲಿ ಸಿಡಿದು ನಿಂತ ಚಮಿಕ ಕರುಣರತ್ನೆ ಮತ್ತೂಂದು ಉಪಯುಕ್ತ ಇನ್ನಿಂಗ್ಸ್ ಮೂಲಕ ಅಜೇಯ 44 ರನ್ ಕೊಡುಗೆ ಸಲ್ಲಿಸಿದರು. ಆದರೆ ಮುನ್ನೂರರ ಗಡಿ ದಾಟುವ ಲಂಕೆಯ ಯೋಜನೆ ಕೈಗೂಡಲಿಲ್ಲ.
ಚಹಲ್ ಅವಳಿ ಬೇಟೆ
ಚಹಲ್ 14ನೇ ಓವರ್‌ನ ಸತತ ಎಸೆತಗಳಲ್ಲಿ ಮಿನೋದ್ ಭನುಕ (36) ಮತ್ತು ಭನುಕ ರಾಜಪಕ್ಷೆ (0) ಅವರನ್ನು ಪೆವಿಲಿಯನ್ನಿಗೆ ರವಾನಿಸಿ ಭಾರತಕ್ಕೆ ಮೇಲುಗೈ ಒದಗಿಸಿದರು. ಮೊದಲ ವಿಕೆಟಿಗೆ ಲಂಕಾ 13.2 ಓವರ್‌ಗಳಿಂದ 77 ರನ್ ಗಳಿಸಿ ಓಟ ಬೆಳೆಸಿತ್ತು. ಚಹಲ್ ಸಾಧನೆ 50ಕ್ಕೆ 3. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಭುವನೇಶ್ವರ್ ಇಲ್ಲಿ 54ಕ್ಕೆ 3 ವಿಕೆಟ್ ಕಿತ್ತು ಲಯ ಕಂಡುಕೊಂಡರು. ಪೇಸರ್ ದೀಪಕ್ ಚಹರ್ ಉಳಿದೆರಡು ವಿಕೆಟ್ ಉರುಳಿಸಿದರು. ಕುಲದೀಪ್‌ಗೆ ಯಶಸ್ಸು ಸಿಗಲಿಲ್ಲ.
ಸತತ ವಿಕೆಟ್ ಪತನದಿಂದ ಆರಂಭಕಾರ ಆವಿಷ್ಕ ವಿಚಲಿತರಾಗಲಿಲ್ಲ. ಧನಂಜಯ ಡಿ ಸಿಲ್ವ (32) ಜತೆಗೂಡಿ 3ನೇ ವಿಕೆಟಿಗೆ ಮತ್ತೂಂದು ಉಪಯುಕ್ತ ಜತೆಯಾಟದಲ್ಲಿ ಪಾಲ್ಗೊಂಡು 47 ರನ್ ಒಟ್ಟುಗೂಡಿಸಿದರು. ಭುವನೇಶ್ವರ್ ಈ ಜೋಡಿಯನ್ನು ಬೇರ್ಪಡಿಸಿದರು. ಆವಿಷ್ಕ ಅವರ 50 ರನ್ 71 ಎಸೆತಗಳಿಂದ ಬಂತು. 4 ಬೌಂಡರಿ ಹಾಗೂ ಇನ್ನಿಂಗ್ಸಿನ ಏಕೈಕ ಸಿಕ್ಸರ್ ಇದರಲ್ಲಿತ್ತು.
ಚೊಚ್ಚಲ ಫಿಫ್ಟಿ ಹೊಡೆದ ಅಸಲಂಕ ವಿಕೆಟ್ ಕೂಡ ಭುವನೇಶ್ವರ್ ಪಾಲಾಯಿತು. ಅವರ 65 ರನ್ 68 ಎಸೆತಗಳಿಂದ ಬಂತು (6 ಫೋರ್). ಕರುಣರತ್ನೆ 33 ಎಸೆತಗಳಿಂದ ಅಜೇಯ ಇನ್ನಿಂಗ್ಸ್ ಕಟ್ಟಿದರು (5 ಬೌಂಡರಿ).
ಈ ಪಂದ್ಯಕ್ಕಾಗಿ ಭಾರತ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ. ಶ್ರೀಲಂಕಾ ಇಸುರು ಉದಾನ ಬದಲು ಕಸುನ್ ರಜಿತ ಅವರನ್ನು ಆಡಿಸಿತು.
ಸ್ಕೋರ್‌ಪಟ್ಟಿ
ಶ್ರೀಲಂಕಾ
ಆವಿಷ್ಕ ಫೆರ್ನಾಂಡೊ ಸಿ ಕೃಣಾಲ್ ಬಿ ಭುವನೇಶ್ವರ್ 50
ಮಿನೋದ್ ಭನುಕ ಸಿ ಪಾಂಡೆ ಬಿ ಚಹಲ್ 36
ಭನುಕ ರಾಜಪಕ್ಷೆ ಸಿ ಇಶಾನ್ ಬಿ ಚಹಲ್ 0
ಧನಂಜಯ ಡಿ ಸಿಲ್ವ ಸಿ ಧವನ್ ಬಿ ಚಹರ್ 32
ಚರಿತ ಅಸಲಂಕ ಸಿ ಪಡಿಕ್ಕಲ್ ಬಿ ಭುವನೇಶ್ವರ್ 65
ದಸುನ್ ಶಣಕ ಬಿ ಚಹರ್ 16
ವನಿಂದು ಹಸರಂಗ ಬಿ ಚಹರ್ 8
ಚಮಿಕ ಕರುಣರತ್ನೆ ಔಟಾಗದೆ 44
ದುಷ್ಮಂತ ಚಮೀರ ಸಿ ಪಡಿಕ್ಕಲ್ ಬಿ ಭುವನೇಶ್ವರ್ 2
ಲಕ್ಷಣ ಸಂದಕನ್ ರನೌಟ್ 0
ಕಸುನ್ ರಜಿತ ಔಟಾಗದೆ 1
ಇತರ 21
ಒಟ್ಟು (9 ವಿಕೆಟಿಗೆ) 275
ವಿಕೆಟ್ ಪತನ: 1-77, 2-77, 3-124, 4-134, 5-172, 6-194, 7-244, 8-264, 9-266.
ಬೌಲಿಂಗ್:
ಭುವನೇಶ್ವರ್ ಕುಮಾರ್ 10-0-54-3
ದೀಪಕ್ ಚಹರ್ 8-0-53-2
ಹಾರ್ದಿಕ್ ಪಾಂಡ್ಯ 4-0-20-0
ಯಜುವೇಂದ್ರ ಚಹಲ್ 10-1-50-3
ಕುಲದೀಪ್ ಯಾದವ್ 10-0-55-0
ಕೃಣಾಲ್ ಪಾಂಡ್ಯ 8-0-37-0
ಭಾರತ
ಪೃಥ್ವಿ ಶಾ ಬಿ ಹಸರಂಗ 13
ಶಿಖರ್ ಧವನ್ ಎಲ್‌ಬಿಡಬ್ಲ್ಯು ಹಸರಂಗ 29
ಇಶಾನ್ ಕಿಶನ್ ಬಿ ರಜಿತ 1
ಮನೀಷ್ ಪಾಂಡೆ ರನೌಟ್ 37
ಸೂರ್ಯಕುಮರ್ ಎಲ್‌ಬಿಡಬ್ಲ್ಯು ಸಂದಕನ್ 53
ಹಾರ್ದಿಕ್ ಪಾಂಡ್ಯ ಸಿ ಧನಂಜಯ ಬಿ ಶಣಕ 0
ಕೃಣಾಲ್ ಪಾಂಡ್ಯ ಬಿ ಹಸರಂಗ 35
ದೀಪಕ್ ಚಹರ್ ಔಟಾಗದೆ 69
ಭುವನೇಶ್ವರ್ ಔಟಾಗದೆ 19
ಇತರ 21
ಒಟ್ಟು (49.1 ಓವರ್‌ಗಳಲ್ಲಿ 7 ವಿಕೆಟಿಗೆ) 277
ವಿಕೆಟ್ ಪತನ: 1-28, 2-39, 3-65, 4-115, 5-116, 6-160, 7-193.
ಬೌಲಿಂಗ್:
ಕಸುನ್ ರಜಿತ 7.1-0-53-1
ದುಷ್ಮಂತ ಚಮೀರ 10-0-65-0
ವನಿಂದು ಹಸರಂಗ 10-0-37-3
ಲಕ್ಷಣ ಸಂದಕನ್ 10-0-71-1
ಚಮಿಕ ಕರುಣರತ್ನೆ 6-1-26-0
ದಸುನ್ ಸಣಕ 3-0-10-1
ಧನಂಜಯ ಡಿ ಸಿಲ್ವ 3-0-10-0
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.